Advertisement

ದೇವಿಕಾ ನಾಗೇಶ್

ಶಾಲೆ ಕಳ್ಳ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಎಷ್ಟೋ ಸಲ‌ ಗೇಟ್ ಹತ್ತಿರ ಹೋಗುವಾಗಲೇ ಶಾಲೆಯ ಪ್ರಾರ್ಥನೆ ಶುರುವಾಗುತ್ತಿತ್ತು. ಪ್ರಾರ್ಥನೆ ಹೇಳುವ ಮಕ್ಕಳ ಸಮೂಹ ಗಾಯನದಲ್ಲಿ, “ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ…” ಅಂತ ಕೇಳುವಾಗಲೇ ಅಳು ಉಕ್ಕಿ ಉಕ್ಕಿ ಬರುತ್ತಿತ್ತು. ತಡ ಆಯ್ತು, ಇನ್ನು ಟೀಚರ್ ಹೊಡಿತಾರೆ, ಅಮ್ಮ ಬಿಟ್ಟು ಹೋದ್ರು ಅನ್ನೋದು ಮಾತ್ರವಲ್ಲದೇ ಎದೆಯಲ್ಲಿ ಯಾವುದೋ ಏಕಾಂಗಿ ಭಾವ ಉಕ್ಕಿ ದುಃಖ ಉಮ್ಮಳಿಸಿ ಬರುತ್ತಿತ್ತು. ಅದು ಆ ಪ್ರಾರ್ಥನೆಯ ರಾಗದಿಂದ ಹಾಗಾಗುತ್ತಿತ್ತೋ ಅಥವಾ ಬೇರಾವುದರಿಂದಲೋ ಗೊತ್ತಾಗುತ್ತಿರಲಿಲ್ಲ. ನಿಂತಲ್ಲಿಯೇ ಜೋರಾಗಿ ಅತ್ತು ಬಿಡುತ್ತಿದ್ದೆ.
ಶಾಲೆಗೆ ಹೋಗುವುದನ್ನು ತಪ್ಪಿಸಲು ನೋಡುವ ಶಾಲೆ ಕಳ್ಳರ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

Read More

ಕಾವ್ಯಕುತೂಹಲ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಕೆಲವು ಸಾಲುಗಳು ಹುಟ್ಟಿಸುವ ಬೆರಗು ಮಾತ್ರ ಸಾಕು ಒಂದೀಡಿ ಕವಿತೆಯನ್ನು ಓದಲು. ಬಿಡಿಬಿಡಿಯಾಗಿ ಎದೆಹೊಕ್ಕುವ ಸಾಲುಗಳು ಮತ್ತೆಂದೋ ಯಾವುದೋ ಅನುಭವದಲ್ಲಿ ಯಾರದ್ದೋ ಸಾನಿಧ್ಯದಲ್ಲಿ ಪೂರ್ಣಗೊಳ್ಳುತ್ತವೆ. ಅವಳಲ್ಲಿ ಬಿಡಿಬಿಡಿಯಾಗಿದ್ದ ಹೂಗಳು ಅವನು ಸಿಕ್ಕಿದಾಗ ಮಾಲೆಯಾಗುವ ಸೋಜಿಗದಂತೆ! ಬಿಡಿಸಲಾಗದ ಅಚ್ಚರಿ ಇದು. ಅಚ್ಚರಿಯೇ ಪ್ರೇಮ. ಅದೇ ಕವಿತೆ.
ಕಾವ್ಯದ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ

Read More

ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ

ದೊಡ್ಡ ಮನೆ, ಐದೆಕರೆ ಫಲವತ್ತಾದ ಕೃಷಿಭೂಮಿ, ಅಡಕೆ ತೋಟ ಮೇಲಾಗಿ ಅತ್ತೆ ನಾದಿನಿಯರ ಕಾಟವಿಲ್ಲದ ಎಲ್ಲರೂ ಬಯಸುವ ಕನಸಿನ ಸಂಸಾರ! ಏನು ಕೊರತೆ ಇತ್ತು ಸುಖಕ್ಕೆ? ಆದರೆ ಯಾಕೋ ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಯಾವುದೇ ಸಂಭ್ರಮ ಕಾಣದೇ ನಿಧಾನವಾಗಿ ಸಂಸಾರದೊಳಗೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡದ್ದು ಅಷ್ಟು ಬೇಗನೇ ಯಾರ ಅರಿವಿಗೂ ಬರಲಿಲ್ಲ. ಆದರೆ ಎಲ್ಲರ ಅರಿವಿಗೆ ಬರುವ ಹೊತ್ತಿಗೆ ಬಹಳ ತಡವಾಗಿ ಹೋಗಿತ್ತು.
ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಕತೆ “ಶಿಕ್ಷೆ” ನಿಮ್ಮ ಈ ಭಾನುವಾರದ ಓದಿಗೆ

Read More

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

“ಮೊರೆಯುವ ಅಲೆಗಳ ಕೋಲಾಹಲ ತೀರಕ್ಕೆ ತಾಕುವುದೆ?
ನೋಡುವುದಷ್ಟೇ ಗೊತ್ತು ತೀರಕ್ಕೆ
ಇಲ್ಲದ ದ್ವಂದ್ವಗಳಲ್ಲಿ ನನ್ನನ್ನು ಸಿಲುಕಿಸದಿರು
ಕಲ್ಲಾಗಿರಲು ಗೊತ್ತು ನನಗೆ.”- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

Read More

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

“ಭೂಮಿ ಆಕಾಶ ಸಂಧಿಸದೇ ಉಳಿದಲ್ಲಿ
ಸದಾ ಕಣ್ಮಿಟುಕಿಸಿ ಕರೆಯುವ ಬಯಲು.
ಚಲಿಸುವ ಚಕ್ರಗಳು ಮುರಿದ ಕಡೆಯಲ್ಲೆಲ್ಲಾ
ಹಾರುವ ಬಣ್ಣಬಣ್ಣದ ಚಿಟ್ಟೆಗಳ ನೆರಳು
ಹಿಡಿ ಹಿಡಿ ಎಂದು ಸವಾಲೆಸೆದು
ಮುಟ್ಟದಂತೆ ಮುಟ್ಟಿ
ಹತ್ತಿರವಾದಂತೆ ದೂರ ಸರಿದು
ಸದಾ ಸೆಳೆಯುವ ಸಂತಸದ ಹೊನಲು.”- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ