Advertisement
ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

ತಟ್ಟೆಗೆ ಮೀನು ಬಡಿಸಲೂ ಒಂದು ವಿಧಾನವಿತ್ತು: ಕುರಸೋವ ಆತ್ಮಕತೆಯ ಮತ್ತೊಂದು ಅಧ್ಯಾಯ

“ಮಸುಕು ಮಸುಕಾಗಿ ಕಾಣುತ್ತಿದ್ದ ಪರದೆಯ ಮೇಲೆ, ಆ ತಂಡದವನೊಬ್ಬ ಆ ನಾಯಿಯನ್ನು ಇಳಿಜಾರಿನತ್ತ ಕರೆದುಕೊಂಡು ಹೋದ. ಬಹುಶಃ ಅಲ್ಲಿ ಕೊಂದಿರಬೇಕು. ಗುಂಡಿನ ಸದ್ದು ಕೇಳಿಸಿತು. ಉಳಿದ ನಾಯಿಗಳನ್ನು ಹೆದರಿಸಿ ಕಣಿವೆ ಹಾರಿ ಮುಂದೆ ಹೋಗುವಂತೆ ಮಾಡಲು ಗುಂಡು ಹಾರಿಸಿರಬೇಕು. ಬಿಕ್ಕಿಬಿಕ್ಕಿ ಅಳಲು ಶುರುಮಾಡಿದೆ.”

Read More

ಮ್ಯುರಸಕಿ ಮತ್ತು ಶುನಗೊನ್:ಕುರಸೋವ ಆತ್ಮಕತೆಯ ಇಂದಿನ ಕಂತು

”ಐದನೇ ಕ್ಲಾಸಿನ ಮೂರನೇ ಟರ್ಮ್ ಅಷ್ಟೊತ್ತಿಗೆ ಪ್ರೈಮರಿ ಸ್ಕೂಲಿನ ಉಪನಾಯಕನಾಗಬೇಕು ಅಂತ ಅಂದುಕೊಂಡದ್ದು. ಕತ್ತಿವರಸೆ ಪಂದ್ಯಗಳಲ್ಲಿ ಸತತವಾಗಿ ಐವರನ್ನು ಸೋಲಿಸಿದ್ದೆ. ಆ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕ ಬಟ್ಟೆಗಳಿಗೆ ಬಣ್ಣ ಹಾಕುತ್ತಿದ್ದವನ ಮಗ.”

Read More

ನೀರಸ ಕ್ಯಾಲಿಗ್ರಫಿ:ಕುರಸೋವ ಆತ್ಮಕತೆಯ ಇಂದಿನ ಕಂತು

‘ಆದರೆ ನನಗೆ ಆ ಮೇಷ್ಟ್ರ ಕ್ಯಾಲಿಗ್ರಫಿಯಲ್ಲಿ ಇಂಟರೆಸ್ಟಿಂಗ್ ಅನ್ನಿಸುವಂಥದ್ದು ಏನೂ ಕಾಣಿಸಲೇ ಇಲ್ಲ.ಆತ ಬಹಳ ಕಟ್ಟುನಿಟ್ಟಿನ ಮನುಷ್ಯ.ನನಗೆ ಆತನ ಬರವಣಿಗೆಯಲ್ಲಿ ರುಚಿಯಾಗಲಿ ಸುವಾಸನೆಯಾಗಲಿ ಕಾಣಿಸಲಿಲ್ಲ.ಅವು ಕೇವಲ ಪುಸ್ತಕದಲ್ಲಿ ಪ್ರಿಂಟಾಗಿದ್ದ ಅಕ್ಷರಗಳ ಹಾಗೆ ಕಾಣುತ್ತಿತ್ತು. ಅಪ್ಪ ಕಲಿಯಲೇಬೇಕು ಅಂತ ಹೇಳಿದ್ದರಲ್ಲ ಹಾಗಾಗಿ ದಿನವೂ ಅವರ ಶಾಲೆಗೆ ಹೋಗಿ ಅವರ ಕ್ಯಾಲಿಗ್ರಫಿಯ ಶೈಲಿಯನ್ನು ಕಲಿಯಲು ಶುರುಮಾಡಿದೆ.ನಮ್ಮಪ್ಪ ಮತ್ತು ಆ ಕ್ಯಾಲಿಗ್ರಫಿ ಮೇಷ್ಟ್ರು ಇಬ್ಬರೂ ಮೀಸೆ ಬಿಟ್ಟಿದ್ದರು”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮೂರನೆಯ ಅಧ್ಯಾಯ.

Read More

’ತಿಂಡಿ ತಿನ್ನು, ಸ್ಕೂಲಿಗೆ ಹೋಗು ಮತ್ತೆ ಮಧ್ಯಾಹ್ನ ಮನೆಗೆ ಬಾ ಇಷ್ಟೇ….’

”ಹೊಟ್ಟೆ ಹಸಿದಿರುತ್ತಿತ್ತು. ತಿಂಡಿಯೊಂದೆ ತಲೆತುಂಬ ತುಂಬಿಕೊಂಡು ಮಂದಿರದತ್ತ ಬಲವಂತವಾಗಿ ಕಾಲೆಳೆದುಕೊಂಡು ಹೋಗುತ್ತಿದ್ದೆ. ಎಷ್ಟು ಬೇಗ ಆದ್ರೆ ಅಷ್ಟು ಬೇಗ ಮನೆ ತಲುಪಿಬಿಡೋದೇ ನನ್ನ ಉದ್ದೇಶವಾಗಿರುತ್ತಿತ್ತು. ಪ್ರಾರ್ಥನಾ ಸಭಾಂಗಣದ ಮುಂದೆ ನಿಂತು ಅಲ್ಲಿದ್ದ ಗಂಟೆ ಬಾರಿಸುತ್ತಿದ್ದೆ.”

Read More

ನನ್ನ “ಅಳುಮುಂಜಿ” ಕಾಲ:ಕುರಸೋವ ಆತ್ಮಕತೆಯ ಎರಡನೆಯ ಕಂತು

ನನ್ನ ಮೂವರು ಅಕ್ಕಂದಿರಲ್ಲಿ ಸಣ್ಣಕ್ಕನೇ ನೋಡಲು ಬಹಳ ಚೆನ್ನಾಗಿದ್ದವಳು.ಆಕೆ ತುಂಬ ಮೃದು ಮತ್ತು ಕರುಣಾಮಯಿ.ನಮ್ಮಣ್ಣ ಬೀಮ್ ಮೇಲಿಂದ ಬಿದ್ದು ತಲೆಗೆ ಏಟು ಬಿದ್ದಾಗ ಅವನ ಬದಲು ನನ್ನ ಜೀವ ಹೋಗಲಿ ಅಂತ ಅತ್ತವಳು ಈ ಅಕ್ಕ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ