ಇಂಗ್ಲೀಷ್ ಪಾಠ ಹಾಗೂ ಜಲಕಂಟಕದ ಕಹಿ ನೆನಪು: ಬಸವನಗೌಡ ಹೆಬ್ಬಳಗೆರೆ ಸರಣಿ
ಇವರ ಸ್ವಂತ ಮಕ್ಕಳು ಆಗಿನ ಕಾಲಕ್ಕೆ ಡಾಕ್ಟರ್, ಇಂಜಿನಿಯರ್, ಲೆಕ್ಚರ್ ಸ್ಥಾನ ಅಲಂಕರಿಸಿದ್ದರೂ ಇವರು ಮಾತ್ರ ತುಂಬಾ ಸಿಂಪಲ್ ಆಗಿ ಇದ್ರು. ಮನೇಲಿದ್ದಾಗ ವ್ಯವಸಾಯದ ಕೆಲಸವನ್ನು ಮಾಡ್ತಿದ್ರು. ಟ್ಯೂಷನ್ ಬಗ್ಗೆ ಇವರು ‘ಸ್ವ ಅಧ್ಯಯನವೇ ಮುಖ್ಯ’ ಎಂದು ಹೇಳುತ್ತಿದ್ದರು. ಇಂಗ್ಲೀಷ್ ಪದದ ಕನ್ನಡ ಅರ್ಥ ಬರೆಸಿ ಅರ್ಥ ಸಮೇತ ಸ್ಪೆಲ್ಲಿಂಗ್ ಕೇಳೋದು, ಪಾಠ ಓದಿಸೋದು, ಪ್ರಶ್ನೋತ್ತರ ಕೇಳೋದು ಹೀಗೆ ಪ್ರಾಮಾಣಿಕವಾಗಿ ಬೋಧಿಸ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ