ಸ್ತ್ರೀ ವೇಷ: ಕೆಲವು ಬಿಡಿ ಆಲೋಚನೆಗಳು
ಶೈಲೀಕೃತ ಮಾಧ್ಯಮವಾದ ಯಕ್ಷಗಾನದಲ್ಲಿನ ಸ್ತ್ರಿ ಪಾತ್ರದ ಅತೀ ನಾಟಕೀಯತೆಯ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅದು ನನಗೆ ಪ್ರತಿರೋಧದ ಮಾದರಿಯಾಗಿ ಕಾಣುವುದಕ್ಕೆ ಅಥವಾ ಹಲವು ಸಾಧ್ಯತೆಗಳಿವೆ ಎಂದು ಅನ್ನಿಸುವುದಕ್ಕೆ ಸ್ವಲ್ಪ ವಿವರಣೆ ಬೇಕಾಗಬಹುದು. ಪ್ರಸಂಗಗಳನ್ನು ನೋಡುವಾಗ ಸ್ತ್ರೀ ಪಾತ್ರಗಳ ಆಯಾಮ ಹೆಚ್ಚಾಗಿ ಹೇಗಿರುತ್ತದೆ ಎಂದರೆ ಮೇಲೆ ಹೇಳಿದ ಮೌಲ್ಯಗಳ ಪ್ರಸಾರ ಅಥವಾ ಬೋಧನೆ ರೂಪದಲ್ಲಿರುತ್ತದೆ. ಅಂದರೆ ಹೆಣ್ಣು ಹೇಗಿರಬೇಕೆಂದು ಉಪದೇಶ ಮುಗಿಸಿ, ಈಗ ಮುಂದಿನ ಕತೆಯೊ, ದೃಶ್ಯಕ್ಕೊ ಹೋಗುವುದು ಅನ್ನುವ ಹಾಗಿರುತ್ತದೆ.
ಕೃತಿ ಆರ್ ಪುರಪ್ಪೇಮನೆ ಬರೆಯುವ ಅಂಕಣ “ಯಕ್ಷಾರ್ಥ ಚಿಂತಾಮಣಿ”