Advertisement

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಮುದ ತುಂಬಿದ ಮಲೆನಾಡಿನ ಮದ್ವೆಮನೆ:‌ ಭವ್ಯ ಟಿ.ಎಸ್. ಸರಣಿ

ಗಂಡು ಮತ್ತು ಹೆಣ್ಣಿನ ಮನೆಯ ಒಂದು ಗೋಡೆಯ ಮೇಲೆ ಹಸೆ ಕಲಾವಿದರು ಚಿತ್ತಾರ ಬಿಡಿಸಿ ಗಂಡು ಮತ್ತು ಹೆಣ್ಣಿನ ಹೆಸರು ಬರೆದಿರುತ್ತಾರೆ. ಇದನ್ನು ಹಸೆಗೋಡೆ ಎನ್ನುತ್ತಾರೆ. ಚಪ್ಪರದ ದಿನ, ಮದುವೆ ಮಂಟಪಕ್ಕೆ ಹೊರಡಿಸುವ ಮೊದಲು, ಮದುವೆಯ ನಂತರ ಮದುಮಕ್ಕಳನ್ನು ಈ ಗೋಡೆಯ ಕೆಳಗೆ ಕೂರಿಸಿ ಬಂಧುಗಳೆಲ್ಲರೂ ಅಕ್ಷತೆ ಹಾಕಿ ಹರಸುತ್ತಾರೆ. ಈ ಹಸೆ ಚಿತ್ತಾರವು ಮದುವೆಯ ಸವಿನೆನಪಾಗಿ ಶಾಶ್ವತವಾಗಿ ಆ ಮನೆಯ ಗೋಡೆಯ ಮೇಲೆ ಉಳಿದಿರುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಮಲೆಯ ಮಕ್ಕಳ ಬೇಸಿಗೆ ರಜಾ – ಮಜಾ: ಭವ್ಯ ಟಿ.ಎಸ್. ಸರಣಿ

ಅಜ್ಜಿ ಮನೆಯ ಹತ್ತಿರ ಒಂದು ಹಳ್ಳ ಇತ್ತು. ಅಲ್ಲಿಗೆ ಅಜ್ಜಿ ಬಟ್ಟೆಗಳನ್ನು ತೊಳೆಯಲು ತೆಗೆದುಕೊಂಡು ಹೋದರೆ ನಾವು ಹಿಂದೆ ಹೊರಟುಬಿಡುತ್ತಿದ್ದೆವು. ಅಜ್ಜಿಯೊಂದಿಗೆ ಬಟ್ಟೆ ತೊಳೆಯುವುದು ಕೂಡ ನಮಗೆ ಒಂದು ಆಟವಾಗಿತ್ತು. ಜೊತೆಗೆ ನೀರಾಟವಾಡಲು ಒಳ್ಳೆಯ ಅವಕಾಶ. ಒಬ್ಬರಿಗೊಬ್ಬರು ನೀರೆರೆಚುತ್ತಾ ಸಂಭ್ರಮಿಸುತ್ತಿದ್ದೆವು. ಅಜ್ಜಿ, ನೀರ್ ಕಂಡ್ರೆ ಸಾಕು ಈ ಹುಡ್ಗುರನ್ನ ಹಿಡಿಯೋರೇ ಇಲ್ಲ… ಅಂತ ಬೈದು ನಮ್ಮನ್ನೆಲ್ಲಾ ಕೂಗಿ ಕರೆದು ಮನೆಗೆ ಕರೆತರುತ್ತಿದ್ದಳು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಕಡುಬಿನ ಪುರಾಣ: ಭವ್ಯ ಟಿ.ಎಸ್. ಸರಣಿ

ಮಳೆಗಾಲದಲ್ಲಿ ಮಲೆನಾಡಿನ ಹಸು, ಎತ್ತುಗಳಿಗೆ ಹುರುಳಿಕಾಳು ಬೇಯಿಸಿ ಕೊಡುತ್ತಾರೆ. ಈ ಹುರುಳಿ ಬೇಯಿಸಿದ ನೀರಿಗೆ ಹುರುಳಿಕಟ್ಟು ಎನ್ನುತ್ತಾರೆ. ಇದರ ರುಚಿ ಬಲ್ಲವರೇ ಬಲ್ಲರು. ಕುದ್ದು ದಪ್ಪಗಾಗಿ ಹದಗೊಂಡ ಹುರುಳಿಕಟ್ಟಿಗೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನ ಒಗ್ಗರಣೆ ಕೊಟ್ಟು, ಸ್ವಲ್ಪ ವಾಟೆಹುಳಿ ಅಥವಾ ಹುಣಸೆಹಣ್ಣು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ಘಮಘಮಿಸುವ ಹುರುಳಿಕಟ್ಟಿನ ಸಾರು ತಯಾರಾಗುತ್ತದೆ. ಇದನ್ನು ಕಡುಬಿಗೆ ಕಲಸಿ ತಿಂದರೆ ಸ್ವರ್ಗಕ್ಕೆ ಮೂರೇ‌ ಗೇಣು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಭವ್ಯ ಟಿ.ಎಸ್. ಹೊಸ ಸರಣಿ “ಮಲೆನಾಡಿನ ಹಾಡು-ಪಾಡು” ಶುರು

ದಟ್ಟವಾಗಿ ಹಬ್ಬಿರುವ ಕಾಡಿನ ಹಸಿರ ನಡುವೆ ಸಂಚರಿಸುತ್ತಿರುವಾಗ ಏನೋ ಶಬ್ದ ಕೇಳಿ ಬೆಚ್ಚಿದಳು. ಅಲ್ವೇ…ಇಲ್ಲಿ ಕಾಡುಪ್ರಾಣಿಗಳಿರೋದಿಲ್ವ?? ಆಶ್ಚರ್ಯದಿಂದ ಕೇಳಿದಳು. ಇವೆ. ಆದರೆ ಅಷ್ಟೊಂದೇನೂ ಇಲ್ಲ ಅಂದೆ. ಆದರೂ ಅವಳಿಗೆ ಭಯ. ಅದು ಹೇಗೆ ನೀವೆಲ್ಲಾ ಈ ಒಂಟಿಮನೆಗಳಲ್ಲಿ ನಿರ್ಭೀತಿಯಿಂದ ಇರುತ್ತೀರಿ. ನಮ್ಮ ಕಡೆ ಮನೆಗಳೆಲ್ಲಾ ಒತ್ತೊತ್ತಾಗಿರುತ್ತವೆ. ಸುತ್ತಮುತ್ತ ಜನರಿರುತ್ತಾರೆ. ನಿಮ್ಮ ಕಡೆ ಜನ ತುಂಬಾ ಧೈರ್ಯವಂತರು.. ಅಂತ ಮೆಚ್ಚುಗೆ ವ್ಯಕ್ತಪಡಿಸಿದಳು. ನಾನು ಏನಾದರೂ ಇಲ್ಲಿ ಇದ್ದಿದ್ದರೆ ಎಲ್ಲಿ ಹುಲಿ ಬಂತೋ, ಕರಡಿ ಬಂತೋ ಎಂದು ಹೆದರಿ ಹೆದರಿ ಸಾಯುತ್ತಿದ್ದೆ… ಅಂದಳು. ಇಬ್ಬರೂ ನಗುತ್ತಾ ಸಾಗಿದೆವು.
ಭವ್ಯ ಟಿ.ಎಸ್. ಹೊಸ ಸರಣಿ “ಮಲೆನಾಡಿನ ಹಾಡು-ಪಾಡು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ನಮ್ಮೂರ ಮಳೆಗಾಲದ ರಸದೌತಣ: ಭವ್ಯ ಟಿ.ಎಸ್.‌ ಬರಹ

ವಿದ್ಯುತ್ ಇಲ್ಲದ ರಾತ್ರಿಗಳು, ನೆಟ್ವರ್ಕ್ ಇಲ್ಲದೆ ಲೋಕದ ಸಂಪರ್ಕ ಕಡಿದುಕೊಂಡ ಹಗಲುಗಳು. ಇದ್ದಕ್ಕಿದ್ದಂತೆ ಬೀಸುವ ಬಿರುಗಾಳಿ, ಉರುಳಿ ಬೀಳುವ ಮರಗಳು. ಕುಸಿದು ಬೀಳುವ ಗುಡ್ಡ. ಹೀಗೆ ಮಳೆ ಎಂದರೆ ಸಂತಸ, ಸೌಂದರ್ಯಗಳ ಜೊತೆಗೆ ಭಯಾನಕತೆಗಳ ಸಂಮಿಶ್ರಣ. ಕೆಲವೊಮ್ಮೆ ಈ ಮಳೆ ಜಿಗುಪ್ಸೆ ಬೇಸರವೆನಿಸಿದ್ದೂ ಇದೆ. ಆದರೆ‌‌‌ ಮತ್ತೆ ಮತ್ತೆ ಈ ಮನ ಪ್ರತಿ ವರ್ಷದ ವರ್ಷಧಾರೆಗೆ ಹಪಹಪಿಸುತ್ತದೆ.
ಮಲೆನಾಡಿನ ಮಳೆಯ ದಿನಗಳ ಕುರಿತು ಭವ್ಯ ಟಿ.ಎಸ್‌. ಬರಹ ನಿಮ್ಮ ಓದಿಗೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ