ಮಥುರೆಯ ಬೃಂದಾವನವನು ಮಾಡುವ ಕನಸದು: ಡಾ. ಶ್ರೀಪಾದ ಭಟ್ ಬರಹ
ಪುರಾಣ ಕತೆಯನ್ನು ವರ್ತಮಾನಕ್ಕೆಳೆಯುವ, ಕಥೆಯ ಮೈ ಕೆಡದಂತೆ ಅದನ್ನು ಹದವಾಗಿ ಬೆಸೆಯುವ ಕುಶಲತೆ ವೆಂಕಟೇಶಮೂರ್ತಿಯವರಿಗಿದೆ. ಅವರ ಪುರಾಣ ಪಾತ್ರಗಳು ವರ್ತಮಾನದ ವ್ಯಕ್ತಿಗಳಂತೆ ಆಡುವರಾದರೂ ಔಚಿತ್ಯದ ವಿವೇಕದಲ್ಲಿಯೇ ಅದನ್ನು ನಿಭಾಯಿಸುವ ಶಕ್ತಿ ಅವರ ಬರಹಕ್ಕಿದೆ. ಹೀಗಾಗಿಯೇ ವಸ್ತು ಜಗತ್ತಿನ ಕುರಿತು ಆಡುವ ಮಾತುಗಳೂ ಶುಷ್ಕವಾಗದೇ, ನಿತ್ಯಜೀವನದ ಕೃಪಣತೆಯ ಸೋಕಿಲ್ಲದಂತೆ ಚಿತ್ತಾಕರ್ಷಕವೂ ಚಿತ್ರವತ್ತಾಗಿಯೂ ಮೂಡುತ್ತದೆ.
ಎಚ್.ಎಸ್. ವೆಂಕಟೇಶಮೂರ್ತಿಯವರೊಂದಿಗಿನ ರಂಗ ಸಂಬಂಧದ ಕುರಿತು ಡಾ. ಶ್ರೀಪಾದ ಭಟ್ ಬರಹ