ಭೂಮಿ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬ: ಭವ್ಯ ಟಿ.ಎಸ್. ಸರಣಿ
ಆಶ್ವಯುಜ ಮಾಸದಲ್ಲಿ ಬರುವ ಭೂಮಿ ಹುಣ್ಣಿಮೆಯ ಕುರಿತು ಹೇಳುತ್ತಿದ್ದೇನೆ. ಮಲೆನಾಡಿಗರ ಭಾಷೆಯಲ್ಲಿ ಇದು ಭೂಮಣಿ ಹಬ್ಬ. ಭೂಮಿಹುಣ್ಣಿಮೆ ಎಂದ ಕೂಡಲೇ ನನ್ನ ಮನ ನಿಲ್ಲದೆ ತೀರ್ಥಹಳ್ಳಿಯ ಸಮೀಪದ ನನ್ನ ಅಜ್ಜಿ ಮನೆಯೆಡೆಗೆ ಓಡುತ್ತದೆ. ನಮ್ಮ ಅಜ್ಜಿ ಈ ಹಬ್ಬವನ್ನು ತುಂಬಾ ಶ್ರದ್ಧೆಯಿಂದ ಆಚರಿಸುತ್ತಿದ್ದರು. ಹಬ್ಬದ ಮುನ್ನಾ ದಿನ ಗದ್ದೆಯ ಅಂಚಿನ ಒಂದು ಭಾಗವನ್ನು ಶುಚಿಗೊಳಿಸಿ, ಸಗಣಿ ಸಾರಿಸಿ, ಬಾಳೆಕಂಬ, ತೋರಣಗಳಿಂದ ಅಲಂಕರಿಸಿ ಬರುತ್ತಾರೆ. ಅಂದು ಮನೆಯ ಮಕ್ಕಳು ಒಂದು ಬುಟ್ಟಿ ಹಿಡಿದು ಸುತ್ತಮುತ್ತ ತಿರುಗಿ ಬಗೆಬಗೆಯ ಸೊಪ್ಪುಗಳನ್ನು ಆಯ್ದು ತರಬೇಕು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ