Advertisement

ದೇವಿಕಾ ನಾಗೇಶ್

ಹೊಳೆಸಾಲಿನ ಶಾಲೆಗೆ ಇನ್ನೀಸಬೆಟ್ಟರ್ ಬಂದರು: ಸುಧಾ ಆಡುಕಳ ಅಂಕಣ

ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ದಾರಿಯೆಡೆಗೆ ನೋಡಿದರೆ ಆರಡಿ ಎತ್ತರದ ಚಂದದ ವ್ಯಕ್ತಿಯೊಬ್ಬರು ನಗುತ್ತಾ ಇವರೆಡೆಗೆ ಬರುತ್ತಿದ್ದರು. ಚೌಕಳಿ ಶರ್ಟು ಮತ್ತು ಬಿಳಿಯ ಪ್ಯಾಂಟಿನಲ್ಲಿ ಬಂದ ಅವರನ್ನು ಮಕ್ಕಳು ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟರು. ಸೈಕಲ್ ಬೆಲ್ ಮಾಡುತ್ತಾ, ಸಮತಟ್ಟುಗೊಳಿಸಿದ ಮೈದಾನದ ತುಂಬಾ ಸೈಕಲ್ ಹೊಡೆಯುತ್ತ ಮಕ್ಕಳೆಡೆಗೆ ಕೈ ಬೀಸಿದರು. ಅವರ ಮುಗುಳ್ನಗೆಗೆ ಮನಸೋತ ಮಕ್ಕಳು ಹೋ ಎಂದು ಕೂಗುತ್ತಾ ಅವರ ಸೈಕಲ್ಲಿನ ಹಿಂದೆಯೇ ಹುಚ್ಚೆದ್ದು ಓಡತೊಡಗಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಕೊಡು ಶಿವನೆ ಕುಡುಕನಲ್ಲದ ಗಂಡನ: ಸುಧಾ ಆಡುಕಳ ಅಂಕಣ

ಮಗುವನ್ನು ನೋಡಿದ ಮಾದೇವಿ ತನ್ನ ಬ್ಯಾಗಿನಲ್ಲಿದ್ದ ಅದೆಂಥದ್ದೋ ಪುಡಿಯನ್ನು ನೀರಿನಲ್ಲಿ ಕರಗಿಸಿ, ಇಷ್ಟಿಷ್ಟೇ ಮಗುವಿನ ಬಾಯಿಗೆ ಹಾಕುತ್ತ ಅವಳು ಎಚ್ಚರಗೊಳ್ಳುವಂತೆ ಮಾಡಿದ್ದಳು. ಅದೇನೋ ಮಾಯಕವಿತ್ತೋ ಆ ಬಿಳಿಯ ಪುಡಿಯಲ್ಲಿ! ಕಮಲಿಯ ಮಗನಿಗೆ ಇದ್ದಕ್ಕಿದ್ದಂತೆ ರಾತ್ರಿ ಜ್ವರ ಬಂದು ತಲೆಗೇರಿ ಏನೇನೋ ಬಡಬಡಾಯಿಸುತ್ತಿರುವಾಗಲೂ ಹಾಗೆ, ಅದೇನೋ ಮಾತ್ರೆಯ ತುಂಡೊಂದನ್ನು ಕುಡಿಸಿ, ರಾತ್ರಿಯಿಡೀ ತಲೆಗೆ ತಣ್ಣೀರ ಪಟ್ಟಿಯಿಟ್ಟು ಜ್ವರವನ್ನು ಓಡಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಅಮೃತವಾಹಿನಿಯೊಂದು ಹರಿಯುತಿದೆ: ಸುಧಾ ಆಡುಕಳ ಅಂಕಣ

ಅಮ್ಮನ ಮಾತು ಕೇಳಿ ಭಾವುಕಳಾದ ಅವಳು, “ಕಷ್ಟ ಬಂದಾಗಲೇ ನಮ್ಮೋರು, ತಮ್ಮೋರು ಯಾರಂತ ಗೊತ್ತಾಗೂದು ಅಮ್ಮಾ. ತನ್ನ ದಣಿ ಮಾತು ಅಂದ್ರೆ ಶಾಸ್ನ ಅಂತ ಹೇಳ್ತಾನೇ ಇವ್ರು ಜೈಲಿಗೋದ್ರು. ದಣಿ ಈಗ ಗುರುತೇ ಇಲ್ಲದೋರ ಹಾಗೆ ಕಾರಲ್ಲಿ ಬರ‍್ರ ಹೋಯ್ತರೆ. ಬದುಕೇ ಮುಗದೋಯ್ತು ಅಂದ್ಕಂಡು ಹೊಳೆದಾಟಿ ಬಂದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಏಳನೆಯ ಕಂತು ನಿಮ್ಮ ಓದಿಗೆ

Read More

ಎಲ್ಲ ನಿಮ್ಮ ಲೀಲೆ ತಾಯೇ…: ಸುಧಾ ಆಡುಕಳ ಅಂಕಣ

ನೀಲಿಯನ್ನು ಬಹುವಾಗಿ ಕಾಡಿದ ಕತೆಯೆಂದರೆ ಹೊಳೆಸಾಲಿನ ಮಾರಿ ಮತ್ತು ಕಡೆಸಾಲಿನ ಸುಬ್ಬಮ್ಮನವರ ನಡುವೆ ನಡೆದ ಮಾರಾಮಾರಿ ಜಗಳದ ಕತೆ..
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಆರನೆಯ ಕಂತು ನಿಮ್ಮ ಓದಿಗೆ

Read More

ಸತ್ತವರೆಲ್ಲ ಮತ್ತೆ ಬಂದಾಗ: ಸುಧಾ ಆಡುಕಳ ಅಂಕಣ

ಅದು ಅಜ್ಜಿಗೆ ಮೀಸಲಿಡುವ ದಿನವಾಗಿತ್ತು. ಮಕ್ಕಳೆಲ್ಲರೂ ಒಟ್ಟಿಗೆ ಸೇರುವುದು ವಾಡಿಕೆಯಾಗಿತ್ತು. ಅಜ್ಜಿಗೆ ಪರಮ ಪ್ರಿಯಳಾಗಿದ್ದ ಕೊನೆಯ ಮಗಳು ಮಾತ್ರ ಗಂಡನ ಮನೆಯಿಂದ ಬಂದಿರಲಿಲ್ಲ. ಅಣ್ಣಂದಿರು ಒತ್ತಾಯ ಮಾಡಿ ಕರೆದಿದ್ದರೂ ಅವಳ ಗಂಡ ಅದೇನೋ ಹಳೆಯ ಮುನಿಸಿನಿಂದಾಗಿ ಹೆಂಡತಿಯನ್ನು ತವರಿಗೆ ಕಳಿಸಿರಲಿಲ್ಲ. ಅಕ್ಕಂದಿರೆಲ್ಲ ಅವಳನ್ನು ನೆನೆಸಿಕೊಂಡು ಕಣ್ಣೀರಿಡುತ್ತಲೇ ಅಮ್ಮನಿಗೆ ಮೀಸಲಿಟ್ಟಿದ್ದರು. ಆ ರಾತ್ರಿ ಎಲ್ಲರೂ ಮಲಗಿದಾಗ ನಡುರಾತ್ರಿಯಲಿ ನೀಲಿಯ ದೊಡ್ಡಮ್ಮ ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ