Advertisement
ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಅಲ್ಲೀಬಾದಿಯ ಮೃಗಶಿರ ಮಳೆಹಾಡ ನೆನಪು

ಮಣ್ಣೆತ್ತಿನ ಅಮಾವಾಸೆ ದಿನ ಗುಳ್ಳವ್ವ ಕೂಡುತ್ತಾಳೆ. ಇವಳು ಐದು ವಾರ ಇರುತ್ತಾಳೆ. ಹದಿಹರೆಯದ ಹುಡುಗಿಯರು ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವರು. ಅವರ ಜೊತೆ ಗುಳ್ಳವ್ವ ಐದು ವಾರ ಇರುವುದರಿಂದ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ವಾರದ ಕೊನೆಯ ದಿನ ಹೊಲದಲ್ಲಿ ಹುಗಿಯುವಾಗ ಇಲ್ಲವೇ, ಗಿಡದ ಮೇಲೆ ಕೂಡಿಸಿ ಬರುವಾಗ ಬಿಕ್ಕಿಬಿಕ್ಕಿ ಅಳುತ್ತಾರೆ. ಗುಳ್ಳವ್ವ ಕೂಡ ಮಳೆಗೆ ಸಂಬಂಧಿಸಿದ ದೇವತೆಯಾಗಿದ್ದಾಳೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ

Read More

ಜಾತಿಯೆಂಬ ತಡೆರೇಖೆಗಳನ್ನು ದಾಟಿಕೊಂಡು..

ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.”

Read More

ಜಾತಿಗಿಂತ ನೀತಿಗೇ ಹೆಚ್ಚಿನ ಬೆಲೆಯಿದ್ದ ಕಾಲ

ಬಯಲಾಟದಲ್ಲಿ ದ್ರೌಪದಿ ಪಾತ್ರದ ಗಣಪು ಬಂದು ಒಂದಿಷ್ಟು ಕುಣಿದು ಮಾತನಾಡುವಾಗ ಆತನ ಧ್ವನಿ ಒಡೆದದ್ದು ಗೊತ್ತಾಯಿತು. ರಂಗತಾಲೀಮದಲ್ಲಿ ಮಾತಾಡಿ ಮಾತಾಡಿ ಆತ ಧ್ವನಿ ಕಳೆದುಕೊಂಡಿದ್ದಾನೆಂದು ಅಜ್ಜಿ ನನಗೆ ಹೇಳಿದಳು. ಅಜ್ಜಿಯ ಲಕ್ಷ್ಯ ಹೆಚ್ಚಾಗಿ ಅವನಿಗೆ ಹಾರ ಹಾಕಿ ಒಂದು ರೂಪಾಯಿ ಬಹುಮಾನ ಕೊಡುವುದರ ಕಡೆಗೆ ಇತ್ತು. ಎರಡನೇ ಸಲ ರಂಗದ ಮೇಲೆ ಬಂದಾಗ ಹಾರ ಹಾಕಿ ಬಹುಮಾನ ಕೊಡುವುದಕ್ಕಾಗಿ..”

Read More

ಅಜ್ಜಿಯೀಗ ಅಗಸಿ ಬಾಗಿಲ ದಾಟಿರಬಹುದೆ?

ಮೊದಲ ಸಲ ನನ್ನ ಅಜ್ಜಿಯ ಜೊತೆ ರವಿವಾರ ಸಂತೆ ದಿನ ನಡೆಯುತ್ತ ವಿಜಾಪುರಕ್ಕೆ ಹೋಗುವಾಗ ಬಹಳ ದೂರದಿಂದಲೆ ಬೃಹತ್ತಾದ ಗೋಲಗುಂಬಜವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಆಗೊಮ್ಮೆ ಈಗೊಮ್ಮೆ ಕಾಣಿಸುವ ಕಾರುಗಳು, ಲಾರಿಗಳು ಮುಂತಾದವುಗಳ ಜೊತೆ ನಮೂನೆ ನಮೂನೆ ವೇಷಭೂಷಣದ ಜನರು ಮಜವಾಗಿ ಕಾಣುತ್ತಿದ್ದರು. ನಮ್ಮ ಹಳ್ಳಿಯಲ್ಲಾದರೆ ಬಹುಪಾಲು ಜನರು ಧೋತರ ಮತ್ತು ಮಾಂಜರಪಾಟ್ ಬಟ್ಟೆಯಿಂದ ಹೊಲಿದ ಕುಂಬಳಛಾಟಿ…”

Read More

ಆಕೆ ಹಗಲ್ಹೊತ್ತು ಬಯಲಿಗೆ ಹೋದದ್ದೇ ತಪ್ಪಾಯ್ತು!

ಹೈನುಳ್ಳವರು ದೊಡ್ಡ ಪಾತ್ರೆಯಲ್ಲಿ ಮೊಸರು ಕಡೆಯುತ್ತ ಬೆಣ್ಣೆ ತೆಗೆಯುವುದನ್ನು ನೋಡುವುದೇ ನನಗೆ ಸೋಜಿಗವಾಗಿತ್ತು. ಮೊಸರು ಮಜ್ಜಿಗೆಯಾಗಿ ಅದರೊಳಗಿಂದ ಬೆಣ್ಣೆ ಬರುವುದನ್ನು ನೋಡಲಿಕ್ಕೆ ಮಜಾ ಅನಿಸುತ್ತಿತ್ತು. ದೊಡ್ಡ ಕಡೆಗೋಲನ್ನು ಕಂಬದ ಆಧಾರದ ಮೇಲೆ ದೊಡ್ಡ ಪಾತ್ರೆಯಲ್ಲಿ ಇಳಿಬಿಟ್ಟು ಅದಕ್ಕೆ ಸಣ್ಣ ಹಗ್ಗ ಸುತ್ತಿ ಎರಡೂ ಕೈಯಿಂದ ಮಥಿಸುತ್ತಿದ್ದರು. ಮಜ್ಜಿಗೆಯನ್ನು ಎಂದೂ ಮಾರುತ್ತಿರಲಿಲ್ಲ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ