ಹಾವುಗಳು ಮತ್ತು ಪ್ರ(ಕ್ಷುಬ್ಧ)ಶಾಂತಿ ನಿಲಯ: ಸುಮಾವೀಣಾ ಸರಣಿ
ಕಡೆಗೆ ನಿದ್ರೆಮಾಡಲು ಯಾರು ಚಡಪಡಿಸುತ್ತಾರೆ.. ಪ್ರತಿದಿನ ಬೆಡ್ ತೆಗೆಯಲು ಮೊದಲು ಯಾರು ಹೋಗುತ್ತಾರೆ ಇತ್ಯಾದಿ ಪ್ರಶ್ನೆಗಳು ಬರುತ್ತಿದ್ದವು. ಯಾವಾಗಲೂ ನಿದ್ರೆ ಮಾಡಲು ಕಾತರಿಸುವವರನ್ನು ಇನ್ನಷ್ಟು ಸತಾಯಿಸಬೇಕು ಅನ್ನುವುದು ಅವರ ಆಸೆಯಾಗಿತ್ತು. ಅಷ್ಟರಲ್ಲಿ ನಿದ್ರಾದೇವಿ ಎಲ್ಲರ ಮೇಲೆ ಬಂದು ನಿಧಾನವಾಗಿ ಒಂದೊಂದು ಸುತ್ತು ಸೊಂಟ ತಿರುಗಿಸುವ, ಆಕಳಿಸುವ ದೃಶ್ಯಗಳು ಹೆಚ್ಚಾದಾಗ ವಾರ್ಡನ್ ಮತ್ತು ಅಟೆಂಡರ್ ಅದು ಚಿಕ್ಕ ಹಾವು; ಅದರ ಅಮ್ಮ ನಿಮ್ಮ ಬೆಡ್‌ಗಳ ಅಡಿಯಲ್ಲಿ ಇರಬಹುದು ಎಂಬ ಹುಸಿ ಬಾಂಬ್ ಸಿಡಿಸಿದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ