ಅಂಗಿ, ಮತ್ತದರ ಪ್ರಸಂಗಗಳು…: ಮಾರುತಿ ಗೋಪಿಕುಂಟೆ ಸರಣಿ
ಊರಿನ ಹುಡುಗರೆಲ್ಲ ನೋಡಿ ಹೇಗೆ ಹರಳೆಣ್ಣೆ ಹಚ್ಕೊಂಡು ಓಡಾಡ್ತ ಇದ್ದಾರೆ. ನಿಮಗೆ ಹಬ್ಬ ಬ್ಯಾಡ್ವ ಎಂದು ಅಜ್ಜಿ ಗದರಿದ್ದಳು. ನಾವೇನು ಹೊಸಬಟ್ಟೆ ಹಾಕ್ಕೋಳಲ್ಲ. ನಾವ್ಯಾಕೆ ಹರಳೆಣ್ಣೆ ಹಚ್ಕೊಬೇಕು ಎಂದು ಸುಮ್ಮನಾದೆವು. ಅಪ್ಪ ಬಂದು ಗದರಿದ. ನಾವು ವಿಧಿಯಿಲ್ಲದೆ ಅದಕ್ಕೆ ಸಿದ್ಧರಾದೆವು. ಎಣ್ಣೆಸ್ನಾನ ಆದಮೇಲೆ ಇದ್ದಕ್ಕಿದ್ದಂತೆ ಹೊಸ ಬಟ್ಟೆ ಕಾಣಿಸಿದವು. ಅವು ರೆಡಿಮೇಡ್ ಬಟ್ಟೆಗಳಾಗಿದ್ದವು. ಬುಟ್ಟಿ ತೋಳಿನ ರಬ್ಬರ್‌ನ ಎಳೆಯ ಅಲ್ಲಲ್ಲಿ ಮಿಂಚು ಕಾಣಿಸುವ ಇಂಗ್ಲೀಷ್ ಅಕ್ಷರದ ಉಲ್ಟಾ ಸೀದಾ ಅಡ್ಡ ಹೀಗೆ ನಾನಾ ರೀತಿ ಕಾಣುವ ಪ್ರಿಂಟೆಡ್ ಅಕ್ಷರಗಳ ಆ ‘ಅಂಗಿ’ ಆಧುನಿಕತೆಯ ‘ಟೀ ಶರ್ಟ್’ ಆಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾರನೆಯ ಕಂತು