ನಿರಾಡಂಬರ ಕಥನ ಕ್ರಮದಲ್ಲಿ ಸಾಗುವ ‘ಸೂತ್ರಧಾರ..’
“ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ.”
ಶೈಲಜಾ ಸುರೇಶ್ ರಾವ್ ನಾಯಕ್ ಕಥಾ ಸಂಕಲನಕ್ಕೆ ವಾಸುದೇವ ನಾಡಿಗ್ ಬರೆದ ಮುನ್ನುಡಿ