ಅಪ್ಪ ಅಂಬೋ ಆಲದಮರ: ಸುಮಾ ಸತೀಶ್ ಸರಣಿ
ಅಪ್ಪ ಅವ್ರ ಕಾಲದ ಗಂಡಸ್ರಿಗಿಂತ ವಸಿ ಮುಂದ್ವರೆದ ಯೋಚ್ನೆ ಮಾಡೋರು. ಎಲ್ರೂ ಓದ್ಬೇಕೂನ್ನೋರು. ತಾತಂಗೆ, ನಮ್ಮತ್ತೆದೀರ್ಗೆ ಲೈಬ್ರರೀಯಿಂದ ಕತೆ ಪುಸ್ತಕ ತಂದ್ಕೊಡೋರು. ತಂಗಿದೀರು ಕತೆ ಬರಿತೀವಿ ಅಂದ್ರೆ ಪುಸ್ತಕ ಪೆನ್ನು ತಂದ್ಕೊಟ್ಟು ಬೆನ್ನು ತಟ್ಟೋರು. ಸಂಗೀತ ಕಲಿಸಾಕೆ ಹಾರ್ಮೋನಿಯಂ ಮೇಷ್ಟ್ರು ಇಟ್ಟಿದ್ರು. ಕೊನೆ ತಂಗೀಗೆ ಮೊದ್ಲನೇ ಸಲ ಹೆರಿಗೇಲಿ ಮಗ ಹೋಗಿಬಿಟ್ತಂತೆ. ಮಂಕಾಗಿ ಬಿಟ್ಟಾಗ ಅಪ್ಪ ಕತೆಪುಸ್ತಕ ತಂದ್ಕೊಟ್ಟು ಓದೋಕೆ ಯೋಳತಿದ್ರಂತೆ. ನಾಗರ ಪಂಚಮಿ ಬಂದ್ರೆ ಎಲ್ಲಾ ಅಕ್ಕತಂಗೀರೂ ಖುಷೀಲಿಂದ್ಲೆ ಬೆನ್ನು ತೊಳ್ಯೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಂದೆಯವರ ಕುರಿತ ಬರಹ ಇಲ್ಲಿದೆ
