ಕೂರಾಪುರಾಣ ೧೨: ಹಿಡಿ ಪ್ರೀತಿಗೆ ಹಂಬಲಿಸುತ್ತ, ಹೃದಯ ಕರಗುವಷ್ಟು ಪ್ರೀತಿಸುತ್ತ..
ಬೆನ್ನು ಸವರತೊಡಗಿದರೆ ಅಡ್ಡ ಬಿದ್ದು ಹೊಟ್ಟೆಯನ್ನು ಕೆರೆ ಎಂಬಂತೆ ಮುಂದಿನ ಎರಡು ಕಾಲುಗಳನ್ನು ಮಡಚಿದಾಗ ಮುದ್ದುಕ್ಕದೇ ಹೇಗೆ ಸಾಧ್ಯ? ಒಂದು ವೇಳೆ ನಾನು ಏಳುವುದು ತಡವಾದರೆ ನನ್ನ ಹಾಸಿಗೆಯ ಪಕ್ಕದಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಕೂತು ಬಿಡುತ್ತಿದ್ದ. ಬೆಳಿಗ್ಗೆ ಎದ್ದ ಕೂಡಲೇ ಇವನದೇ ದಿವ್ಯದರ್ಶನ. ಈಗ ಹಾಗಿಲ್ಲ, ದೊಡ್ಡವನಾಗಿದ್ದಾನೆ. ಎದ್ದು ತನ್ನ ಕೆಲಸಗಳತ್ತ ಗಮನ ಕೊಡುತ್ತಾನೆ. ಆದರೆ ಆಗಾಗ ಮೈ ಕೆರೆಸಿಕೊಳ್ಳುವುದು, ಕಿವಿಗಳನ್ನು ಮಸಾಜ್ ಮಾಡಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಾವಷ್ಟೇ ಅಲ್ಲ, ನಮ್ಮ ಮನೆಗೆ ಯಾರೇ ಬಂದರೂ ಅವರು ಸಹ ಅದನ್ನೆಲ್ಲ ಮಾಡಲೇಬೇಕು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ