ಶ್ರೀನಿವಾಸ ವೈದ್ಯರೆಂದರೆ….
ಅವರು ಈಸಿದಷ್ಟೂ, ಓದುಗರಾದ ನಾವು ಇದ್ದು ಜಯಿಸುತ್ತೇವೆ. ಅಂತರಂಗ-ಬಹಿರಂಗ, ವ್ಯಕ್ತಿ-ಸಮಾಜ ಎಂದೆಲ್ಲ ಕಾಲ್ಪನಿಕ ಗಡಿರೇಖೆ ಹಾಕಿಕೊಳ್ಳದೇ ಒಟ್ಟಂದದಲ್ಲಿ ಸಮಾಜವನ್ನು ತುಂಬಾ ಅಚ್ಛೆಯಿಂದ, ಅಷ್ಟೇ ಅಚ್ಚರಿಯಿಂದ ಅನುಭವಿಸಿದ ಈ ಜೀವಿಯ ಬರವಣಿಗೆಯಲ್ಲಿ ಬದುಕು ತನ್ನೆಲ್ಲ ನೆಳಲು ಬೆಳಕುಗಳೊಂದಿಗೆ ಬಸಿಯುತ್ತದೆ. ಇದು ಹೀಗೇಕೆ ಎಂದೆಲ್ಲ ಕೇಳದೇ, ಅರೆ ಇದು ಹೀಗಿದೆಯಲ್ಲ ಎಂದು ಸೋಜಿಗದಿಂದ ಇರವನ್ನು ಅನುಭವಿಸುವ ಅರಿವಿನ ದಾರಿ ಇದು. `ಅರಿವೇ ಗುರು’ ಎಂದರೆ, `ಹೌದ್ರೀ, ಆದರೆ ಅದೂ ಅಲ್ಲಲ್ಲಿ ಸ್ವಲ್ಪ ಹರಿದಿರ್ತದೆ’ ಎಂದು ಗಹಗಹಿಸಿ ನಗುವ ವೈದ್ಯರ ವಿನೋದ ಅಪ್ಪಟ.
Read More