ಮದ್ರಾಸಿನಂತಹ ಲಂಡನ್ನಿನಲ್ಲಿದ್ದ ತಪಸ್ವಿ
ಲಂಡನ್ ಬದುಕಿನ ದೀರ್ಘ ಅನುಭವವನ್ನು ಹೀಗೆ ಬರೆದುಕೊಂಡಿದ್ದ ವಿ.ಕೆ. ಕೃಷ್ಣ ಮೆನನ್, ಅದಕ್ಕಿಂತ 43 ವರ್ಷಗಳ ಹಿಂದೆ 1920ರಲ್ಲಿ, ವಕೀಲಿಕೆಯ ವಿದ್ಯಾರ್ಥಿಯಾಗಿ ಮದ್ರಾಸಿನಲ್ಲಿದ್ದಾಗ ಅನ್ನಿ ಬೆಸೆಂಟರ ಹೋಂ ರೂಲ್ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದರು. ಬೆಸೆಂಟರೂ ರಾಷ್ಟ್ರೀಯತೆಯ ಖಾತೆಗೆ ಇನ್ನೊಬ್ಬ ವ್ಯಕ್ತಿಯನ್ನು ಜಮಾ ಮಾಡುವ ಉದ್ದೇಶ ಇಟ್ಟು ಹುಡುಕಾಟದಲ್ಲಿ ಇದ್ದವರು. ಮೆನನ್‌ರನ್ನು “ಹೋಮ್ ರೂಲ್” ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸಿದರು ಮತ್ತು ಇಂಗ್ಲೆಂಡ್‌ನಲ್ಲಿ ಮೆನನ್‌ರ ಥಿಯೋಸ್ಪಿಯನ್ ಅರಿವನ್ನು ಹೆಚ್ಚಿಸಬಹುದಾದ ಓದಿನ ವಿದ್ಯಾರ್ಥಿವೇತನಕ್ಕಾಗಿ ಓಡಾಡಿದರು.
ಯೋಗೀಂದ್ರ ಮರವಂತೆ ಬರಹ