Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ಹುಟ್ಟುಗುಣ ಸುಟ್ಟರೂ ಹೋಗಲ್ಲ: ಕುರಸೋವ ಆತ್ಮಕತೆಯ ಮತ್ತೊಂದು ಕಂತು.

“ಆ ಸಮಯದಲ್ಲಿ ಸೈನ್ಯದಲ್ಲಿದ್ದವರ ಅಧಿಕಾರದ ದರ್ಪ ಯಾವ ಮಟ್ಟದ್ದೆಂದರೆ ಮಕ್ಕಳು ಅಳಲು ಕೂಡ ಇವರ ಅನುಮತಿ ತೆಗೆದುಕೊಳ್ಳಬೇಕು ಅನ್ನುವ ರೀತಿಯಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ನೇರವಾಗಿ ಕೊಲೊನಿಯಲ್ ಮಬುಚಿಯನ್ನೇ ಎದುರುಹಾಕಿಕೊಂಡಿದ್ದೆ. ಆದೇಶವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆಯಿತ್ತು. ಯಮಾ ಸಾನ್ ಮತ್ತು ನಿರ್ಮಾಪಕ ಮೊರಿಟ ನೊಬ್ಯೊಶಿ ನಿಧಾನವಾಗಿ ದೃಶ್ಯವನ್ನು ಕತ್ತರಿಸಿಬಿಡುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವತ್ತಲೇ…”

Read More

ಮರೆಯಲಾಗದ ಮೇಷ್ಟ್ರ ಕತೆ (ಭಾಗ-2): ಕುರಸೋವ ಆತ್ಮಕತೆಯ ಕಂತು

“ಯಮಾ ಸಾನರಿಂದ ಸಂಕಲನ ಕುರಿತು ಬೆಟ್ಟದಷ್ಟು ವಿಷಯಗಳನ್ನು ಕಲಿತೆ. ಆದರೆ ಒಂದು ಮುಖ್ಯವಾದ ಸತ್ಯವೆಂದರೆ ಸಂಕಲನ ಮಾಡುವಾಗ ನಿಮ್ಮದೇ ಕೃತಿಯನ್ನು ನೀವು ವಸ್ತುನಿಷ್ಠವಾಗಿ ನೋಡಬೇಕು. ಕಷ್ಟಪಟ್ಟು ತೆಗೆದ ತಮ್ಮದೇ ಸಿನೆಮಾವನ್ನು ಯಮಾ ಸಾನ್ ನಿರ್ದಾಕ್ಷಿಣ್ಯವಾಗಿ ಕತ್ತರಿಸಿಬಿಡುತ್ತಿದ್ದರು. ಅವರು ಸಂಕಲನದ ಕೋಣೆಯೊಳಗೆ ಖುಷಿಯಾಗಿ ಬಂದು “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ. ನೀನು ಈ ದೃಶ್ಯಗಳನ್ನು ಕತ್ತರಿಸು” ಎಂದು ಹೇಳುತ್ತಿದ್ದರು.”

Read More

ಮರೆಯಲಾಗದ ಮೇಷ್ಟ್ರ ಕತೆ: ಕುರಸೋವ ಆತ್ಮಕತೆಯ ಕಂತು

“ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ. ಸಿಕ್ಕಾಪಟ್ಟೆ ಸಿಟ್ಟು ಬಂದಿದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವರಿಗದು ಸಾಧ್ಯವಿರಲಿಲ್ಲ. ಅವರಿಗೆ ಕೋಪ ಬಂದಿದೆ ಎಂದು ಜನರಿಗೆ ನಾನರ್ಥಮಾಡಿಸುತ್ತಿದ್ದೆ. ಬೇರೆ ಸ್ಟುಡಿಯೋಗಳಿಂದ ಕೆಲಸಕ್ಕೆ ತೆಗೆದುಕೊಂಡಿದ್ದ ಹಲವು ಸ್ಟಾರ್ ಗಳು ಸ್ವ ಕೇಂದ್ರಿತರು ಹಾಗೂ ಅತಿಯಾದ ಆತ್ಮಪ್ರಶಂಸಕರಾಗಿದ್ದರು. ಯಾವಾಗಲೂ ಸೆಟ್ ಗೆ ತಡವಾಗಿ ಬರುತ್ತಿದ್ದರು.”

Read More

ಚಲನಚಿತ್ರ ನಿರ್ದೇಶನ ಕಲಿಕೆಯ ಪಾಠಗಳು: ಕುರಸೋವ ಆತ್ಮಕತೆಯ ಪುಟ

“ನಾವೆಲ್ಲ ನದಿಗೆ ಬಿಟ್ಟ ಮೀನುಗಳಂತೆ ನಮ್ಮೆಲ್ಲ ಶಕ್ತಿಯೊಂದಿಗೆ ಈಜಲು ತೊಡಗಿದ್ದೆವು. P.C.L.ನ ಆಡಳಿತದಲ್ಲಿ ಸಹಾಯಕ ನಿರ್ದೇಶಕರನ್ನು ಮುಂದೆ ಮ್ಯಾನೇಜರ್ ಗಳು ಹಾಗೂ ನಿರ್ದೇಶಕರಾಗುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಪರಿಣತಿ ಪಡೆಯಬೇಕಿತ್ತು.”

Read More

ಶಿಖರದ ತುದಿಯಲ್ಲಿ ಕಿವಿಯಲ್ಲುಸುರುವ ತಂಗಾಳಿ

“ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ಸಂಗೀತ ಮತ್ತಿತರ ಕಲೆಗಳಲ್ಲಿ ಉತ್ಸಾಹದಿಂದ ಮುಳುಗಿ ಎದ್ದಿದ್ದೆ. ನನ್ನೊಳಗೆ ತುಂಬಿಕೊಂಡ ಈ ಎಲ್ಲ ಕಲೆಗಳ ತಿಳಿವಳಿಕೆ ಒಟ್ಟಾಗಿ ಸಿನಿಮಾ ರೂಪದಲ್ಲಿ ಬಂದಿತ್ತು. ನಾನು ಕಲಿತೆಲ್ಲ ಕಲೆಗಳನ್ನು ಸಿನಿಮಾದಲ್ಲಿ ಬಳಸಬಹುದೆಂದು ಎಂದೂ ಯೋಚಿಸಿರಲಿಲ್ಲ. ನಾನು ಬದುಕಿನಲ್ಲಿ ತುಳಿಯಲಿರುವ ಹಾದಿಗೆ ವಿಧಿ ನನಗೆ ಇಷ್ಟು ಚೆನ್ನಾಗಿ ತರಬೇತಿ ನೀಡಿ….”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ