Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ವಿಭಾಗಿಸಿ ಒಡೆದುಹಾಕುವ ವ್ಯಾಸಕ್ಕೆ ಬೆದರದೆ
ತ್ರಿಜ್ಯದ ಸಂಪರ್ಕವನ್ನು ಅತಿಯಾಗಿ ಹಚ್ಚಿಕೊಳ್ಳದೆ-
ಹಾಗೆಂದು ದೂರವೂ ಉಳಿಯದೆ
ಸುತ್ತ ಆವರಿಸಿ ನಿಂತ ಪರಿಧಿಗಳೆಲ್ಲವನ್ನೂ ಮೀರಿದ
ನಗುಮುಖದ ವೃತ್ತವಾಗಬೇಕು”- ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ವಿಶ್ವನಾಥ ಎನ್‌ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ

ಮಾರನ ಕನಸು ನನಸಾಗಲಿಲ್ಲ. ಮಣ್ಣು ಸೇರಿತ್ತು. ಮಾರನ ತತ್ಕಾಲದ ಜನಪ್ರಿಯತೆಯನ್ನು ಮಾತ್ರವೇ ನಂಬಿಕೊಂಡಿದ್ದ ಆ ಸಿನಿಮಾ ಚೆನ್ನಾಗಿ ಓಡಲಿಲ್ಲ. “ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿಯೇ ಮಾಡುತ್ತದೆ. ಸಿನಿಮಾ ಹಿಟ್ ಆದಮೇಲೆ ನಿನಗೆ ಎಂಟು ಲಕ್ಷ ಕೊಡುತ್ತೇವೆ” ಎಂದು ನಂಬಿಸಿದ್ದ ನಿರ್ದೇಶಕ- ನಿರ್ಮಾಪಕರು ಆಮೇಲೆ ಕೈ ಕೊಟ್ಟಿದ್ದರು. ಸಿನಿಮಾ ಆರಂಭದ ಸಂದರ್ಭದಲ್ಲಿ ಕೊಟ್ಟಿದ್ದ ಹನ್ನೆರಡು ಸಾವಿರ ಮಾತ್ರ ಮಾರನ ಪಾಲಿಗೆ ದಕ್ಕಿದ್ದು.
ವಿಶ್ವನಾಥ ಎನ್‌ ನೇರಳಕಟ್ಟೆ ಬರೆದ ಕಥೆ “ಮಾರ”

Read More

ಸರಳ ಸತ್ಯಗಳ ಮರೆತು ಹಸಿರ ಹರಿಯುವ ನಾವು..

ಕಾಡನ್ನೇ ಆಶ್ರಯಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಆದಿವಾಸಿ ಸಮುದಾಯಗಳು ಅರಣ್ಯ ಪರಿಸರದ ವಿಶಿಷ್ಟತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಔಪಚಾರಿಕ ಶಿಕ್ಷಣವನ್ನು ಪಡೆಯದೆಯೂ ಇಂತಹ ಸಮುದಾಯಗಳ ಜನರು ಹೊಂದಿರುವ ಜ್ಞಾನ ವಿಸ್ತಾರವಾದುದು. ಅವರಿಗೆ ದೊರೆತ  ತಿಳಿವಳಿಕೆಯು ಅರಣ್ಯಜನ್ಯವಾದುದು.  ಈ ಸಮುದಾಯಗಳ ಆಚರಣೆ- ನಂಬಿಕೆಗಳು ಅರಣ್ಯಕೇಂದ್ರಿತವಾಗಿವೆ ಮತ್ತು ಅರಣ್ಯಪರವಾಗಿವೆ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಪರಿಸರ ಕುರಿತ ಬರಹ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ

ಮೂಲೆಯ ಮುರುಕು ಬೆಂಚಿನಲ್ಲಿ ಕುಳಿತು ಆ ವ್ಯಕ್ತಿಯ ಮಾತು- ವರ್ತನೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಪ್ಪ- ಅಣ್ಣುವಿಗೆ ಇನ್ನಷ್ಟು ಕುತೂಹಲವಾಯಿತು. “ಇವನೊಬ್ಬ ಬೋನಸ್ ಆಯುಷ್ಯದಲ್ಲಿ ಬದುಕುತ್ತಿದ್ದಾನೆ. ಇವನ ದುರ್ಬುದ್ಧಿಯನ್ನು ದೇವರು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದಿದ್ದರೆ ಇಷ್ಟರಲ್ಲಾಗಲೇ ಇವನು ಕೊಟ್ಟಾಯಿ ಆಗಿ, ಇವನ ಮೂರನೇ ವರ್ಷದ ಶ್ರಾದ್ಧ ಮುಗಿದಿರಬೇಕಿತ್ತು” ಎಂದು ರಾಮಣನ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದವರು ಈ ಇಬ್ಬರು, ವೆಂಕಪ್ಪ ಮತ್ತು ಅಣ್ಣು. ಇನ್ನಷ್ಟು ದಿನ ಬದುಕಿರಬೇಕಿತ್ತು…

Read More

ಕನ್ನಡ ಸಿನಿಮಾಗಳ ಸಾಂಸ್ಕೃತಿಕ ಅಭಿವ್ಯಕ್ತಿಯ ಮುಖಗಳು

ನಿರ್ದಿಷ್ಟ ಪ್ರದೇಶ ಹಾಗೂ ನಿರ್ದಿಷ್ಟ ಕಾಲಘಟ್ಟದ ಸಂಸ್ಕೃತಿಯನ್ನು ದೃಶ್ಯಾತ್ಮಕವಾಗಿ ಪ್ರಸ್ತುತಪಡಿಸುವ ಸಿನಿಮಾಗಳು ಸಾಂಸ್ಕೃತಿಕ ನಿರ್ದಿಷ್ಟತೆಯನ್ನು ಗುರುತಿಸಿಕೊಳ್ಳಲು ಸಹಕಾರಿಗಳಾಗಿವೆ. ಹೀಗೆ ಸಂಸ್ಕೃತಿಯನ್ನು ಒಳಗೊಂಡು ರೂಪುಗೊಳ್ಳುವ ಸಿನಿಮಾಗಳು ಸಾಮಾಜಿಕ ಪರಿವರ್ತನೆಗಳನ್ನೂ ಉಂಟುಮಾಡುತ್ತವೆ. ಹಾಗೆ ನೋಡಿದರೆ ಸಿನಿಮಾಗಳು ಜನರನ್ನು ಕ್ಷಿಪ್ರವಾಗಿ ಪ್ರಭಾವಿಸಬಲ್ಲವು.  ನಮ್ಮ ನಾಡಿನ ಜನಪರ ಚಳವಳಿಗಳು, ಇತಿಹಾಸ ಮತ್ತು ಸಾಂಸ್ಕೃತಿಕ ವಿಚಾರಗಳು  ಕನ್ನಡ ಸಿನಿಮಾಗಳಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಮೂಡಿ ಬಂದಿವೆ…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ