ಡರ್ಬನ್ ಇದಿನಬ್ಬ: ಗುಲಾಮಗಿರಿಯ ಗಾಡಿ ಏರಿ..
ಆಗಂತುಕ ಗಾಡಿಯೆಡೆಗೆ ಸಾಗಿದ. ಗಾಡಿ ಚಾಲಕ ಮತ್ತು ಆಗಂತುಕ ಮಾತನಾಡಿದರು. ಇದಿನಬ್ಬನಿಗೆ ಗಾಡಿಯೇರಲು ಆಗಂತುಕ ಹೇಳಿದ. ಎತ್ತಿನ ಗಾಡಿ ಆಗಂತುಕ ಸೂಚಿಸಿದ ಒಂದು ದಾರಿ ಹಿಡಿದು ‘ಗಡ- ಗಡ’ ಸದ್ದನ್ನು ಮಾಡುತ್ತಾ ಮುಂದೆ ಸಾಗಿತು. ಮೈಲುಗಳು ಮೈಲುಗಳನ್ನು ದಾಟಿ ಆ ಧೂಳಿನಿಂದಾವೃತಗೊಂಡ ಮಣ್ಣಿನ ರಸ್ತೆಯಲ್ಲಿ ಕುಳಿತಿದ್ದವರನ್ನೆಲ್ಲಾ ಅಲ್ಲಾಡಿಸಿ ಎಸೆದೆಸೆದು ಗಾಡಿ ಬಹಳಷ್ಟು ದೂರ ಸಾಗಿತು. -ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ನಾಲ್ಕನೇ ಕಂತು.
Read More