Advertisement

Category: ಅಂಕಣ

ಸ್ತ್ರೀ ಅಸ್ಮಿತೆಯ ವಿಭಿನ್ನ ನೆಲೆಗಳು: ಡಾ. ಎಲ್.ಜಿ. ಮೀರಾ ಅಂಕಣ

ಸ್ತ್ರೀತ್ವವನ್ನು, ಅದರಿಂದ ಹೊಮ್ಮುವ ಅರಿವನ್ನು ತಾತ್ವಿಕವಾಗಿ ನಿರ್ವಚಿಸುವುದು ಒಂದು ಬಗೆಯಾದರೆ, ಪ್ರಸ್ತುತ ಬದುಕನ್ನು ಕಾಣುವ-ಕಟ್ಟುವ ಕ್ರಮವೊಂದನ್ನು ಅದು ನೀಡುವುದೇ ಎಂದು ಅನ್ವಯಕ್ರಮದಿಂದ ನೋಡುವುದು ಇನ್ನೊಂದು ಬಗೆ. ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಸ್ತ್ರೀಯ ಅಸ್ಮಿತೆಯು ಎದುರಿಸುತ್ತಿರುವ ಸವಾಲುಗಳನ್ನು ಚೇತನಾ ಗುರುತಿಸಿದ್ದಾರೆ ……. ಮಹಿಳೆಯರು ತಮ್ಮನ್ನು ಸ್ವಯಂ ಸಂಘಟಿಸಿಕೊಳ್ಳಲು ತಮ್ಮ ಅಸ್ಮಿತೆಯ ಮೂಲ ಸ್ವರೂಪ ಹಾಗೂ ಶಕ್ತಿ ಸಾಧ್ಯತೆಗಳನ್ನು ಅರಿಯುವುದು ಮೊದಲ ಹೆಜ್ಜೆ. ಇದು ಸಾಮಾಜಿಕ ಚಲನೆಗೂ ಪ್ರೇರಣೆಯಾಗುವ ಸಂಗತಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನಾರನೆಯ ಬರಹ

Read More

ಆಟ ಕಟ್ಟಲು ಕಣದ ಸಿದ್ಧತೆ: ಡಾ. ವಿನತೆ ಶರ್ಮ ಅಂಕಣ

ಪಕ್ಕದ ಮನೆಯ ಅಂಗಳದಲ್ಲಿರುವ ನಮ್ಮನೆ ಬೇಲಿಗೆ ಆತುಕೊಂಡಿರುವ ಮುರಯ (Murraya) ಮರ ಮೈತುಂಬಾ ಬಿಳಿ ಹೂ ಧರಿಸಿ ನಗುತ್ತಿದೆ. ಶುಭ್ರ ಬಿಳಿ ಹೂ ರಾಶಿ, ಕಡು ಹಸಿರು ಎಲೆಗಳು ಒಂದಕ್ಕೊಂದು ಅಪ್ಪಿಕೊಂಡು ಆ ಬಿಳಿಹಸಿರು ಚಾದರವನ್ನು ಅಪ್ಪಿಕೊಳ್ಳುವ ಆಸೆಯಾಗುತ್ತದೆ. ಹೂಗಳ ಘಮಘಮದಿಂದ ಮೂಗು ಅರಳುತ್ತದೆ. ಹೂಗೊಂಚಲಿನಲ್ಲಿ ಮೊಗ್ಗುಗಳೆ ಹೆಚ್ಚಿರುವುದಕ್ಕೊ ಏನೋ ಅವಕ್ಕೆ ಇನ್ನೂ ಜೇನ್ನೊಣಗಳ ಆಗಮನವಾಗಿಲ್ಲ. ಜೇನ್ನೊಣಗಳ ದಂಡು ಬಂದಾಗ ಅವುಗಳ ಝೇಂಕಾರದ ನಿನಾದ, ಮುರಯ ಹೂ ಗೊಂಚಲುಗಳ ಅಂದ, ತಂಪೇರಿದ ಸಂಜೆ ಮತ್ತು ತರಿಸುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಹೆಣ್ಣಿನ ಉಡುಪು ಎಂಬ ಯುದ್ಧಭೂಮಿ: ಡಾ.ಎಲ್.ಜಿ.ಮೀರಾ

ನಾವು ಹೆಂಗಸರು ಹಲವು ಬಗೆಯಲ್ಲಿ ಸೃಷ್ಟಿಯಾಗಿರುತ್ತೇವೆ, ಅಲ್ಲದೆ ವಯಸ್ಸು, ಕಾಲ, ಸಂದರ್ಭ ಬದಲಾದಂತೆ ನಮ್ಮ ಆಯ್ಕೆಗಳು ಬದಲಾಗುತ್ತಿರುತ್ತವೆ. ನಮ್ಮಲ್ಲಿ ಅಲಂಕಾರದ ಗಾಢ ಅಭಿರುಚಿ ಇರುವವರು ಇದ್ದಂತೆ ಅದರ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದವರೂ ಇರುತ್ತೇವೆ. ನಮಗೆ ಬೇಸರ ತರಿಸುವ ವಿಷಯ ಏನೆಂದರೆ ನಮ್ಮ ಒಳಗಿನ ಗುಣ, ಜೀವನದೃಷ್ಟಿ, ಚಿಂತನೆ ಇವುಗಳಿಗೆ ಪ್ರಾಮುಖ್ಯ ಕೊಡದೆ ಕೇವಲ ಸೀರೆ, ಒಡವೆ, ಮುಖಬಣ್ಣಗಳಿಂದ ನಮ್ಮನ್ನು ಅಳೆದುಬಿಡುವ ಸಮಾಜದ ಧೋರಣೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಇದ್ದಷ್ಟು ಇರಲಿ…: ಎಸ್ ನಾಗಶ್ರೀ ಅಜಯ್ ಅಂಕಣ

ತೀರ ಅತಿಯೆನಿಸುವಷ್ಟು ಅಲ್ಲದಿದ್ದರೂ ನಾವೆಲ್ಲರೂ ಒಂದಿಲ್ಲೊಮ್ಮೆ ಈಗಿರುವುದೇ ಚೆಂದ ಎಂದುಕೊಳ್ಳಲು ಆಸೆಪಟ್ಟವರೇ. ಬಡತನ, ಅನಾರೋಗ್ಯ, ಅಜ್ಞಾನಗಳನ್ನು ರಮ್ಯವಾಗಿ ಚಿತ್ರಿಸುತ್ತಾ ಪರಿಶ್ರಮದಿಂದ ಮೇಲೇರಿದವರ ಸಾಧನೆಯನ್ನು ಕಡೆಗಣಿಸಿ ಮಾತನಾಡುತ್ತಾ ಹುಸಿ ಆನಂದ ಹೊಂದಿದವರೇ. ಬಹಳಷ್ಟು ಸಲ ಎದುರಿನವರ ಮೂಗಿನ ನೇರಕ್ಕೆ ಮಾತನಾಡಿ ‘ಒಳ್ಳೆಯವರಾಗಿ’ ಕಾಣುವ ಆಸೆಯೇ ಡೋಂಗಿಗಳ ಬಡಾಯಿಗೆ ಜೈಹೋ ಎನ್ನುವಂತೆ ಮಾಡಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

Read More

ಬಂದೇ ಬಿಟ್ಟ ಆಲ್ಫ್ರೆಡ್: ಡಾ. ವಿನತೆ ಶರ್ಮ ಅಂಕಣ

ನಾಲ್ಕು ದಿನಗಳ ಹಿಂದೆ ಅಂದರೆ ಮಂಗಳವಾರದಿಂದ ನಮ್ಮ ಸ್ಥಳೀಯ ನಗರಪಾಲಿಕೆಗಳು ನೂರಾರು ನಿರ್ಧಾರಗಳನ್ನು ತೆಗೆದುಕೊಂಡಿವೆ. ‘ಸೇಫ್ಟಿ ಫಸ್ಟ್’ ಎನ್ನುವ ಮಂತ್ರವನ್ನು ಜಪಿಸಿ ನಮ್ಮ ಯೂನಿವರ್ಸಿಟಿಗಳು, ಶಾಲೆಗಳು, ಅಂಗಡಿ ವಹಿವಾಟುಗಳು, ಕಚೇರಿಗಳು ಬಾಗಿಲು ಮುಚ್ಚಿದವು. ಅದಕ್ಕೆ ಮುನ್ನ ಮಂಗಳವಾರದಿಂದ ಎಲ್ಲಾ ಅಂಗಡಿ, ಸೂಪರ್ ಮಾರ್ಕೆಟ್‌ಗಳಲ್ಲಿ ಜನರ ನೂಕುನುಗ್ಗಲು. ಆಹಾರ ಪದಾರ್ಥ, ಕುಡಿಯುವ ನೀರು, ಟಾಯ್ಲೆಟ್ ಪೇಪರ್ ರೋಲ್, ಇತ್ಯಾದಿಗಳು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಮಾಯ! ಬ್ರೆಡ್, ಹಾಲು, ಮೊಟ್ಟೆಗಳು ಸಿಕ್ಕುವುದೇ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ನಾವು ಗುರುವಾರ ಅಲ್ಲಿಇಲ್ಲಿ ಹುಡುಕಾಡಿದ್ದಾಯ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ