Advertisement
ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

ಮೂಕ ನಾಯಕನ ದೇಶ ಯಾವುದು

ರಾಘವೇಂದ್ರಾಯ ನಮಃ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ್ದ ನಮಗೆ ಒಂದಿಷ್ಟು ನಯ ವಿನಯ ಪ್ಯಾಂಟಸಿ ರಮ್ಯತೆ ಇತ್ತು. ನಾವಾಗಿ ನಾವು ‘ದಲಿತ’ ರೂಪಿಸಿದಾಗ ಅಗ್ನಿ ಪರ್ವತದಂತೆ ಮನದೊಳಗೆ ಲಾವಾ ಕುದಿಯುತ್ತಿತ್ತು. ಆ ಮಳವಳ್ಳಿ ಪೈಲ್ವಾನನೂ ಬ್ಲೇಡೇಟಿನ ಚಿಕ್ಕಣ್ಣನೂ ನಮ್ಮ ಬೆನ್ನು ತಟ್ಟಿದ್ದರು. ಬೋರ್ಡಿಗೆ ಹಚ್ಚಿದ ಸಾಯಂಕಾಲದ ಒಳಗೆ ತರಾವರಿ ಕೀಳು ಬಯ್ಗಳಗಳು ಅದೇ ದಲಿತ ಪತ್ರಿಕೆಯ ಮೂಲೆಗಳಲ್ಲೆಲ್ಲ ದಾಖಲಾಗುತ್ತಿದ್ದವು. ಅವನ್ನೆಲ್ಲ ಇಲ್ಲಿ ದಾಖಲಿಸಲಾಗದು. ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ಬೆದೆಗೆ ಬಂದವಳ ಮೆದುವಾಗಿ ತಳ್ಳಿಬಿಟ್ಟಿದ್ದೆ

ಅವಳು ಬಿಗಿಯಾಗಿ ನನ್ನ ಕೈ ಹಿಡಿದೇ ಇದ್ದಳು. ವಿದಾಯದ ಗಳಿಗೆಯಲ್ಲಿ ಅಮರ ಪ್ರೇಮದ ಮೋಹವೇ…’ನಾಳೆ ಸಿಗುವೆ’ ಎಂದಿದ್ದೆ. ‘ನಿಜವಾಗ್ಲೂ… ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ಇನ್ನೊಂದ್ಸಲ ಹೇಳಿ’ ಎಂದು ಪ್ರತಿ ಉತ್ತರಕ್ಕೆ ಕಾದಳು. ಕೈ ಹಿಡಿದು ತಲೆ ಮೇಲೆ ಇಟ್ಟುಕೊಂಡಳು. ‘ನಾಳೆ ಅನ್ನೋದು ಕೂಡ ಒಂದು ಸುಳ್ಳು, ಅಂದಾಜು; ಕೇವಲ ನಿರೀಕ್ಷೆ…ಊಹೆ’ ಎಂದೆ.  ‘ಅಷ್ಟೆಲ್ಲ ಬೇಡ. ಸಿಕ್ತೀನಿ; ಸಿಗಲ್ಲಾ ಅನ್ನೊದ್ರಲ್ಲಿ ಯಾವ್ದಾದ್ರು ಒಂದನ್ನ ಹೇಳಿ ಏನೂ ಬೇಜಾರು ಮಾಡ್ಕೋದಿಲ್ಲ’ ಎಂದಳು. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ

Read More

ಯಾವ ಅಖಾಡಗಳಲ್ಲೂ ನಾನು ಗೆಲ್ಲಲಿಲ್ಲ

ಸುಮ್ಮನಿರಲಾರದ ನಾನು ಒಂದು ಚೇಷ್ಟೆ ಮಾಡಿದ್ದೆ. ಹುಡುಗಾಟಿಕೆಯೊ ಬರಹದ ಉತ್ಸಾಹವೊ; ಒಟ್ಟಿನಲ್ಲಿ ಹಾಸ್ಟೆಲಲ್ಲಿ ದೆವ್ವಗಳ ಕಾಟ ಎಂದು ವೆಂಕಟೇಶನ ಭೀತಿಯ ಬಗ್ಗೆ ಲೇಖನ ಬರೆದು ಬಿಟ್ಟಿದ್ದೆ. ಅದನ್ನು ಸಾಮಾನ್ಯರು ಓದಿದ್ದರೆ ಖಂಡಿತ ಹೆದರಿ ನಂಬಿಬಿಡುತ್ತಿದ್ದರು. ಆ ಪರಿಯಲ್ಲಿ ಹಾರಾರ್ ಆಗಿ ಬರೆದಿದ್ದೆ. ಕಲ್ಪನೆಯೇ ಹೆಚ್ಚಾಗಿತ್ತು. ಸುಮ್ಮನೆ ವೆಂಕಟೇಶನ ಜೊತೆ ‘ದೆವ್ವಗಳ ಕಾಟವಂತಲ್ಲಾ’ ಎಂದು ವಿಚಾರಿಸಿದ್ದೆ ಅಷ್ಟೇ. ಆತ ಒಂದಿಷ್ಟು ವಿವರ ಹೇಳಿದ್ದು ನಿಜ. ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ.

Read More

ನರಭಕ್ಷಕ ಹೆಜ್ಜೆಗಳ ಸಪ್ಪಳ

ಇವನೇನಾ ಆ ಸಾಹೇಬ… ಕುದುರೆ ಗಾಡಿಯ ಮೇಲೆ ಬಂದು ದಿಕ್ಕೆಟ್ಟವರಿಗೆ ಹೊಸ ಬಟ್ಟೆ ದಾನ ಮಾಡುತ್ತಿದ್ದವನು ಎನಿಸಿ ಅಚ್ಚರಿಗೊಂಡೆ. ಆ ಕಾಲಕ್ಕೇ ಆತ ವಿಪರೀತ ಲಂಚಕೋರನಾಗಿ ಹಲವು ಬಾರಿ ಸಸ್ಪೆಂಡ್ ಆಗಿದ್ದ. ಡಿಸ್‌ಮಿಸ್‌ ಒಂದೇ ಬಾಕಿ ಇದ್ದದ್ದು. ಆ ಮನೆಯೂ ಅವನದಾಗಿರಲಿಲ್ಲ. ಬಾಡಿಗೆ ಮನೆ ಅದು. ಅದರ ಅಳತೆಯೊ ಹತ್ತು ಬೈ ಹತ್ತು ಅಡಿ ಮಾತ್ರ. ಮೇಲೆ ತಗಡು ಹಾಸಿದ್ರು. ಸಾಲಾಗಿ ಅದೇ ತರದ ಇನ್ನೂ ನಾಲ್ಕು ಮನೆಗಳಿದ್ದವು.
ಮೊಗಳ್ಳಿ ಗಣೇಶ್ ಬರೆಯುವ ಸರಣಿ

Read More

ನರಕದಲ್ಲಿ ಕ್ಷಣ ಬೆರಳದ್ದಿ ಬಂದಿದ್ದೆ

ನನ್ನ ಇತಿ ಮಿತಿಯಲ್ಲಿ ಅವುಗಳಲ್ಲಿ ಬೇಕಾದವನ್ನು ಆಯ್ದುಕೊಂಡೆ. ಬರೆವ ಬಣ್ಣಗಳು ಆಗಲೇ ಹೈಸ್ಕೂಲು, ಪಿಯು ಕಾಲೇಜಿನಲ್ಲೆ ಅಂಟಿಕೊಂಡಿದ್ದವು ಎಂದು ಹೇಳಿದ್ದೆ. ಲೈಬ್ರರಿಯ ತರಾವರಿ ಗ್ರಂಥಗಳ ಬೆಟ್ಟ ಕಂಡ ಕೂಡಲೆ ಬರೆಯುವುದನ್ನೆ ಮರೆತುಬಿಟ್ಟಿದ್ದೆ. ಹಾದಿ ಬೀದಿಯಲ್ಲಿ ಅಲೆವಾಗ ಎಷ್ಟೊಂದು ಚೆಲುವೆಯರ ಕಂಡೆ; ನಗರದ ಮೂಲೆ ಮೂಲೆಯ ನರಕವ ಕಂಡೆ…
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ