ಅಪರಾಧ ಮತ್ತು ಶಿಕ್ಷೆ: ಇದು ಯಾವ ಪಾಪಕ್ಕೆ…?
ಸಿಡಿಲು ಬಡಿದವಳ ಹಾಗೆ ಕ್ಯಾತರೀನ ಸುಮ್ಮನೆ ನಿಂತಳು. ಪೀಟರ್ ಪೆಟ್ರೊವಿಚ್ ಅದು ಹೇಗೆ ಉಪ್ಪಿನ ಋಣ ಮರೆಯಬಲ್ಲ ಅನ್ನುವುದು ಅರ್ಥವೇ ಆಗಲಿಲ್ಲ ಅವಳಿಗೆ. ನಮ್ಮಪ್ಪನ ಉಪ್ಪಿನ ಋಣ ಅವನಮೇಲಿದೆ ಎಂದು ಒಮ್ಮೆ ಕಲ್ಪನೆ ಮಾಡಿಕೊಂಡ ನಂತರ ಆ ಕಲ್ಪನೆಯನ್ನೇ ಅವಳು ನಿಷ್ಠೆಯಿಂದ ನಂಬಿಕೊಂಡಿದ್ದಳು. ಪೀಟರ್ ಪೆಟ್ರೊವಿಚ್‌ನ ಮಾತಿನ ದನಿಯೂ ಆಘಾತ ತಂದಿತ್ತು. ತೀರ ವ್ಯಾವಹಾರಿಕವಾದ, ನಿರ್ಭಾವವಾದ, ಭಯಹುಟ್ಟಿಸುವಂಥ ತಿರಸ್ಕಾರ ಅವನ ದನಿಯಲ್ಲಿತ್ತು.
. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.