Advertisement
ರವಿ ಮಡೋಡಿ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‌‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು.  ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ  ‘ಮಲೆನಾಡಿನ ಯಕ್ಷಚೇತನಗಳು’  ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಜೇಡ ಕಡಿಸಿಕೊಂಡವ ನೀನು, ಸ್ಪೈಡರ್ ಮ್ಯಾನ್ ಆಗ್ತೀಯ! : ಮುನವ್ವರ್ ಜೋಗಿಬೆಟ್ಟು ಅಂಕಣ

“ನಮ್ಮ ಹೆಂಚಿನ ಮನೆಯಲ್ಲಿ ಜೇಡರ ಬಲೆ ತೆಗೆಯುವುದೇ ಕಡು ಕಷ್ಟದ ಕೆಲಸ. ತೆಗೆದ ಒಂದೇ ವಾರಕ್ಕೆ ಇಲ್ಲಿ ಒಕ್ಕಲೇ ಇಲ್ಲ ಎನ್ನುವಷ್ಟು ಜೇಡರಬಲೆ ತುಂಬಿ ಬಿಡುತ್ತಿದ್ದವು. ಆಗೆಲ್ಲಾ ಒಂದು ಮಾತಿತ್ತು. “ಗಂಡಸರು ಜೇಡರ ಬಲೆ ತೆಗೆದರೆ ಜೇಡ ಬಲೆ ಕಟ್ಟುವುದು ನಿಲ್ಲಿಸುವುದಂತೆ” ಅಂತ. ಆದರೆ ಇದೆಷ್ಟು ಸುಳ್ಳು ಅಂದರೆ ನಾನು ಬಲೆ ತೆಗೆದ ಮೂರನೇ ದಿನಕ್ಕೆ ಮತ್ತೆ ಜೇಡಗಳು ಬಲೆ ಕಟ್ಟಲು ತೊಡಗುತ್ತಿದ್ದವು….”

Read More

ಜೋಗಿಬೆಟ್ಟುವಿನಲ್ಲಿ ಚಿರತೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ಒಮ್ಮೆ ನಮ್ಮಜ್ಜಿ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾಯಿತಂತೆ. ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಮುತ್ತಜ್ಜಿಯ ಧ್ವನಿ ಗುರುತಿಸಿ ಬರುತ್ತಿದ್ದ ದನ ಎಷ್ಟು ಕರೆದರೂ ಬಾರಲೇ ಇಲ್ಲವಂತೆ. ಕೊನೆಗೆ ಆಗ ಸಣ್ಣವರಿದ್ದ ನನ್ನಜ್ಜಿಯನ್ನು ಕೈಲಿ ಹಿಡಿದುಕೊಂಡು ಮುತ್ತಜ್ಜಿ ಹುಡುಕಲೆಂದು ಹೊರಟರಂತೆ. ಅದು ಸಂಜೆಯ ಹೊತ್ತು, ಮುತ್ತಜ್ಜಿ ಮೊದಲಡಿ ಬಳಿಗೆ “ದಾ ದಾ” ಎಂದು ಕರೆಯಬೇಕಾದರೆ..”

Read More

ಕಪ್ಪೆ-ಮೀನುಗಳೂ ಮತ್ತು ತುಂಟ ಹುಡುಗರು: ಮುನವ್ವರ್ ಜೋಗಿಬೆಟ್ಟು ಅಂಕಣ

“ಅಬ್ಬನ ಬ್ಯಾಟರಿ ಟಾರ್ಚು ತೆಗೆದು ಬಾಗಿಲ ಸಂದಿಗೆ ಬಿಟ್ಟೆ. ಬೆಳಕು ಬಿದ್ದೊಡನೆ ಕಂದು ಬಣ್ಣದ ಹಾವೊಂದು ಬೆಳಕಿನೆಡೆಗೆ ದುತ್ತನೆ ಹಾರಿ ಬಿತ್ತು. ಗಾಬರಿಯಿಂದ ಉಮ್ಮನನ್ನು ಕರೆದೆ. ಅಡುಗೆ ಮಾಡುತ್ತಿದ್ದ ಉಮ್ಮ ಓಡೋಡಿ ಬಂದವರೇ, ಹಾವನ್ನು ನೋಡುತ್ತಾ “ಓಹ್ ಬಾರಿ ಸಣ್ಣದು, ಕನ್ನಡಿ ಹಾವು. ನಿನ್ನ ಹಾಳಾಗಿ ಹೋದ ಕಪ್ಪೆಯ ಮೇಲಿನ ಕನಿಕರದಿಂದಲೇ ಅದು ಇಲ್ಲೇ ಬೇಟೆಗೆ ಬಂದು ಕುಳಿತಿದೆ…”

Read More

ದಾರಿ ಮರೆತ ಇರುವೆಗಳು: ಮುನವ್ವರ್ ಜೋಗಿಬೆಟ್ಟು ಅಂಕಣ

“ಪೇರಳೆಯ ಹುಚ್ಚಿಗೆ ನಾವು ಅನೇಕ ಬಾರಿ ಚಿಗಳಿ ಇರುವೆಗಳಿಂದ ಕಚ್ಚಿಸಿಕೊಂಡದ್ದಿದೆ. ಅದರ ಕಡಿತದ ವಿಪರೀತ ಉರಿಯನ್ನು ಸಹಿಸಿಕೊಳ್ಳುವುದೇ ಅಧ್ವಾನ. ಒಮ್ಮೆ ಮನೆಯ ಹಿತ್ತಲಲ್ಲಿದ್ದ ಪೇರಳೆ ಮರಕ್ಕೆ ಹತ್ತಿದವನು ಹಣ್ಣಾದ ಪೇರಳೆ ಕಂಡು ಬಾಗಿದ್ದ ರೆಂಬೆಯೊಂದರ ಮೇಲೆ ಹೋಗಿದ್ದೆ. ಇನ್ನೇನು ಹಣ್ಣೆಟಕುತ್ತದೆ ಎನ್ನುವಷ್ಟರಲ್ಲಿ ತಲೆಯ ಸ್ವಲ್ಪವೇ ಮೇಲಿದ್ದ ಚಿಗುಳಿ ಇರುವೆಗಳ ಗೂಡಿಗೆ ಕೈ ತಾಗಿತು.”

Read More

ಶಾಂತಿ ಮರದ ಬಳಿ ಜಂಗಮ ಮುಳ್ಳು ಪೊದೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ