ಮರಳಲ್ಲ ಇದು ಹಸಿರು ಹರಳು
ದೂರದಲ್ಲಿ ಏರುತ್ತಿದ್ದ ಕೆಂಪು ಧೂಳಿನ ಮೋಡದಿಂದ ಎದ್ದುಬಂದ ಜೀಪಿನಿಂದ ಹೊರಗಿಣುಕಿತ್ತೊಂದು ಹೊಂಗೂದಲಿನ ತೇರು. ಅಹ ದೇವತೆಯಂತೆ ಅವತರಿಸಿದ್ದಳು ಹದಿನಾರರ ಹುಡುಗಿ ಮಕಾಮಾಯಿ. ನಮ್ಮ ಕತೆ ಕೇಳಿ, ನನ್ನ ಹಿಂದೆ ನಿಧಾನ ಬನ್ನಿ ಎನ್ನುತ್ತಾ ತಾನು ಮಾತ್ರ ಭರೆಂದು ಹಾರುತ್ತ, ಅಲ್ಲಲ್ಲಿ ಜೀಪು ನಿಲ್ಲಿಸಿಕೊಂಡು ನಮಗಾಗಿ ಕಾಯುತ್ತ, ಒಂದು ಸಮುದ್ರ ತೀರದ ಕಲ್ಲು ಹಾದಿಯ ಗುಡಿಸಿಲಿನಂತ ಜಾಗಕ್ಕೆ ಕರೆದೊಯ್ದಳು. ಅದು “ಪಾಪಕೋಲೇ” ಹಸಿರು ಮರಳ ದಂಡೆಯ ಹಾದಿಯ ಶುರುವಾತು. ಜಗದ ಜಗಲಿಯಲಿ ನಿಂತು ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿ ಹೆಗಡೆ ಹವಾಯಿ ದ್ವೀಪದ ಕುರಿತು ಬರೆದಿದ್ದಾರೆ .
Read More