Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಪುರಸ್ಕಾರ ದೊಡ್ಡದೋ ನಗದು ದೊಡ್ಡದೋ: ಒಂದು ಸಾಹಿತ್ಯಿಕ ಜಿಜ್ಞಾಸೆ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ರೀತಿಯ ಪ್ರಶಸ್ತಿಗಳಿವೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಮಂದಿ ಹಿರಿಯರು, ಪೂರ್ವಿಕರು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ್ರಶಸ್ತಿಗಳನ್ನು ನೀಡಲು ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ. ಆದರೆ ಆ ದತ್ತಿನಿಧಿಯ ಬಡ್ಡಿ ಮೊತ್ತ ಕಿರಿದಾಗುತ್ತಿರುವುದರಿಂದ, ಪ್ರಸ್ತುತ ಪ್ರಶಸ್ತಿಯ ಜೊತೆಗಿರುವ ನಗದು ಬಹುಮಾನವು ತೀರಾ ಕಿರಿದಾಗಿದೆ. ಅದನ್ನು ಹೆಚ್ಚಿಸುವ ಅಥವಾ ಪ್ರಶಸ್ತಿಯ ವಿಧಾನವನ್ನು ಪರಿಷ್ಕರಿಸುವ ಪ್ರಯತ್ನಗಳಾಗಬೇಕು ಎಂಬ ನಿಟ್ಟಿನಲ್ಲಿ ಲೇಖನವೊಂದನ್ನು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿದ್ದಾರೆ.

Read More

ಉಪದ್ರವಿ ಸಾಹಿತಿಗಳು ಬೇಕಾಗಿದ್ದಾರೆ: ಕುಂ. ವೀರಭದ್ರಪ್ಪ

ಬಳ್ಳಾರಿಯ ಕಡಕ್ ಭಾಷೆಯಲ್ಲಿ ಮಾತನಾಡುವ ಸಾಹಿತಿ ಕುಂ.ವೀರಭದ್ರಪ್ಪ ಅವರು, ಪ್ರತಿಭಟನೆ, ಪ್ರಶ್ನಿಸುವ ಮನೋಭಾವವನ್ನು ಇಷ್ಟಪಡುವವರು. ಸ್ವಭಾವಕ್ಕೆ ತಕ್ಕಂತೆ ಬಂಡಾಯವನ್ನು ಮೆಚ್ಚಿಕೊಂಡು ಸಾಹಿತ್ಯ ಕೃಷಿ ಮಾಡಿದ ಅವರು ಬರೆದ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಇತ್ತೀಚೆಗೆ ಅವರಿಗೆ ಜೀವಬೆದರಿಕೆಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರೊಡನೆ ಒಂದಿಷ್ಟು ಹೊತ್ತು ಮಾತನಾಡಿದಾಗ ಕನ್ನಡ ಸಾಹಿತ್ಯ ಲೋಕದ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು.

Read More

ಸಾಹಿತ್ಯ ಪುರವಣಿಗಳು ಅನುತ್ಪಾದಕವೇ?

ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯಪುರವಣಿಗಳು ಕ್ಷೀಣವಾಗಿವೆ, ಅಥವಾ ಕೆಲವು ಮಾಧ್ಯಮ ಸಂಸ್ಥೆಗಳು ಪುರವಣಿಯನ್ನೇ ನಿಲ್ಲಿಸಿಬಿಟ್ಟಿವೆ. ಎರಡು ವರ್ಷಗಳ ಹಿಂದೆ ಕೋವಿಡ್‍ ಸೋಂಕು ವ್ಯಾಪಿಸದಂತೆ ಹೇರಿದ್ದ ಲಾಕ್‍ ಡೌನ್‍ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ನಷ್ಟವನ್ನು ಭರಿಸಿಕೊಳ್ಳಲು ಅನೇಕ ಪುಟಗಳನ್ನು ಕಡಿತ ಮಾಡಿದವು. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

Read More

ಸುಳ್ಳು ನಮ್ಮ ಮನೆದೇವರಾಗಿ..

ಸುಳ್ಳು ಸುದ್ದಿಯನ್ನುತಡೆಯುವ ಪ್ರಯತ್ನ ಹಿಂದೆಯೂ ನಡೆಯುತ್ತಿತ್ತು. ಇಂದೂ ನಡೆಯುತ್ತಿದೆ.  ನಮ್ಮ ಉದ್ದೇಶಕ್ಕೆ ಪೂರಕವಾಗಿ ತಂತ್ರಜ್ಞಾನ, ಉಪಕರಣಗಳು ಎಷ್ಟೇ ಸಹಕಾರಿ ಆಗಿದ್ದರೂ ಅವುಗಳನ್ನು ಬಳಸುವ ಮನಸ್ಸುಗಳಲ್ಲಿ ಸುದುದ್ದೇಶವಿಲ್ಲದೇ ಇದ್ದಾಗ, ನಾವು ರೂಪಿಸಿಕೊಂಡ ಅತ್ಯಾಧುನಿಕ ವ್ಯವಸ್ಥೆಗಳು ಪ್ರಯೋಜನವಿಲ್ಲದ್ದಾಗಿಬಿಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪತ್ತೆಮಾಡುವುದೇ ಒಂದು ಸಾಹಸ.

Read More

ಬದುಕನ್ನು ಅರಸಿಕೊಂಡು ಓಡುತ್ತಲೇ ಇರಬೇಕು

ರೆಹಮಾನಿ ಅವರು ಉಕ್ರೇನ್‍ ನಲ್ಲಿ ನೆಲೆಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಂದು ವರ್ಷವೂ ಭರ್ತಿಯಾಗಿದೆಯೋ, ಇಲ್ಲವೋ, ಅಲ್ಲಿ ಯುದ್ಧದ ಬಿಸಿಯೇರುತ್ತಿರುವುದು ಕಾಣಿಸಿತು. ತಾವು ಬಯಸಿದ ಬದುಕು ಅಲ್ಲಿಯೂ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಮತ್ತೆ ಅಲ್ಲಿಂದ ಹೊರಡಲೇಬೇಕಾಯಿತು. ರಷ್ಯಾ ಪಡೆಗಳು ಸ್ಫೋಟಿಸುತ್ತಿದ್ದ ಬಾಂಬುಗಳ ಸದ್ದಿನ ನಡುವೆಯೇ ಅವರು ಆ ದೇಶವನ್ನು ತೊರೆದರು. ಯಾರದೋ ಯುದ್ಧ ದಾಹಕ್ಕಾಗಿ ಬದುಕು ಕಳೆದುಕೊಳ್ಳುತ್ತಿರುವವರ ಕತೆಗಳಿಗೆ ದನಿಯೆಲ್ಲಿದೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ