Advertisement

ಡಾ. ವಿನತೆ ಶರ್ಮ

ಗಣಿಗಾರಿಕೆ ಎಂಬ ಭೂಗತ ಜಗತ್ತಿನ ಅನಾವರಣ

ಮಿಂಚು ಹುಳುವಿನಂತೆ ಹೊಳೆಯುತ್ತಿದ್ದ ಆಫ್ರಿಕಾದ ‘ಡರ್ಬನ್’ ಕಡಲ ತೀರ ಸ್ವಲ್ಪ ಸ್ವಲ್ಪವೇ ಗೋಚರಿಸತೊಡಗಿತ್ತು. ಮತ್ತೂ ಮತ್ತೂ ಹತ್ತಿರವಾದಂತೆ ಕಡಲು ಮುಗಿಯಲೇ ಇಲ್ಲ. ಹಡಗಿನೊಳಗಿದ್ದ ಯಾರೂ ತೀರ ಕಂಡ ಬಳಿಕ ನಿದ್ರೆ ಮಾಡಿರಲಿಲ್ಲ. ಅಂತೂ ಬೆಳಗಿನ ಜಾವ ಸುಮಾರು ನಾಲಕ್ಕು ಗಂಟೆಯ ವೇಳೆಗೆ ಹಡಗು ಬಂದರು ತಲುಪಿತು. ಬರೋಬ್ಬರಿ ೭೨ ದಿನಗಳ ತರುವಾಯ ಹೊಸ ಮನುಷ್ಯರು, ಭೂಮಿ ಅವರ ಕಣ್ಣಿಗೆ ಬಿದ್ದಿತ್ತು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಒಂಭತ್ತನೇ ಕಂತು.

Read More

ಬದುಕಿನ ಹಡಗು ಮತ್ತೊಂದು ತೀರದೆಡೆಗೆ..

ಇನ್ನೇನು ಸುರಂಗ ಕೊರೆಯುವ ಕೆಲಸ ಮುಕ್ತಾಯವಾಗುತ್ತ ಬಂದಿತ್ತು. ಕೆಲವೇ ಅಡಿಗಳಷ್ಟೇ ಕೊರೆಯುವ ಕೆಲಸ ಬಾಕಿ ಉಳಿದಿತ್ತು. ಸುರಂಗ ಮುಂದೆ ಸಾಗಿದಂತೆ ಮರದ ದೊಡ್ಡ ದಿಮ್ಮಿಗಳನ್ನಿಟ್ಟು ಆಧಾರದಂತೆ ಕೊಡುವುದು ಇದಿನಬ್ಬನಿಗೆ ಮರೆತು ಹೋಗಿತ್ತು. ಆ ವಿಷಯ ನೆನಪಾಗುತ್ತಲೇ, ಓಡಿ ಓಡಿ ಎಂದು ಕಿರುಚಿದ. ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಇದಿನಬ್ಬನಿಗೆ ಓಡಲಾಗಲಿಲ್ಲ‌. ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಗುಡ್ಡದ ಒಂದು ಭಾಗ ಜರ್ರನೆ ಕುಳಿತೇ ಬಿಟ್ಟಿತು. ಇದಿನಬ್ಬನೂ ಸೇರಿ ನಾಲ್ಕೈದು ಜ‌ನರು ಆ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡರು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಎಂಟನೆಯ  ಕಂತು.

Read More

ಹಸಿವಿನ ವಿಕಾರದ ಮುಂದೆ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿ?

ಕರೀಂ ಸಾಹೇಬರ ಮನೆಯಿಂದ ಇದಿನಬ್ಬ ಓಡಿ ಬಂದಿದ್ದ. ಓಡಿ ಓಡಿ ದಣಿವಾಗಿ ಒಂದೆಡೆ ಕುಳಿತಾಗಲೇ ಅವನಿಗೆ ಹಸಿವಿನ ನೆನಪಾಯಿತು. ಜೊತೆಗೆ ಮನೆಯವರ ನೆನಪೂ ಕಾಡತೊಡಗಿತು. ಭಯಂಕರ ಕ್ಷಾಮವು ಆ ಊರನ್ನು ಅಡರಿಕೊಂಡಿದ್ದರಿಂದ, ತಿನ್ನಲು, ಕುಡಿಯಲು ಏನೂ ಸಿಗುತ್ತಿರಲಿಲ್ಲ. ಹಸಿವಿನ ಹಿಂಸೆ ರುದ್ರನರ್ತನ ಮಾಡುತ್ತಿತ್ತು. ಇದಿನಬ್ಬ ಮೊದಲ ಬಾರಿಗೆ ತನ್ನನ್ನೇ ತಾನು ಮಾರಿಕೊಳ್ಳಲು ನಿರ್ಧರಿಸಿದ. ಮತ್ತೊಂದು ಮಾಲೀಕತ್ವವು ಇದಿನಬ್ಬನನ್ನು ಎಲ್ಲಿಗೆ ಕರೆದೊಯ್ದಿತು ?
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಏಳನೇ ಕಂತು ಇಲ್ಲಿದೆ.

Read More

ಚಂದ್ರನ ಬೆಳಕು ಜೀರುಂಡೆಯ ಜೋಗುಳದಲ್ಲೊಂದು ನಿದ್ದೆ

ಎರಡ್ಮೂರು ಬಾರಿ ಆ ಶಬ್ದ ಆವರ್ತನೆಯಾಯಿತು. ಹಿಂದಿರುಗಿ ನೋಡಿದ. ಮತ್ತೆ “ಶ್ಶ್-ಶ್ಶ್” ಶಬ್ದ ಮತ್ತೆ ಕೇಳುತ್ತಿದೆ. ಇದಿನಬ್ಬನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವ. ಇನ್ನೇನು ಮಾಡುವುದೆಂದು ತೋಚದೆ ಕತ್ತಲಲ್ಲಿ ಬೆಕ್ಕಿನಂತೆ ಮೆಲ್ಲಗೆ ಮುಂದಡಿಟ್ಟ. ಆಗ ಕಂಡ ದೃಶ್ಯ ಎಂಥವನ ಎದೆಯಲ್ಲೂ ನಡುಕ ಹುಟ್ಟಿಸುವಷ್ಟು ಭಯಾನಕವಾಗಿತ್ತು. ಹೆಬ್ಬಾವಿನ ಗಾತ್ರದ ಕೊಳಕು ಮಂಡಲ ಹಾವೊಂದು ಲಾಟೀನು ಬೆಳಕಿಗೆ ಬುಸುಗುಡುತ್ತಿದೆ. -ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಾದಂಬರಿಯ ಆರನೇ ಕಂತು.

Read More

ನೀಲಕಡಲನು ಸೀಳಿ ತೇಲುತ ಸಾಗಿದ ಪಯಣ

ಹಡಗು ಮುಂದೆ ಹೋದಂತೆ ದೋಣಿಯ ಹಾಗೆ ಓಲಾಡಲು ಶುರುವಿಟ್ಟುಕೊಂಡಿತು. ಕಡಲಿನ ಅಲೆಗಳಿಗೆ ಲಯಬದ್ಧವಾಗಿ ಚಲಿಸಿದರೂ ಒಮ್ಮೊಮ್ಮೆ ಮುಗ್ಗರಿಸಿದಂತೆ ಅನಿಸುತ್ತಿತ್ತು. ಯಾರೋ ಒಂದಿಬ್ಬರು ಅಚ್ಚರಿಯಾಗಿ ಆ ದೃಶ್ಯ ನೋಡುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಭಾಷೆ ಅರಿಯದೆ ಇದಿನಬ್ಬ ತನ್ನ ಗತ ಬದುಕನ್ನು ಮೆಲುಕು ಹಾಕತೊಡಗಿದ. ತಾನು ಬದುಕಿನ ಯಾವ ಹಂತದಲ್ಲಿ ಇದ್ದೇನೆ ಎಂದು ಅರಿವಾಗುತ್ತಲೇ ದುಃಖ ಉಮ್ಮಳಿಸಿ ಬಂತು. ದುಃಖದಲ್ಲಿ ಅವನು ತಲೆಯಲ್ಲಿ ಹಾದು ಹೋದ ಯೋಚನೆಗಳೇನು?”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ