ಮಕ್ಕಳ ಶೋಷಣೆಯ ಪಾಪಿಷ್ಟರು: ಡಾ. ವಿನತೆ ಶರ್ಮಾ ಅಂಕಣ
ಹದಿನೆಂಟು ವರ್ಷವಾದಾಗ ಒಬ್ಬ ವ್ಯಕ್ತಿ ‘adult’ ಎಂದು ಸರ್ಕಾರ ಹೇಳುತ್ತದೆ. ಇವರು ತಮ್ಮ ಜೀವನಕ್ಕೆ ತಾವೇ ಸಂಪೂರ್ಣವಾಗಿ ಜವಾಬ್ದಾರರು. ಪೂರ್ಣಾವಧಿ ಉದ್ಯೋಗದಲ್ಲಿದ್ದು ಮುಂದೆ ತಮ್ಮದೇ ಕುಟುಂಬ ಆರಂಭಿಸಿದಾಗ ಇವರ ಮಕ್ಕಳು ಚೈಲ್ಡ್ ಕೇರ್ ಸೆಂಟರ್ಗೆ ಹೋಗುವುದು ಅನಿವಾರ್ಯವಾಗುತ್ತದೆ. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮಕ್ಕಳನ್ನು ಪೋಷಿಸುತ್ತೀವಿ ಎಂದರೆ ಅವರ ಕೆರಿಯರ್ಗೆ ದೊಡ್ಡ ಹೊಡೆತ. ಅಲ್ಲದೆ ಒಂದೂವರೆ ಸಂಬಳವಿದ್ದರೆ ಇತ್ತ ಕಡೆ ಕುಟುಂಬದ ಖರ್ಚುಗಳನ್ನು ತೂಗಿಸಲು ಕಷ್ಟ. ಅತ್ತ ಕಡೆ ಸರಕಾರದಿಂದ welfare ಸಹಾಯ ಸಿಗುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
