ಎಂದಿಗೂ ಸಲ್ಲುವ ಕನಸಿನ ನೆಲೆ-ಹಿನ್ನೆಲೆ
ಈ ಕಾದಂಬರಿಯಲ್ಲಿ ಯೋಧ, ರಾಜನೀತಿಜ್ಞ, ನಟ-ವಿಟ, ವಿಪ್ರ, ವರ್ತಕ, ಶ್ರಮಿಕ, ಶ್ರಮಣ, ಗೃಹಸ್ಥ-ಗೃಹಿಣಿ ಎಲ್ಲರಲ್ಲಿಯೂ ತಮ್ಮ-ತಮ್ಮ ನೆಲೆ, ನಿಲವು, ಬೆಳಸು-ಕನಸುಗಳೆಲ್ಲದಕ್ಕೆ ಹಿಮ್ಮೇಳವಾದ ಧರ್ಮ, ಸಂಸ್ಕೃತಿ, ಕಲೆಗಳನ್ನು ಒಂದು ಸೂರಿನಡಿ ಕಾಯ್ದಿಡುವ ರಾಷ್ಟ್ರಪ್ರಜ್ಞೆಯ ಪಸೆಯನ್ನು ಕಾಣುವ ಹಂಬಲವಿದೆ. ಹಾಗೆಂದು ಇದು ಸಮಾಜ-ರಾಜಕೀಯ-ಧರ್ಮಗಳ ಗಡಸು ಮುದ್ದೆಯಲ್ಲ; ಸಂಸ್ಕೃತಿಯ ಸಂವೇದನೆಯಲ್ಲಿ, ಸಾರ್ವತ್ರಿಕವಾದ ಜೀವನತತ್ತ್ವ-ಕಲಾತತ್ತ್ವಗಳ ನೆಲಗಟ್ಟು-ಸೂರುಗಳ ನಡುವೆ ಬೆಳೆದ ಕಾದಂಬರೀವಧುವಿನ ಯಾತ್ರೆ.
ಶತಾವಧಾನಿ ಡಾ. ಗಣೇಶ್ ಬರೆದ “ಮಣ್ಣಿನ ಕನಸು” ಕಾದಂಬರಿಯ ಕುರಿತು ನೀಲಕಂಠ ಕುಲಕರ್ಣಿ ಲೇಖನ