ದೇವರು ಧರಿಸುವ ಬಟ್ಟೆಯೂ ದೇವರಿಗೆ ಕೊಟ್ಟ ಮಾತೂ..
ದೇವರಿಗೆ ಉಡುಪಾಗಿ ನೇಯುವುದು ಒಂದಾದರೆ, ದೇವರನ್ನೇ ನೇಯುವುದು ಕೂಡ ಇನ್ನೊಂದು ಬಗೆಯ ವಸ್ತ್ರಕಲೆ. ಗುಜರಾತಿನಲ್ಲಿ ಬಟ್ಟೆಯ ಮೇಲೆ ಚಿತ್ರ ಬರೆಯುವ ಮಾತಾ ನಿ ಪಚ್ಚೆಡಿ ಅನ್ನುವ ಸಂಪ್ರದಾಯ ಇದೆ. ಇದನ್ನು ಮಾಡುವವರು ಜಲ್ಲಿ ಕಲ್ಲು ಒಡೆಯುವ, ಅಷ್ಟೇನೂ ಅನುಕೂಲಸ್ಥರಲ್ಲದ ವರ್ಗ. ಅವರಿಗೆ ದೇವಾಲಯಕ್ಕೆ ಪ್ರವೇಶ ಕೊಡಲಿಲ್ಲ ಅಂತ ಬಟ್ಟೆಯ ಮೇಲೆ ದೇವಿಯ ಚಿತ್ರ ಬರೆದರು. ಅದನ್ನೇ ಪೂಜೆ ಮಾಡುತ್ತಾ ಬಂದರು. ಅವರು ಸೀರೆಗಳ ಮೇಲೆ ವಿಧವಿಧವಾದ ದೇವಿಚಿತ್ರಗಳನ್ನು ಕಲಾತ್ಮಕವಾಗಿ, ಗಾಢ ಬಣ್ಣಗಳಲ್ಲಿ ಬಿದಿರಿನ ಕಡ್ಡಿಗಳಿಂದ ಮೂಡಿಸುತ್ತಾರೆ. ಅದನ್ನು ಗುಜರಾತಿನ ಕಲಮ್‌ಕಾರಿ ಎನ್ನುತ್ತಾರೆ. ಅವರಿಗೆ ಅದು ಬರಿ ಬಟ್ಟೆಯಲ್ಲ, ದೇವಿಯ ಆರಾಧನೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’