Advertisement

ದೇವಿಕಾ ನಾಗೇಶ್

ರೂಪಾಂತರದ ಆಯಾಮಗಳು

ಮಾನವರು ಯಕ್ಷರಾಗುವ ಪ್ರಕ್ರಿಯೆ ನಮ್ಮೊಳಗೆ ಅಡಕವಾಗುತ್ತ ನಡೆದಾಗಲೂ ಕೆಲವೊಮ್ಮೆ ಭ್ರಮೆ ಮತ್ತು ವಾಸ್ತವಗಳು ಮನಸ್ಸಿನಲ್ಲಿ ತಾಡಿಸುತ್ತಲೇ ಇರುತ್ತಿದ್ದವು. ದುಃಶ್ಶಾಸನನ ವೇಷ ತೊಟ್ಟ ಅಪ್ಪ, ಭೀಮನಿಂದ ಪೆಟ್ಟುತಿಂದು ಯುದ್ಧರಂಗದಲ್ಲಿ ಓಡುತ್ತಿರುವಾಗ ಅವನೆಲ್ಲಾದರೂ ಅಪ್ಪನನ್ನು ಗದೆಯಿಂದ ಹೊಡೆದು ಕೊಂದಾನೆಂಬ ಭ್ರಮೆಯಲ್ಲಿ ‘ಬೇಡಾ’ ಎಂದು ಕಿರುಚಿದ್ದೂ ಇತ್ತು. ಕೌರವನನ್ನು ಬೆನ್ನಟ್ಟುವ ರೌದ್ರ ಭೀಮನ ಕಣ್ಣಿನ ಕೆಂಪಿಗೆ ಹೆದರಿ, ಅವನೆಲ್ಲಿಯಾದರೂ ಕೌರವನ ವೇಷಧಾರಿಯಾದ ನನ್ನಪ್ಪನ ತೊಡೆಯನ್ನೇ ಮುರಿದಾನೆಂದು ಚಡಪಡಿಸುತ್ತಿದ್ದುದು ಅತ್ತೆಗೆ ಇರಿಸುಮುರಿಸು ಮಾಡುತ್ತಿತ್ತು.
ಮನುಷ್ಯ ಹೊಂದಬಹುದಾದ ರೂಪಾಂತರಗಳ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಮಗಳು ಇಂದಿರಾಗೆ ನೆಹರೂ ಬರೆದ ಮೂರು ಪತ್ರಗಳು

ನಗರಗಳು ಬೆಳೆಯುತ್ತಾ ಹೋದಂತೆ, ಪಟ್ಟಣಗಳು ಮತ್ತು ದೇಶಗಳು ರೂಪುಗೊಳ್ಳತೊಡಗಿದವು. ಒಂದೇ ದೇಶದಲ್ಲಿ ಹತ್ತಿರ ವಾಸಿಸುವ ಜನರು ಪರಸ್ಪರರನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳತೊಡಗಿದರು. ಅವರು ತಮ್ಮಿಂದ ದೂರದಲ್ಲಿ ಬೇರೆ ದೇಶಗಳಲ್ಲಿ ವಾಸಿಸುವ ಜನರಿಗಿಂತ ತಾವೇ ಶ್ರೇಷ್ಟರು ಎಂದು ಯೋಚಿಸತೊಡಗಿದರು. ಜವಾಹರಲಾಲ್‌ ನೆಹರೂ ತಮ್ಮ ಮಗಳು ಇಂದಿರಾಗಾಂಧಿಗೆ ಬರೆದಿದ್ದ ಪತ್ರಗಳನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸಿದ್ದು, ಮಕ್ಕಳ ದಿನಾಚರಣೆಯ ಈ ದಿನ ಅವುಗಳಲ್ಲಿನ ಮೂರು ಪತ್ರಗಳು ನಿಮ್ಮ ಓದಿಗೆ ಇಲ್ಲಿವೆ…

Read More

ಸುಧಾ ಆಡುಕಳ ಅನುವಾದಿಸಿದ ಎಲಿ ರೋಸಾ ಝಮೋರಾ ಎರಡು ಕವಿತೆಗಳು

“ಅವಶೇಷಗಳ ನಡುವೆ ನಾವು ಒಟ್ಟಿಗೆ ನಡೆಯೋಣ
ಧೂಳು ಮುಸುಕಿದ ಅಪರಾಹ್ನದಲಿ
ನಿನ್ನ ನಗ್ನತೆಯನ್ನು ನೋಡಲು ನನಗೆ ಅನುಮತಿಸು
ನಿನ್ನ ಸ್ವೀಕರಿಸುವ ಕಸುವು ನನಗೆ ಬರಲಿ
ನನ್ನ ಆವರಿಸುವ ಕಸುವು ನಿನಗೆ ಬರಲಿ
ಇವೆಲ್ಲಕೂ ಮಿಗಿಲಾಗಿ
ನಿನ್ನ ಪ್ರೀತಿಸುವ ತಾಕತ್ತು ನನಗೆ ಬರಲಿ”-ಸುಧಾ ಆಡುಕಳ ಅನುವಾದಿಸಿದ ಎಲಿ ರೋಸಾ ಝಮೋರಾ ಅವರ ಎರಡು ಕವಿತೆಗಳು

Read More

ಅನುಭವ ಬುತ್ತಿಯನ್ನು ಅಕ್ಷರವಾಗಿಸಿದ ಲೇಖಕಿ ಅರ್ನಾಕ್ಸ್‌

ಅರ್ನಾಕ್ಸ್ ಬೆಳೆದಿದ್ದು ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ಯ್ವೆಟೊಟ್ ಎಂಬ ಪುಟ್ಟ ನಗರದಲ್ಲಿ. ಅವರ ತಂದೆ ಅಲ್ಲಿ ಒಂದು ಕಿರಾಣಿ ಅಂಗಡಿ ಮತ್ತು ಕೆಫೆಯನ್ನು ನಡೆಸುತ್ತಿದ್ದರು. ಅಲ್ಲಿಯ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಬಡತನವು ತಂದಿಡಬಹುದಾದ ಸಾಮಾಜಿಕ ತಾರತಮ್ಯದ ಅರಿವಾಯಿತು. ತಮ್ಮ ಬರವಣಿಗೆಯ ಐವತ್ತು ವರ್ಷಗಳಲ್ಲಿ ಅವರು ಬರೆದ ಕೃತಿಗಳ ಸಂಖ್ಯೆ ಇಪ್ಪತ್ತಕ್ಕಿಂತಲೂ ಹೆಚ್ಚು. ಹೆಚ್ಚಿನವು ಕಾದಂಬರಿಗಳಾದರೆ ಇನ್ನು ಕೆಲವು ನಾಟಕಗಳು, ಚಿತ್ರಕಥೆಗಳು. 2022ರ ನೊಬೆಲ್ ಪಾರಿತೋಷಕ ಫ್ರಾನ್ಸಿನ ಲೇಖಕಿ ಆನ್ ಅರ್ನಾಕ್ಸ್ ಕುರಿತು ಸುಧಾ ಆಡುಕಳ ಬರಹ

Read More

ನಾ ಕಾಣದ ನನ್ನಜ್ಜಿಯರು

ಹೆಣ್ಣುಲೋಕದ ಎಲ್ಲ ತಲ್ಲಣಗಳನ್ನು ನನ್ನೊಳಗೆ ಬೀಜರೂಪಿಯಾಗಿ ಮೊಳೆಯಿಸಿದ್ದಾರೆ. ಆದರೂ ನನ್ನನ್ನು ಅಜ್ಜಿಯ ವಾತ್ಸಲ್ಯದಿಂದ ಪೊರೆದಿದ್ದು ಮಾತ್ರ ನಮ್ಮೂರಿನ ಬಡ್ಕಜ್ಜಿ. ತನ್ನ ಐದನೆಯ ವಯಸ್ಸಿಗೆ ಗಂಡನನ್ನು ಕಳಕೊಂಡು ಜೀವನಪೂರ್ತಿ ಒಂಟಿಯಾಗಿಯೇ ಬದುಕಿದ ಅವಳಿಗೆ ನನ್ನನ್ನೂ ಸೇರಿಸಿದಂತೆ ನೂರಾರು ಮೊಮ್ಮಕ್ಕಳು. ಅರವತ್ತು ದಾಟಿದ ತನ್ನ ಗಂಡ ಮೂರನೆಯಹೆಂಡತಿಯಾದ ತನ್ನನ್ನು ಹೆಗಲಮೇಲೆ ಕೂರಿಸಿಕೊಂಡು ಹೊಳೆದಾಟಿಸಿದ ನೆನಪು ಮಾತ್ರ ಅವಳಿಗಿತ್ತು, ಅವಳ ಮದುವೆಯ ಕಥೆಯನ್ನೂ ಹಾಸ್ಯವಾಗಿ ಹೇಳಿ ನಗಿಸಬಲ್ಲಷ್ಟು ಸ್ಥಿತಪ್ರಜ್ಞತೆ ಅವಳಿಗೆ ಅದೆಲ್ಲಿಂದ ಬಂದಿತ್ತೋ. ಅಜ್ಜಿಯರ ಲೋಕದ ಸಂವೇದನೆಗಳನ್ನು ಸೂಕ್ಷ್ಮವಾಗಿ ಹೆಣೆದಿದ್ದಾರೆ ಸುಧಾ ಆಡುಕಳ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ