ಇಂದಿನ ಕನ್ನಡ ಅಧ್ಯಾಪಕರು ಮತ್ತು ಇಂಗ್ಲಿಷ್ ಭಾಷೆ: ಎಲ್.ಜಿ.ಮೀರಾ ಅಂಕಣ
ಬರಬರುತ್ತಾ ಓದು, ವ್ಯುತ್ಪತ್ತಿ, ಭಾಷಾ ಪ್ರೌಢಿಮೆಗಳ ಬಗೆಗಿನ ಆಸ್ಥೆ ಕಡಿಮೆಯಾಗಿ `ಹಾಗೂ ಹೀಗೂ ಒಂದಿಷ್ಟು ಪಾಠ ಮಾಡೋದು, ಸಂತೆ ಹೊತ್ತಿಗೆ ಮೂರು ಮೊಳ ಆದ್ರೆ ಸಾಕು’ ಎಂಬ ಮನಃಸ್ಥಿತಿ ಮೂಡಿತು. ಇದೊಂದು ರೀತಿಯ ಸುಲಭೀಕರಣ. ಇದಕ್ಕೆ ಕನ್ನಡ ಅಧ್ಯಾಪಕರು ಮಾತ್ರ ಕಾರಣ ಅಲ್ಲ. ಜಾಗತೀಕರಣದ ನಂತರ, ಭಾರತ ದೇಶದ ಬದುಕು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳವಾಗಿ ಬದಲಾಯಿತು. ಉಪಗ್ರಹ ಪ್ರಸಾರದ ಅಂತಾರಾಷ್ಟ್ರೀಯ ಚಲನಚಿತ್ರ ವಾಹಿನಿಗಳು, ಅಂತರ್ಜಾಲ, ಮುಂದೆ ಸರ್ವವ್ಯಾಪಿಯಾದ ಚಲನವಾಣಿಗಳ ಬಳಕೆ ಇವುಗಳಿಂದಾಗಿ ಓದುಸಂಸ್ಕೃತಿ ಹಿಂದೆ ಸರಿದು ನೋಡುಸಂಸ್ಕೃತಿ ಮುನ್ನೆಲೆಗೆ ಬಂದಿತಲ್ಲವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
