ಚಾಲೆಂಜ್ ಗೆಲ್ಲೋಕೆ ತಿನ್ನುತ್ತಿದ್ದ ರೋಚಕ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ
ನಾನು ಮೆಸ್ ಬಿಲ್ ಕೊಡುವುದು ಒಂದೆರಡು ತಿಂಗಳು ತಡವಾಯ್ತು. ಆಗ ಚೆನ್ನಕೇಶವಣ್ಣನ ಸಿಟ್ಟು ನನ್ನ ಮೇಲೆ ತಾರಕಕ್ಕೇರಿತ್ತು. ಈ ವಿಷಯವನ್ನು ಚೆನ್ನಕೇಶನಣ್ಣನ ಮನೆಯವರ ಬಳಿ ಹೇಳಿದೆ. ಆಗ ಅವರು ಅವರ ಬಳಿ ಇದ್ದ ಹಣವನ್ನೇ ಕೊಟ್ಟು ಮೆಸ್ ಬಿಲ್ ಕೊಡು ಎಂದು ತಿಳಿಸಿದ್ದರು. ಹೀಗೆ ಅವರು ಮಾತೃಹೃದಯಿಯಾಗಿದ್ದರು. ಅವರು ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಯೇ ಇರಲಿಲ್ಲ. ತುಂಬಾ ತಾಳ್ಮೆ ಇತ್ತು. ನಗುಮೊಗದ ಸ್ವಭಾವ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ