ಚಿದಂಬರ ಜಂಬೆಯವರಿಗೊಂದು ವಿದಾಯ ಪತ್ರ: ಡಾ.ಶ್ರೀಪಾದ ಭಟ್ ಬರಹ
ಮೈಸೂರು ರಂಗಾಯಣದ ಎರಡು ಕಾರ್ಯಕ್ರಮಕ್ಕೆ ನಾವಿಬ್ಬರೂ ಒಟ್ಟಿಗೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಭಾಗೀರಥಿ ಬಾಯಿ ಕದಂ ಆಗ ನಿರ್ದೇಶಕರಾಗಿದ್ದರು. ಎರಡನೇ ಸಾರಿ ನಾವಿಬ್ಬರೂ ಭಾಗಿಯಾದ ಕಾರ್ಯಕ್ರಮ ಮುಗಿದ ರಾತ್ರಿ ನೀವೆಂದಿರಿ. “ಭಟ್ರೆ, ಭಾಗೀರಥಿಗೆ ನಾನು ಹೇಳಿದ್ದೆ. ಅವಳು ಕೇಳ್ತಾ ಇಲ್ಲೆ. ನಾವಿಬ್ಬರೂ ಬೇಕೋ ಬೇಡವೋ ಬ್ರಾಹ್ಮಣರು. ಬ್ರಾಹ್ಮಣ್ಯ ಆಚರಿಸ್ತೀವೋ ಬಿಡ್ತೀವೊ ಬೇರೆ ಪ್ರಶ್ನೆ. ಆದರೆ ಸಾಮಾಜಿಕ ಮುಖಕ್ಕೆ ಇದು ಸರಿ ಅಲ್ಲ. ಹೀಗಾಗಿ ಇನ್ಮುಂದೆ ನನ್ನ ಕರೆದ್ರೆ ಶ್ರೀಪಾದ ಭಟ್ಟರನ್ನು ಕರೀಬಾರ್ದು, ಅವರನ್ನ ಕರೆದ್ರೆ ನನ್ನ ಕರೀಬಾರ್ದು ಅಂತ ಹೇಳಿದ್ದಿ. ಸರಿ ಅಲ್ದಾ?”.
ಇತ್ತೀಚೆಗೆ ತೀರಿಕೊಂಡ ಹಿರಿಯ ರಂಗಕರ್ಮಿ ಚಿದಂಬರ ಜಂಬೆಯವರಿಗೆ ಡಾ. ಶ್ರೀಪಾದ ಭಟ್ ಬರೆದ ಪತ್ರ

