Advertisement

ದೇವಿಕಾ ನಾಗೇಶ್

ಒಗ್ಗಟ್ಟು, ಒಡಕುಗಳ ವಿಚಲತೆ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಆಂಗ್ಲೋ-ಆಸ್ಟ್ರೇಲಿಯನ್ ಅಂದರೆ ಬಿಳಿ-ವಸಾಹತುಶಾಹಿ-ಸೆಟ್ಟ್ಲರ್ ಸಮಾಜಕ್ಕೆ ಸೇರಿದ ಪೌಲಿನ್ ಹ್ಯಾನ್ಸನ್ ತನ್ನನ್ನು ಕಟ್ಟಾ ಆಸ್ಟ್ರೇಲಿಯನ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬ್ರಿಟಿಷರು ಹುಟ್ಟುಹಾಕಿದ ಬಿಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದಲ್ಲಿ ಬದುಕುತ್ತಿರುವವರು ಕಡ್ಡಾಯವಾಗಿ ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅಂದರೆ ಬಿಳಿಯರ ಸಂಸ್ಕೃತಿಯನ್ನು ಪಾಲಿಸಬೇಕು, ಇಲ್ಲವಾದರೆ ದೇಶ ತೊರೆದು ಹೋಗಬೇಕು, ಎನ್ನುತ್ತಾರೆ. ಹಿಂದೊಮ್ಮೆ ಇಲ್ಲಿನ ಮೂಲನಿವಾಸಿಗಳು ಆಸ್ಟ್ರೇಲಿಯನ್ನರಲ್ಲ ಎಂದು, ನಂತರ ಏಷ್ಯನ್ನರಿಗೆ ಈ ದೇಶದಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಪ್ರಾಣಿ ಒಡನಾಟದಲ್ಲಿನ ಮನುಷ್ಯರ ಸಂಕಟ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಕಾಡಿನ ರಸ್ತೆಯಲ್ಲಿ ಹೋಗುವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರೂ ಅಲ್ಲಲ್ಲಿ ಜನ ವಾಹನಗಳನ್ನು ನಿಲ್ಲಿಸಿದ್ದರು. ಪ್ರಾಣಿಗಳು ಕಾಣಿಸುತ್ತಿವೆ ಎಂದು ಖುಷಿ. ಹತ್ತಿರ ಬರುವ ಮಂಗಗಳಿಗೆ ಹಣ್ಣು, ಸ್ನ್ಯಾಕ್ಸ್ ಕೊಡುವುದು ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಇದ್ದ, ಮಂಗಗಳನ್ನೇ ನೋಡುತ್ತಿದ್ದ ಜಿಂಕೆಗಳನ್ನು ಕರೆಯುವುದು ನಡೆದಿತ್ತು. ಇಷ್ಟಾದ ನಂತರ ಹೀಗೆಯೆ ಹಣ್ಣು ತೋರಿಸಿ ಕರೆದರೆ ಆನೆ, ಕಾಡೆಮ್ಮೆ ಕೂಡ ಬರಬಹುದು ಎನ್ನಿಸಿತು. ಅವುಗಳ ಸ್ವಾಭಾವಿಕ ಆಹಾರ ಪ್ರದೇಶಗಳನ್ನು ಈಗ ಲಂಟಾನಾ ಪೊದೆಗಳು ಆಕ್ರಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ನ್ಯಾಯದೇವತೆಯ ತಕ್ಕಡಿಯಲ್ಲಿ ಹೊಸ, ಹಳೆ ಅಹವಾಲು: ವಿನತೆ ಶರ್ಮ ಅಂಕಣ

ಇದೆಲ್ಲವನ್ನೂ ನೋಡುತ್ತಿರುವಾಗ ಇಗೋ ಜನವರಿ ೨೬ ಬರುತ್ತಿದೆ. ಅಂದು ಆಸ್ಟ್ರೇಲಿಯಾ ಡೇ – ಕ್ಯಾಪ್ಟನ್ ಜೇಮ್ಸ್ ಕುಕ್ ಸಿಡ್ನಿ ಸಮುದ್ರತೀರಕ್ಕೆ ಬಂದು, ಅವನ ಹಡಗು ಅಲ್ಲಿ ಲಂಗರು ಹಾಕಿ, ಓಹೋ ಈ ಜಾಗದಲ್ಲಿ ಯಾರೂ ಮನುಷ್ಯರು ಇಲ್ಲ, ಆದ್ದರಿಂದ ಇದು ತಮಗೆ ಸೇರಿದ್ದು, ಬ್ರಿಟಿಷರಿಗೆ ಸೇರಿದ ನಾಡು, ಎಂದು ಘೋಷಿತವಾದ ದಿನ. ಅಲ್ಲಿಂದ ಹೊಸ ಆಸ್ಟ್ರೇಲಿಯದ ಹುಟ್ಟು, ಬೆಳವಣಿಗೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಹೊಸ, ಹಳೇ ಕಥೆಗಳಾಗುವ ನಾವು: ವಿನತೆ ಶರ್ಮ ಅಂಕಣ

ಹೊಸ ವರ್ಷದ ಮೊದಲ ದಿನದಂದು ಸಿಡ್ನಿ ಆಕಾಶದಲ್ಲಿ ಮೋಡಗಳು, ಸಣ್ಣನೆ ಮಳೆ, ಚಳಿ. ಸಮುದ್ರ ಭುಸುಗುಡುತ್ತಿತ್ತು. ಅಲೆಗಳ ರಭಸವನ್ನು ನೋಡಿದಾಗ ಮನುಷ್ಯರು ಮಾಡಿಕೊಂಡಿದ್ದ ಹಿಂದಿನ ದಿನದ ಪಾರ್ಟಿಯ ಗಮ್ಮತ್ತು ಅವಕ್ಕೆ ಇಷ್ಟವಾಗಲಿಲ್ಲವೇನೋ ಎಂಬಂತಿತ್ತು. ಅಲೆಗಳ ಹೊರಳಾಟ ಯಾಕೋ ನನ್ನಲ್ಲಿ ದುಃಖ ಉಕ್ಕಿಸಿತ್ತು. ನಗರದ ಪೂರ್ವ ತೀರದಲ್ಲಿರುವ ಸುಂದರ ಸಮುದ್ರತೀರದ ಸುಮಾರು ಮೂವತ್ತಕ್ಕೂ ಹೆಚ್ಚು ಬೀಚ್‌ಗಳನ್ನ ಮುಚ್ಚಿದ್ದರು. ಹೊಸವರ್ಷದ ಆಗಮನವನ್ನು ಅತಿಯಾಗೆ ಆಚರಿಸಲು ಹೋಗಿ ಹಲವಾರು ಕಡೆ ಸಮುದ್ರಕ್ಕಿಳಿದ್ದಿದ್ದ ಜನರು ಆಪತ್ತಿಗೀಡಾಗಿದ್ದು ವರದಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಸಾಮರಸ್ಯವೇ ಇಲ್ಲಿ ಸಲ್ಲುವುದು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ಬರಲಿವೆ. ಬಹುಸೂಕ್ಷ್ಮವಾಗಿ ಅವಲೋಕಿಸಿದರೆ ದಾಳಿಗೀಡಾದ ಧರ್ಮದ ಜನಸಮುದಾಯದ ದನಿಗೆ ಈಗಾಗಲೇ ಒಂದು ನಿರ್ದಿಷ್ಟ ಬಲ ಬಂದಿದೆ. ಇದು ಮತ್ತಷ್ಟು ಬೆಳೆಯುವ ಸೂಚನೆಗಳಿವೆ. ದೂರದ ಅಮೆರಿಕೆಯಲ್ಲಿ ಈ ಜನಸಮುದಾಯವು ಎಲ್ಲಾ ಮಟ್ಟಗಳಲ್ಲೂ ಆಳವಾದ ಪ್ರಭಾವ ಮತ್ತು ಹಿಡಿತವನ್ನು ಹೊಂದಿದೆ. ಮತ್ತೊಂದು ವಸಾಹತುಶಾಹಿ ಸಮಾಜವಾದ ಆಸ್ಟ್ರೇಲಿಯಾದಲ್ಲೂ ಹಾಗಾಗಬಹುದೆ? ದಾಳಿ ನಡೆಸಿದ ಅಪ್ಪ-ಮಗ ಜೋಡಿಯಲ್ಲಿ, ಅಪ್ಪನ ಬಳಿ ಇದ್ದದ್ದು ಭಾರತೀಯ ಪಾಸ್ಪೋರ್ಟ್. ಆತ ಭಾರತದ ಹೈದರಾಬಾದ್ ಮೂಲದವರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ