ದಂಡ ಮೊಂಡರಿಂದ ದೇವರಿಗೆ ದಂಡವೆ
ತಾತ ಎಂದೆ, ಭಂಗವಾದಂತೆ ಎದ್ದುನಿಂತ. ಅವನ ಪರಮಾಪ್ತ ಪ್ರಿಯ ತಿನಿಸು ಎಂದರೆ ಎಲೆ ಅಡಿಕೆ ಹೊಗೆಸೊಪ್ಪು. ಊರವರು ತಾವಾಗಿಯೆ ಅವನಿಗೆ ನೀಡುತ್ತಿದ್ದರು. ಯಾರನ್ನೂ ಕೇಳುತ್ತಿರಲಿಲ್ಲ. ಹಾಗೆ ಕೊಡುವುದು ಗೌರವ ಸೂಚಕವಾಗಿತ್ತು. ಅವನ ಬಳಿ ಬಿಡಿಗಾಸು ಕೂಡ ಇರಲಿಲ್ಲ. ಬರಿಗಾಲ ನಡಿಗೆಯವನು ಅವನು. ಒಮ್ಮೆಯೂ ವಾಹನ ಏರಿ ಕೂತಿದ್ದವನಲ್ಲ. ಹಣದ ಬಗ್ಗೆ ಅಸಹ್ಯ. ಅದನ್ನು ಮುಟ್ಟುತ್ತಿರಲಿಲ್ಲ. ದೊಡ್ಡ ತಾತ ದುಡ್ಡು ಕೊಡಲು ಮುಂದಾದಾಗಲೆಲ್ಲ ವಿಷಾದ ಪಡುತ್ತಿದ್ದ. ನಿರಾಕರಿಸಿದ್ದ.
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ.