Advertisement

ಕೆಂಡಸಂಪಿಗೆ

 ಬದಲಾಗಿದೆ ಕನ್ನಡ ನಾಡು, ಡಿಜಿಟಲ್ ಕರ್ನಾಟಕದ ಹಾಡು ಪಾಡು: ಎಲ್.ಜಿ.ಮೀರಾ ಅಂಕಣ

ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲ ನಾಡುಗಳಂತೆ ನಮ್ಮ ಕನ್ನಡ ನಾಡು ಸಹ ಬದಲಾಗುತ್ತಿದೆ. ನಮಗೆ ಬೇಕೋ ಬೇಡವೊ ನಮಗೆ ಪರಿಚಿತವಾಗಿದ್ದ ಬದುಕಿನ ಲಯಗಳು ನಿಧಾನವಾಗಿ ಮರೆಯಾಗುತ್ತಾ, ಅಪರಿಚಿತ, ನೂತನ ಲಯಗಳು ನಮ್ಮ ದಾರಿಯಲ್ಲಿ ಪ್ರತ್ಯಕ್ಷವಾಗುತ್ತಿವೆ. `ಅಯ್ಯೋ, ಹೇಗಿದ್ದದ್ದು ಹೇಗಾಯ್ತಪ್ಪ! ಎಲ್ಲ ಹಾಳಾಗಿ ಹೋಯಿತಲ್ಲ! ಮನುಷ್ಯ ಪ್ರಪಂಚ ಇನ್ನು ಮುಳುಗಿ ಹೋಗುತ್ತೆ! ಪ್ರಳಯವಾಗುತ್ತೆ!!’ ಎಂದು ಗೋಳಾಡುತ್ತಾ ಕೂರುವುದು ವಿವೇಕದ ಆಯ್ಕೆಯಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆರಡನೆಯ ಬರಹ

Read More

ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ: ಎಲ್.ಜಿ.ಮೀರಾ ಅಂಕಣ

ಆಧುನಿಕ ಕನ್ನಡ ಸಾಹಿತ್ಯದ ಬಹಳ ಮುಖ್ಯ ಘಟ್ಟವಾದ ನವೋದಯದಲ್ಲಿ ಪ್ರೇಮವನ್ನು ದಾಂಪತ್ಯದೊಳಗಿದ್ದಾಗ ಸಂಭ್ರಮಿಸುವ ಹಾಗೂ ಒಂದು ವೇಳೆ ಅದು ದಾಂಪತ್ಯದ ಹೊರಗಿದ್ದಾಗ ಅದನ್ನು ತ್ಯಾಗ ಮಾಡುವ ಮನೋಧರ್ಮ ಕಾಣುತ್ತಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿದ್ದ ನವ ಭಾರತ ನಿರ್ಮಾಣದ ಆಶಯ, ಸುಧಾರಣಾವಾದ, ಬ್ರಿಟಿಷರ ಕಣ್ಣಲ್ಲಿ ಭಾರತದ `ಸಭ್ಯ ಸಂಸ್ಕೃತಿ’ಯನ್ನು ಎತ್ತಿ ಹಿಡಿಯುವ ನೈತಿಕ ತವಕ ಇವು ಕುವೆಂಪು, ಬೇಂದ್ರೆ, ಪುತಿನ ಮುಂದೆ ಕೆ.ಎಸ್.ನರಸಿಂಹಸ್ವಾಮಿ ಇವರೆಲ್ಲರ ಪ್ರೀತಿಯ ಚಿತ್ರಣವನ್ನು ಪ್ರಭಾವಿಸಿದವು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಹಿರಿಯರಿಗೂ ಇಂದಿನ ಪೀಳಿಗೆಗೂ ಇರುವ ಅಂತರವನ್ನು ದಾಟುವುದು ಹೇಗೆ?: ಎಲ್.ಜಿ.ಮೀರಾ ಅಂಕಣ

ಹಿರಿಯುರ `ರಾತ್ರಿ ಎಷ್ಟು ಹೊತ್ತಾದರೂ ಮಲಗದ, ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ’ ತಮ್ಮ ಸಂತಾನಗಳ ಮನಸ್ಸಿನ ಹಾಗೂ ಬದುಕಿನ ಮರ್ಮವೇನು ಎಂಬುದನ್ನು ಅರಿಯಲು ಮೊದಲು ತಾವೇ ಒಂದು ಹೆಜ್ಜೆ ಮುಂದೆ ಇಡಬೇಕಿದೆ. ಜಗತ್ತೇ ಒಂದು ಹಳ್ಳಿಯಾದ ಅಂತರ್ಜಾಲದ ಯುಗದಲ್ಲಿ, ಹಳ್ಳಿಯೇ ತಮ್ಮ ಜಗತ್ತಾಗಿದ್ದ ಪೀಳಿಗೆಗೆ ಮತ್ತು ಅವರ ಮಕ್ಕಳಿಗೆ ಈ ಹೆಜ್ಜೆಯು ಒಂದು ಸವಾಲು. ಆದರೆ, ವಿಧಿ ಇಲ್ಲ. ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮಿಂದ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ದೂರ ಆಗಬಾರದು ಎಂದರೆ ಅವರ ಬದುಕಿನ ಲಯಗಳನ್ನು ಅರಿಯಲು ಹಿರಿಯ ಪೀಳಿಗೆಯವರು ಪ್ರಯತ್ನ ಮಾಡಲೇಬೇಕು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಬದುಕು ಎಂಬ ಶಿಕ್ಷಕ, ಮನುಷ್ಯ ಎಂಬ ವಿದ್ಯಾರ್ಥಿ: ಎಲ್.ಜಿ.ಮೀರಾ ಅಂಕಣ

ಬದುಕಿನ ಅನಿಶ್ಚಿತತೆ, ಮನುಷ್ಯನ ಬದುಕಿನಲ್ಲಿ ವಿಧಿಯು ಆಡುವ ಆಟ, ಎಷ್ಟೇ ಪ್ರಯತ್ನ ಮಾಡಿದರೂ ತನ್ನ ವಿಧಿಯಲ್ಲಿ ಬರೆದ ದುರಂತದಿಂತ ತಪ್ಪಿಸಿಕೊಳ್ಳಲಾಗದ ಮನುಷ್ಯನ ಅಸಹಾಯಕತೆ – ಇವುಗಳನ್ನು ಈ ಮಹಾನ್ ನಾಟಕ ಮನೋಜ್ಞವಾಗಿ ಹೇಳುತ್ತದೆ. ಒಂದು ಸಂದರ್ಭದಲ್ಲಿ `ಅಯ್ಯೋ, ದುರ್ವಿಧಿಯೇ? ನಾಳೆ ಎಂಬುದು ಏನೆಂದು ಗೊತ್ತಿರದ ಮನುಷ್ಯನ ಪಾಡೆ!! ಓಹ್ …. ಅಯ್ಯೋ .., ಸಾಯುವವರೆಗೂ ಯಾರನ್ನೂ ಸುಖಿ ಅನ್ನಬೇಡ’’ ಎಂಬ ಮಾತನ್ನು ನಾಟಕಕಾರ ಸಫೋಕ್ಲಿಸ್ ಒಂದು ಎಚ್ಚರಿಕೆಯೆಂಬಂತೆ, ಒಂದು ಪಾತ್ರದ ಬಾಯಿಂದ ಹೇಳಿಸಿದ್ದಾನೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಇಂದಿನ ಕನ್ನಡ ಅಧ್ಯಾಪಕರು ಮತ್ತು ಇಂಗ್ಲಿಷ್ ಭಾಷೆ: ಎಲ್.ಜಿ.ಮೀರಾ ಅಂಕಣ

ಬರಬರುತ್ತಾ ಓದು, ವ್ಯುತ್ಪತ್ತಿ, ಭಾಷಾ ಪ್ರೌಢಿಮೆಗಳ ಬಗೆಗಿನ ಆಸ್ಥೆ ಕಡಿಮೆಯಾಗಿ `ಹಾಗೂ ಹೀಗೂ ಒಂದಿಷ್ಟು ಪಾಠ ಮಾಡೋದು, ಸಂತೆ ಹೊತ್ತಿಗೆ ಮೂರು ಮೊಳ ಆದ್ರೆ ಸಾಕು’ ಎಂಬ ಮನಃಸ್ಥಿತಿ ಮೂಡಿತು. ಇದೊಂದು ರೀತಿಯ ಸುಲಭೀಕರಣ. ಇದಕ್ಕೆ ಕನ್ನಡ ಅಧ್ಯಾಪಕರು ಮಾತ್ರ ಕಾರಣ ಅಲ್ಲ. ಜಾಗತೀಕರಣದ ನಂತರ, ಭಾರತ ದೇಶದ ಬದುಕು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳವಾಗಿ ಬದಲಾಯಿತು. ಉಪಗ್ರಹ ಪ್ರಸಾರದ ಅಂತಾರಾಷ್ಟ್ರೀಯ ಚಲನಚಿತ್ರ ವಾಹಿನಿಗಳು, ಅಂತರ್ಜಾಲ, ಮುಂದೆ ಸರ್ವವ್ಯಾಪಿಯಾದ ಚಲನವಾಣಿಗಳ ಬಳಕೆ ಇವುಗಳಿಂದಾಗಿ ಓದುಸಂಸ್ಕೃತಿ ಹಿಂದೆ ಸರಿದು ನೋಡುಸಂಸ್ಕೃತಿ ಮುನ್ನೆಲೆಗೆ ಬಂದಿತಲ್ಲವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ