Advertisement
ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಸಾರಾ ಉಮ್ಮಾ ತೀರಿಕೊಂಡರು…

ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಮಂಗಳವಾರ ಮಧ್ಯಾಹ್ನ ತೀರಿಕೊಂಡರು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಸಾರಾ, ಲೇಖಕಿಯಾಗಿಯಷ್ಟೇ ಅಲ್ಲ, ಉದಾರವಾದಿ ಚಿಂತಕಿಯಾಗಿಯೂ ಗುರುತಿಸಿಕೊಂಡರು. ಅವರ ಕುರಿತು ಕಳೆದ ವರ್ಷ ಕೆಂಡಸಂಪಿಗೆಯಲ್ಲಿ ಪ್ರಕಟವಾದ ಬರಹವೊಂದು ಇಲ್ಲಿದೆ.

Read More

ಬೆಟ್ಟ ಅಗೆದು ಗಂಗೆಯನ್ನು ತಂದವರು

ಅಮೈ ಮಹಾಲಿಂಗ ನಾಯ್ಕ ಅವರು ಬಂಟ್ವಾಳದ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ಎಂಬ ಊರಿನ ನಿವಾಸಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜೀವನವು ಮರೆಯಾಗುತ್ತಿದೆ ಎಂಬ ಆತಂಕ ಕವಿಯುತ್ತಿರುವ ಸಂದರ್ಭದಲ್ಲಿ ಅಮೈ ಮಹಾಲಿಂಗ ನಾಯ್ಕರು ಬೋಳುಗುಡ್ಡವನ್ನು ಹಸನು ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ. ಅವರು ಜೀವನದಲ್ಲಿ ಪ್ರಯತ್ನಗಳಿಗೆ ಎಂದೂ ‘ರಜಾ’ ತೆಗೆದುಕೊಂಡಿದ್ದೇ ಇಲ್ಲ. ಅವರ ಬಗ್ಗೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಬರಹ ಇಲ್ಲಿದೆ.

Read More

ಕತೆ ಹೇಳಿಸಿಕೊಳ್ಳುವ ಉಮ್ಮ, ಪುಸ್ತಕ ಕೊಡಿಸು ಎನ್ನುವ ಬಾಪಾ

ತಾನು ಕತೆಗಾರನೆಂದು ಹೇಳಿಕೊಳ್ಳುವ ಮುನವ್ವರ್‌ ಜೋಗಿಬೆಟ್ಟು ಅವರ ಅಂತರಂಗದಲ್ಲೊಂದು ಹಾಡಿದೆ. ಅದು ಅವರ ಪರಿಸರ ಪ್ರೀತಿಯ ಹಾಡು. ಅದೇ ಪ್ರೀತಿಯಲ್ಲಿ ಅವರು ಕೆಂಡಸಂಪಿಗೆಗೆ ಸರಣಿ ಬರಹಗಳನ್ನು ಬರೆಯುತ್ತಾ ತಮ್ಮ ಬರವಣಿಗೆಯನ್ನು ಮತ್ತಷ್ಟು ಚಂದಮಾಡಿಕೊಂಡರು. ʻಇಷ್ಕಿನ ಒರತೆಗಳುʼ ಎಂಬ ಕವನ ಸಂಕಲನ ಪ್ರಕಟಿಸಿದರು. ಅವರಿಗೆ ಇಂದು ವಿಜಯಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ. ಈ ಬಹುಮಾನ ಬಂದ ಖುಷಿಯಲ್ಲಿ ತುಂಬಾ ಮಾತನಾಡಿದರು.

Read More

ಛಂದ ಪ್ರಶಸ್ತಿ ಪಡೆದ ಫಾತಿಮಾ ರಲಿಯಾ….

ಕೆಂಡಸಂಪಿಗೆಯ ಮೂಲಕ ಬರಹಲೋಕಕ್ಕೆ ಕಾಲಿಟ್ಟ ಫಾತಿಮಾ ರಲಿಯಾ ಕವಿತೆಗಳನ್ನು ಬರೆಯಲಾರಂಭಿಸಿ ಪ್ರಬಂಧಗಳನ್ನು ತುಂಬಾ ಪ್ರೀತಿಸಿದರು. ಕರಾವಳಿಯ ಸಾಮಾಜಿಕತೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ  ಭರವಸೆಯ ಲೇಖಕಿ. ಅವರ ಕಥಾ ಸಂಕಲನದ ಹಸ್ತಪ್ರತಿಗೆ ಛಂದಪುಸ್ತಕ ಬಹುಮಾನ ಬಂದಿದೆ. ಕವಿತೆಯ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ತಾನು ಪ್ರಬಂಧಗಳ ಲೋಕದಲ್ಲಿ ವಿಹರಿಸಿ ಈ ಕಥಾಲೋಕವನ್ನು ಪ್ರವೇಶಿಸಿದ್ದೇನೆ ಎನ್ನುವ ಫಾತಿಮಾ ರಲಿಯಾ ಅವರು ತಮ್ಮಖುಷಿಯನ್ನು ಕೆಂಡಸಂಪಿಗೆಯ ಜೊತೆಗೆ ಹಂಚಿಕೊಂಡರು.  ಅವರೊಡನೆ ನಡೆಸಿದ ಮಾತುಕತೆಯ ಒಂದಿಷ್ಟು ವಿಚಾರಗಳು ಇಲ್ಲಿವೆ.

Read More

ಕೈ ಹಿಡಿದು ಮುನ್ನಡೆಸುವ ಕತೆಗಳೆಂಬ ದೋಣಿಗಳು

ಸೂರ್ಯೋದಯದಲ್ಲೋ, ಸೂರ್ಯಾಸ್ತದಲ್ಲೋ ಆಗಸದಲ್ಲಿ ಚೆಲ್ಲಿ ಹೋದ ಬಣ್ಣಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋದಂತೆ, ಗ್ರಹಿಕೆಗಳು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತವೆ. ಒಬ್ಬನೇ ವ್ಯಕ್ತಿಯು ಒಂದೊಂದು ಕಾಲದಲ್ಲಿ ಬದುಕನ್ನು ಗ್ರಹಿಸುವ ರೀತಿಯೂ ಬದಲಾಗಿರುತ್ತದೆಯಲ್ಲವೇ. ಹಾಗೆಯೇ ಈ ಕತೆಗಳು ಕೂಡ ಎಂದೆನಿಸುತ್ತದೆ. ಹಾಗೆ ನೋಡಿದರೆ ಎಷ್ಟೊಂದು ಕಲಾತ್ಮಕವಾದ ಕತೆಗಳನ್ನು ಬರೆದರೂ ʻಕತೆಗಾರರುʼ ರೂಪುಗೊಳ್ಳುವುದು ಓದುಗರ ಮನಸ್ಸಿನಲ್ಲಿ ಅಲ್ಲವೇ.
ಕತೆಗಳ ಜಾಡು ಹಿಡಿದ ಬರಹವೊಂದನ್ನು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…

Read More

ಬರಹ ಭಂಡಾರ