Advertisement

Category: ಅಂಕಣ

ಸುಳಿಗಾಳಿಯಂತಿದ್ದ ಸುಧೀರನ ನೆನಪುಗಳು: ಯೋಗೀಂದ್ರ ಮರವಂತೆ ಅಂಕಣ

“ಕೈಯಲ್ಲಿ ಯಾವ ಆಟಿಕೆ ಅಥವಾ ಅಂತಹ ವಸ್ತು ಇಲ್ಲದೆಯೂ ಮೈಮರೆತು ಆಡುತ್ತಿದ್ದ ಆ ಕಾಲದ ಎಲ್ಲ ಮಕ್ಕಳಂತೆ ನಾವು ಕೂಡ…. ಯಾರಿಂದಲೋ ಕಲಿತ ಆಟಗಳು ನಾವೇ ಕಲ್ಪಿಸಿದ ನೋಟಗಳು ಎಲ್ಲವೂ ಅಲ್ಲಿ ಪ್ರಯೋಗಕ್ಕೆ ಬರುತ್ತಿದ್ದವು. ಹೆಚ್ಚು ಎತ್ತರ ಬೆಳೆಯದ ಕಸೆ ಮಾವಿನ ಮರದ ಗೆಲ್ಲನ್ನು ಏರಿ ಕುಳಿತು ಕಾಲು ಹಿಂದೆ ಮುಂದೆ ಆಡಿಸುತ್ತಾ ಗಂಟೆಗಟ್ಟಲೆ ಪುರಾಣ ಹರಟೆ ಕೊಚ್ಚುತ್ತಿದ್ದೆವು. ಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವನೂ ಪೇಟೆ ಊರು ಹೆಚ್ಚು ತಿರುಗಿದವನೂ ಆದ ಸುಧೀರ….”

Read More

ಅಗ್ನಿಯಿಂದ ಎದ್ದು ಬಂದ ಬೆಳಕುಗಳು: ಡಾ.ಲಕ್ಷ್ಮಣ ವಿ.ಎ. ಅಂಕಣ

“ಈಗಿರುವ ಮೆಡಿಕಲ್ ಕಾಲೇಜಿಗೆ ಕೊಡುವ ಬಜೆಟ್ಟಿನಲ್ಲೇ ನಾವು ಲಕ್ಷಾಂತರ ತಜ್ಞ ಪರಿಣಿತ ವೈದ್ಯರನ್ನು ತಯಾರಿ ಮಾಡಬಹುದು. ಅದಕ್ಕೊಂದು ಸಿದ್ಧ ಸೂತ್ರವೂ ಅವರ ಬಳಿ ಇದೆ. ಹಳ್ಳಿಯಿಂದ ಬಂದ ಪ್ರತಿ ಮೆಡಿಕಲ್ ವಿಧ್ಯಾರ್ಥಿಯ ಎದೆಯಲ್ಲೊಂದು ಕಿಚ್ಚು ಇರುತ್ತದೆ. ಅವರ ಹೊಟ್ಟೆಯ ಹಸಿವು ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಉತ್ಸಾಹ ಪ್ರಚೋದನೆ ನೀಡುತ್ತಿರುತ್ತದೆ.. ಅವಕಾಶ ವಂಚಿತ ಇಂತಹ ಗ್ರಾಮೀಣ ಬಡ ಭಾರತದ ಹುಡುಗ ಹುಡುಗಿಯರಿಗೆ ಬೇಕಿರುವುದು ಒಂದು ಸಣ್ಣ ಸಹಾಯ ಮಾತ್ರ.”

Read More

ರವೀಂದ್ರನಾಥರೊಳಗಿನ “ಅವಳ” ನೆರಳು: ಆಶಾ ಜಗದೀಶ್ ಅಂಕಣ

“ತಂದೆಯಂತಹವನೊಬ್ಬ ವ್ಯಾಪಾರಿ ತನ್ನ ಮಗಳ ವಯಸ್ಸಿನ ಮಗುವಿನಲ್ಲಿ ತನ್ನ ಮಗಳನ್ನು ಕಾಣುವುದನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ ರವೀಂದ್ರರು. ಕಾಬೂಲ್ ಕಡೆಯವನಾದ್ದರಿಂದ ಅವನು ಕಾಬುಲೀವಾಲಾ. ಸಮಯದ ಸಮಯಸಾಧಕತನ ಎನ್ನುವಂತೆ ಕಾಬೂಲೀವಾಲಾ ಜೈಲಿಗೆ ಹೋಗುವ ಪ್ರಸಂಗ ಎದುರಾಗುತ್ತದೆ. ಏಳೆಂಟು ವರ್ಷಗಳ ಸೆರೆವಾಸದ ತರುವಾಯ ಅದೇ ಕಾಬುಲೀವಾಲ….”

Read More

ಸಾಫ್ಟವೇರ್ ಪ್ರಪಂಚದಲ್ಲೊಂದು ಕಮ್ಯೂನಿಸ್ಟ್ ಕ್ರಾಂತಿ: ಮಧುಸೂದನ್ ಅಂಕಣ

“ನಿಮಗೆ ಗೊತ್ತೇ, ಇವತ್ತಿನ ಇಡೀ “ಕ್ಲೌಡ್”, ಲಿನಕ್ಸ್ ಮೇಲೆ ಕೂತಿದೆ. ಹಾಗೆ ನೋಡಿದರೆ ಜಗತ್ತಿನ ಮುಕ್ಕಾಲು ಭಾಗ ಸಾಫ್ಟವೇರ್ ಲಿನಕ್ಸ್ ಮೇಲೆ ಓಡುತ್ತಿದೆ. ಅದೆಲ್ಲ ಬಿಡಿ, ನಮ್ಮ ನಿಮ್ಮ ಕೈಯಲ್ಲಿರುವ ಮಾಣಿಕ್ಯ, ಜಗತ್ತನ್ನು ಚದುರಂಗದಂತೆ ಆಡಿಸುತ್ತಿರುವ ಆಂಡ್ರಾಯ್ಡ್ ಫೋನ್, ಲಿನಕ್ಸ್ ನ ರೂಪಾಂತರ. ಅಂದರೆ ಲಿನಕ್ಸ್ ಎಂಬ ಉಚಿತ ಮನೆಗೆ ಗೂಗಲ್ ಇನ್ನೊಂದಷ್ಟು…..”

Read More

ಮೊಬೈಲ್ ಸ್ಕೂಟರ್ ನ ‘ವಿಶೇಷ’ ಕತೆಗಳು: ವಿನತೆ ಶರ್ಮಾ ಅಂಕಣ

“ವಿಶೇಷ ಸಾಮರ್ಥ್ಯರಿಗೆ ಕಷ್ಟಗಳಿಗಿಂತ ಸವಾಲುಗಳೇ ಹೆಚ್ಚು. ಹೆಚ್ಚಿನಪಾಲು ಸಮಾಜ ಅವರನ್ನು, ಅವರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸೋತಿದೆ ಅನಿಸುತ್ತದೆ. ನನ್ನ ಪಕ್ಕ ಸ್ಕೂಟರಿನಲ್ಲಿ ಸಾಗಿದ್ದ ಅವರಿಬ್ಬರೂ ರಸ್ತೆಯ ಏರುತಗ್ಗುಗಳ ಪ್ರಕಾರ ವೇಗವನ್ನು ನಿಯಂತ್ರಿಸುತ್ತಿದ್ದರು. ಅವನ, ಅವಳ ಅಂದಿನ ದಿನದಲ್ಲಿ ಅದೇನೆಲ್ಲಾ ಏರುತಗ್ಗುಗಳಿದ್ದವೋ ಯಾರು ಬಲ್ಲರು? ಇಬ್ಬರಿಗೂ ಆ ದಿನ ಎರಡು ಹೊತ್ತಿನ ಪೂರ್ತಿ ಊಟ ಸಿಕ್ಕಿತ್ತೇ?”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ