Advertisement
ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

ಪದಗಳಾಗದ ಅವರ್ಣನೀಯ ಆನಂದ..: ಆಶಾ ಜಗದೀಶ್ ಅಂಕಣ

“ಅಕ್ಬರ್ ಅರಮನೆಗೆ ಮರಳಿ ಹಲವಾರು ದಿನಗಳಾದರೂ ಹರಿದಾಸರು ಅವರ ಸ್ಮೃತಿಯಿಂದ ದೂರವಾಗುವುದೇ ಇಲ್ಲ… ಕೂತರೂ ನಿಂತರೂ ಹರಿದಾಸರೇ… ಒಂದು ದಿನ ಅಕ್ಬರ್ “ತಾನಸೇನ್ ಅಂತಹಾ ಗುರುಗಳಿಂದ ಪಾಠ ಕಲಿತ ನಿಮ್ಮ ಗಾಯನವೇಕೆ ಆ ಮಟ್ಟಕ್ಕಿಲ್ಲ” ಎಂದು ಕೇಳುತ್ತಾರೆ. ಆಗ ತಾನಸೇನ್ ಹೇಳುತ್ತಾರೆ “ಜಹಾಪನಾ ನಾನು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಹಾಡುತ್ತೇನೆ, ಹಾಗಾಗಿ ನನ್ನ ಕಲೆಗಾರಿಕೆ ಆ ದೈವತ್ವಕ್ಕೆ ಏರಲಿಲ್ಲ.”

Read More

ನಾದಾನುಸಂಧಾನ…: ಆಶಾ ಜಗದೀಶ್ ಅಂಕಣ

“ಸಂಗೀತ ಗಂಧರ್ವ ಲೋಕದ ಕೊಡುಗೆಯಿರಬೇಕು. ಯಾರದೇ ಮನಸು ಎಷ್ಟೇ ದುಃಖದಲ್ಲಿರಲಿ ಎಂಥದೇ ನೋವಿರಲಿ ಅದನ್ನು ಮಾಯಿಸುವ ಶಕ್ತಿ ಸಂಗೀತಕ್ಕಿದೆ. ಹಾಡುತ್ತಾ ಕುಳಿತರೆ ಪ್ರಪಂಚವೇ ಮರೆತು ಹೋಗುತ್ತದೆ. ಒಂದೊಂದು ರಾಗವೂ ವಿಶಿಷ್ಟ. ಕೆಲ ರಾಗಗಳಿಗೆ ರೋಗಗಳನ್ನು ವಾಸಿಮಾಡುವ ಚಿಕಿತ್ಸಕ ಶಕ್ತಿಯೂ ಇದೆ. ನನ್ನಿಷ್ಟದ ಬಹಳ ಚಂದದ ರಾಗಗಳ ದೊಡ್ಡದೊಂದು ಪಟ್ಟಿಯೇ ಇದೆ.”

Read More

ಅಸ್ಪೃಶ್ಯರು : ಆಶಾ ಜಗದೀಶ್ ಅನುವಾದಿಸಿದ ರಸ್ಕಿನ್ ಬಾಂಡ್ ಬರೆದ ಮೊದಲ ಕತೆ.

“ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು. ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ. ಅವನಿಗೆ ನನ್ನದೇ ವಯಸ್ಸು… ಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು.”

Read More

ನಿರಾಕಾರಣವಾಗಿ ಹೃದಯದಿಂದ ಹೊರಟ ಕಣ್ಣೀರು….: ಆಶಾ ಜಗದೀಶ್ ಅಂಕಣ

“ಇಲ್ಲಿನ ತಾಯಿ ಏಕೆ ಮುಖ್ಯವಾಗುತ್ತಾಳೆಂದರೆ, ಇವಳು ತನ್ನ ಬಾಲ್ಯವನ್ನಾಗಲೀ, ತಾರುಣ್ಯವನ್ನಾಗಲೀ ಅನುಭವಿಸಿ ಕಂಡವಳಲ್ಲ. ಜಗತ್ತನ್ನು ಬೆರಗಿನಿಂದ ಕಂಡು ಅರಿತವಳಲ್ಲ. ನಲವತ್ತು ವರ್ಷ ವಯಸ್ಸಿಗೇ ತನ್ನನ್ನು ತಾನು ಮುದುಕಿ ಎಂದುಕೊಂಡುಬಿಟ್ಟವಳು. ತನ್ನ ನಲವತ್ತು ವರ್ಷ ವಯಸ್ಸನ್ನು ದಾಟಿದ ಮೇಲೆ ಬದುಕನ್ನು ಅರ್ಥ ಮಾಡಿಕೊಂಡವಳು. ಆಗ ಅವಳು ತನ್ನ ಬದುಕಿನಲ್ಲಿ ತಾನು ಏನನ್ನು ಕಳೆದುಕೊಂಡಿದ್ದಳೋ ಅದನ್ನು ಹುಡುಕಿಕೊಂಡು ಹೊರಡುತ್ತಾಳೆ.”

Read More

ತನ್ನ ನೂಲ ತಾನೇ ಸುತ್ತಿ…. : ಆಶಾ ಜಗದೀಶ್ ಅಂಕಣ

“ವಿಮಾನ ಹತ್ತಿದಾಗ ಆಕಾಶವೆಂಬ ಅವಕಾಶದಿಂದ ಭೂಮಿಯನ್ನು ಕಾಣುವ ನಮಗೆ ಅದರ ನೈಸರ್ಗಿಕ ಭೌತಿಕ ಅಂಶಗಳು ಅಚ್ಚರಿ ಉಂಟುಮಾಡುವಷ್ಟೇ ಮನುಷ್ಯನ ರೀತಿನೀತಿಗಳೂ ಅಚ್ಚರಿ ಹುಟ್ಟಿಸುತ್ತವೆ. ಜೆಟ್ ಆಕಾಶಕ್ಕೆ ಚಿಮ್ಮಿ, ಒಂದು ಮೈಲಿ ಎತ್ತರದಿಂದ ಬರೀ ಆರಿಂಚಿನಷ್ಟು ಕಾಣುವಾಗ, ಕವಿಗೆ ನಗರಗಳು ಯಾಕೆ ಹೀಗೆ ಹುಟ್ಟಿ ಬೆಳೆದು ಬಂದಿವೆ ಎಂದು ತಿಳಿಯುತ್ತದೆ. ಮತ್ತೆ ಭೂಮಿಯ ಮೇಲಿನ..”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ