ಹೌದು.. ಇಡೀ ಜಗತ್ತೇ ಸ್ಮಾರ್ಟಾಗ್ತಾ ಇದೆ!
ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್‌ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”