Advertisement
ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

ಅಂತಃಕರಣದ ಕಂಪನಗಳನ್ನು ಹುಡುಕುತ್ತ ಹೊರಟಿರುವ ಸುಬ್ಬು ಹೊಲೆಯಾರರ ಕಾವ್ಯ

“ಮೈಲಿಗೆಯ ನಿತ್ಯಸೂತಕವನ್ನು ಮೆಟ್ಟಿನಿಲ್ಲಲು ಅವನೊಳಗಿನ ಅಸಲು ಮಾನವೀಯಗುಣ ಸಹಾಯಕವಾಗಿ ನಿಂತಿದೆ. ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುವವರ ವಿರುದ್ಧ ಮಾತನಾಡುವಾಗಲೂ ಮನುಷ್ಯತ್ವದ ಘನತೆಯನ್ನು ಬಿಟ್ಟುಕೊಡದೆ ಇಲ್ಲಿನ ಕವಿತೆಗಳು ಜಾತಿಸಂಘರ್ಷದ ಸಮೀಕರಣಗಳನ್ನು ಹೊಸರೀತಿಯಲ್ಲಿ ನೋಡಿವೆ. ಇವು ದಲಿತತ್ವದ ಅಸ್ಮಿತೆಯನ್ನೂ..”

Read More

ನವಿಲುಗಣ್ಣಿನ ಕಾವ್ಯದ ಆದರ್ಶ ಹಾಗೂ ದುರಂತ

“ಆಕ್ರೋಶದ ತೀವ್ರತೆಯಿದ್ದರೂ ಹಿಂಸೆ-ಪ್ರತೀಕಾರದ ಸೋಂಕಿಲ್ಲದ, ಸ್ವಮರುಕ ಪೂರ್ವಾಗ್ರಹಗಳ ಭಾರವಿಲ್ಲದ ಹದವಾದ ಮನಸ್ಥಿಯನ್ನು ತೋರುವುದರಿಂದ ಅದು ನಿಜವಾದ ಅರ್ಥದಲ್ಲಿ ‘ನೆಲದ ಕರುಣೆಯ ಕಾವ್ಯ’ವಾಗಿದೆ. ಇದನ್ನು ವಿಸ್ತರಿಸಿ ಹೇಳುವುದಾದರೆ, ಬದುಕು ಎಷ್ಟೇ ನಿರ್ದಯವಾಗಿದ್ದರೂ, ವ್ಯವಸ್ಥೆ ಎಷ್ಟು ಬರ್ಬರವಾಗಿದ್ದರೂ ವಸಂತನನ್ನು ಹಡೆದು ಮನುಷ್ಯ ಸಮಾಜಕ್ಕೆ ತಾಯ್ತನದ ಪ್ರೀತಿ ವಾತ್ಸಲ್ಯಗಳನ್ನು ಊಡಿಸುವ ಹಂಬಲವಿರುವ…”

Read More

“ಕಾಬೂಲಿವಾಲ” ಎಂಬ ಕಳೆದುಹೋದ ನಂದನದ ಕತೆ: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಕತೆಯ ಒಳವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರಂಭದಲ್ಲಿ ಅವನ ಆಕಾರ ಭಾಷೆ ವೇಷ ಭೂಷಣಗಳ ಕಾರಣದಿಂದ ಕೇವಲ ಕಾಬೂಲಿವಾಲನಾಗಿದ್ದ ವ್ಯಕ್ತಿ ನಿಧಾನವಾಗಿ ರಹಮತಖಾನನಾಗಿದ್ದಾನೆ. ಕಾಬೂಲಿವಾಲ ಹಾಗೂ ಮಿನಿಯ ನಡುವೆ ನಿಧಾನವಾಗಿ ಗಟ್ಟಿಗೊಳ್ಳುತ್ತಿರುವ ಸ್ನೇಹಕ್ಕೆ ಅವಳ ತಂದೆಯ ಸಮ್ಮತಿ ಇಲ್ಲದಿದ್ದರೂ ಮಿನಿಯ ತಾಯಿಯಂತೆ ಬಲವಾದ ವಿರೋಧವಿಲ್ಲ. ನಿತ್ಯವೂ ಕಾಬೂಲಿವಾಲ ಬಂದು ಮಿನಿಯ ಜೊತೆ ಆಟವಾಡುತ್ತ ಅವಳಿಗೆ..”

Read More

ವ್ಯಕ್ತಿಗಳ ತಲ್ಲಣಗಳ ಮೂಲಕ ರಾಜಕೀಯ ಸಾಮಾಜಿಕ ಪ್ರಶ್ನೆಗಳನ್ನು ಕೇಳುವ ಇಷಿಗುರೊ: ಎಸ್. ಸಿರಾಜ್ ಅಹಮದ್ ಅಂಕಣ

“ಸ್ಟೀವನ್ಸ್ ತನ್ನ ವೃತ್ತಿಯ ಹುಸಿ ಘನತೆ ಮತ್ತು ಹೊಣೆಗಾರಿಕೆಗಳಲ್ಲಿ ಅವನ ಒಳ ಬದುಕು ಎಷ್ಟು ಮುರುಟಿಹೋಗಿದೆ ಎಂದರೆ ಅವನು ಅಪರೂಪಕ್ಕೆ ಎಂಬಂತೆ ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು ತನ್ನ ವೃತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲೀಷನ್ನು ಸರಿಪಡಿಸಿಕೊಳ್ಳಲು ಮಾತ್ರ! ಸ್ಟೀವನ್ಸ್ ಏನು ಓದುತ್ತಾನೆ, ಅವನ ಕತ್ತಲಗೂಡಿನಂತಹ ಕೋಣೆಯಲ್ಲಿ ಯಾಕೆ ಒಂದು ಹೂಗುಚ್ಛವನ್ನೂ ಇಡಲು ಜಾಗವಿಲ್ಲ ಎಂದೆಲ್ಲ ಯೋಚಿಸುತ್ತ, ಅವನ ಅಂತರಂಗವನ್ನು ತಡವಿ, ಒಳಗನ್ನು ಅರಿತುಕೊಳ್ಳುವ ಆಸೆಯಿಂದ ಹೊರಡುವ ಮಿಸ್ ಕೆಂಟನ್‍ ಗೆ ಅಲ್ಲಿ ಕಾಣುವುದು ಇಂಥ ಒಣ ಶಿಷ್ಟಾಚಾರ, ವೃತ್ತಿಯ ಬಗೆಗಿನ ಕುರುಡು ನಿಷ್ಠೆ. ಮಾತ್ರ.”
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ

Read More

ಕುಶಲದರ್ಜಿ ಗೋಪಾಲಿಯ ವ್ಯಾಕುಲಗಳು: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಹೀಗಿರುವಾಗ ಎಲ್ಲೋ ಏನೋ ತಪ್ಪಿದಂತೆ ಕಾಣುತ್ತಿತ್ತು. ಅವನ ಸಣ್ಣಪ್ರಾಯದ ಎರಡನೆಯ ಹೆಂಡತಿ ಅವನಿಗಿಂತ ಹೆಚ್ಚು ಸಮಯವನ್ನು ಅವನ ಪುಟ್ಟ ಅಂಗಡಿಯಲ್ಲಿ ಕಳೆಯಲು ಶುರು ಮಾಡಿದಳು. ಅವಳು ಯಾರು ಬಂದು ಏನು ಮಾತಾಡಿದರೂ ಗಂಡನನ್ನೇ ದಿಟ್ಟಿಸಿ ನೋಡುವಾಗ ಏನೋ ಕಸಿವಿಸಿಯಾಗುತ್ತಿತ್ತು. ಊದುಗೆನ್ನೆಯ, ಉರುಬಿದ ಹೊಟ್ಟೆಯ ಈ ಆಸಾಮಿಯ ಮೇಲೆ ಅವನ ಹೆಂಡತಿ ಯಾಕಿಷ್ಟು ನಿಗಾ ಇಡುತ್ತಿದ್ದಾಳೆಂದು ನಮಗೆ ಮೋಜೆನಿಸುತ್ತಿತ್ತು.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ…

Read More

ಬರಹ ಭಂಡಾರ