ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್ ಜಯಣ್ಣ ಬರಹ
ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ ತೋರುತ್ತದೆ.
ಕನ್ನಡ ಭಾಷೆ ಮತ್ತು ಅದರ ಬಳಕೆಯ ಕುರಿತು ದರ್ಶನ್ ಜಯಣ್ಣ ಬರಹ