ಉಕದ ಹಾಗಿದ್ದ ನಾನು, ದಕದ ಹಾಗಿದ್ದ ಅವನು: ನಾಗಶ್ರೀ ಶ್ರೀರಕ್ಷ ಬರಹ
ಇರುಳ ಬೆಳಕಲ್ಲಿ ನಾವು ಅದೆಷ್ಟೋ ಗುಟ್ಟಿನ ಕತೆಗಳನ್ನು ಹೇಳಿಕೊಳ್ಳುತ್ತಿದ್ದೆವು. ಬೆಳಕೆಂದರೆ ಅದು ಒಂದಷ್ಟು ನಕ್ಷತ್ರಗಳನ್ನು ಕಟ್ಟಿಕೊಂಡು ಚಂದ್ರನು ರಾಜನಂತೆ ಬೆಳಗುತ್ತಿದ್ದ, ಇರುಳೆಂದರೆ ಅವನನ್ನೂ ಮೀರಿ ತೂರುವ ಹಾಗೆ ಇರುವ ಮಯಮಯ ಮುಗ್ದ ಇರುಳು. ನಾವೆಂದರೆ ಅಲ್ಲಿ ಗಂಡು ಹೆಣ್ಣು ಇದಾವುದೂ ಆಗಿರಲಿಲ್ಲ.
ಬರಹಗಾರ್ತಿ ನಾಗಶ್ರೀ ಶ್ರೀರಕ್ಷ ತೀರಿಕೊಂಡು ಇಂದಿಗೆ ಐದು ವರ್ಷಗಳು ಕಳೆದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಅವರ ನೆನಪಿನಲ್ಲಿ ಅವರದ್ದೊಂದು ಬರಹ ನಿಮ್ಮ ಓದಿಗೆ