Advertisement

Category: ಅಂಕಣ

ಡಾರ್ಕ್ ಹ್ಯೂಮರ್ ಮತ್ತು ನಮ್ಮ ಗ್ರಹಿಕೆಗಳು

ನಾವು ಎಷ್ಟೋ ಬಾರಿ ಸೆಕ್ಸಿಸ್ಟ್, ಕ್ಯಾಸ್ಟಿಸ್ಟ್ ಜೋಕುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿದ್ದರೆ ಇನ್ನೂ‌ ಕೆಲವೊಮ್ಮೆ ಅಪ್ರಯತ್ನಪೂರ್ವಕಾಗಿ ಬರುತ್ತದೆ. ಈಗಲೂ ಬರವಣಿಗೆಯಲ್ಲಿ ನಾನು ಇಂತಹ ಪದಗಳ ಬಳಸುವುದು ಕಮ್ಮಿಯಾದರೂ ಆತ್ಮೀಯ ಗೆಳೆಯರೊಟ್ಟಿಗೆ ಮಾತಾಡುವಾಗ ಕ್ಯಾಸ್ಟಿಸ್ಟ್ ಅಲ್ಲದಿದ್ದರೂ ಸೆಕ್ಸಿಸ್ಟ್ ಬೈಗಳುಗಳು ಅಪ್ರಯತ್ನಪೂರ್ವಕವಾಗಿ ಬರುತ್ತವೆ. ಮುಂದಾದರೂ ಅದನ್ನು ಕಮ್ಮಿ ಮಾಡಬೇಕು ಎಂದು ಇವರ ಬರಹಗಳ ಓದಿದಾಗ ಅನ್ನಿಸಿದೆ.
ಗಿರಿಧರ್‌ ಗುಂಜಗೋಡು ಅಂಕಣ

Read More

ರೇನ್ಬೋ ಬೀಚ್: ರಾಣಿರಾಜ್ಯದ ಕಾಮನಬಿಲ್ಲು

ಬಣ್ಣಗಳು ತುಂಬಿದ ರೇನ್ಬೋ ಬೀಚಿನ ಆಕರ್ಷಕ ಮರಳುದಿಬ್ಬಗಳ ಮೇಲೆ ಹತ್ತಿ, ಒಂದು ಮರದ ತುಂಡನ್ನು ಹಿಡಿದು ಜಾರುಬಂಡೆ ಮಾಡಿಕೊಂಡು, ಎದುರಿಗಿರುವ ನಿರ್ಮಲ ನೀಲ ಸಾಗರವನ್ನು ದೃಷ್ಟಿಸುತ್ತ ಜಾರುವಾಗ ಅದೇನೋ ಒಂದು ದೈವೀಕ ಅನುಭೂತಿಯುಂಟಾಗುತ್ತದೆ. ಯಿನಿಂಗೀ ಇರುವ ಆ ಪ್ರಕೃತಿಯೆ ದೇವರಾದಂತೆ ಭಾಸವಾಗುತ್ತದೆ. ಆನಂತರ ದಿಬ್ಬಗಳ ಕೆಳಗೆ ನಿಂತು ಮರಳನ್ನು ಬೊಗಸೆಯಲ್ಲಿ ಹಿಡಿದು ಬಣ್ಣಬಣ್ಣದ ಕಣಗಳನ್ನು ಸ್ಪರ್ಶಿಸಿದಾಗ ಮತ್ತದೇನೋ ಮಾಯೆ! ದಿವ್ಯದರ್ಶನದ ಕ್ಷಣಗಳು!
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಬದುಕೆಂದರೆ ಬರೀ ಗೆದ್ದು ಬೀಗುವುದಷ್ಟೇ ಅಲ್ಲ….

ಮನೆಯ ಮಂಚದ ಮೇಲೆ ಕಾಲು ಚಾಚಿ ಮಲಗಿಯೋ ಓದುತ್ತಿರುವಾಗ ತೇಜಸ್ವಿಯವರ ಮೂಡಿಗೆರೆ, ಚಿತ್ತಾಲರ ಹನೇಹಳ್ಳಿ, ಭೈರಪ್ಪರ ಚೆನ್ನರಾಯಪಟ್ಟಣ- ಮೈಸೂರು, ಕಾಯ್ಕಿಣಿಯವರ ಮುಂಬೈ-ಗೋಕರ್ಣ, ವಸುಧೇಂದ್ರರ ಬಳ್ಳಾರಿ- ಬೆಂಗಳೂರು… ಹೀಗೆ ಅವರ ಬೆರಳತುದಿಯ ಜಗತ್ತು ನಮ್ಮ ಪ್ರಪಂಚವಾದ ದಿನಗಳಿದ್ದವು. ಪುಸ್ತಕದ ಹಿಂಬದಿಯಲ್ಲಿ ಪ್ರಕಟವಾದ ಅವರ ಚಿತ್ರವೊಂದನ್ನು ಬಿಟ್ಟು ವೈಯಕ್ತಿಕ ಇಷ್ಟ- ಕಷ್ಟ, ನಿಲುವುಗಳ ಸುದ್ದಿಯೇ ತಿಳಿಯದ ಆನಂದಮಯ ಸ್ಥಿತಿ.
ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣ

Read More

ನನ್ನ ನಾನಿಯೂ… ಸಕ್ಕರೆ ಪುಟಾಣಿಯೂ….

ಮಸೀದಿಯಲ್ಲಿ ಶುಕ್ರವಾರಕ್ಕೊಮ್ಮೆ ಸಿಗುತ್ತಿದ್ದ ಪುಟಾಣಿ ಸಕ್ಕರೆಯ ರುಚಿ ನನ್ನ ಬೆಂಬಿಡದೆ ಕಾಡತೊಡಗಿ ದಿನವೂ ತಿನ್ನಬೇಕೆನಿಸುತ್ತಿತ್ತು. ಆದರೆ ನನಗೆ ತಿನ್ನಬೇಕೆನಿಸಿದಾಗ ಎಲ್ಲಿಂದ ಪಡೆಯುವುದು? ಶುಕ್ರವಾರ ಬರುವವರೆಗೂ ಕಾದು ಅವರು ಕೊಡುವ ಒಂದು ತುತ್ತಿನಷ್ಟು ಪುಟಾಣಿ ಸಕ್ಕರೆ ನನ್ನ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ತಿಂದರೆ ಹೊಟ್ಟೆ ತುಂಬುವಷ್ಟು ಅದನ್ನೇ ತಿನ್ನಬೇಕೆನ್ನುವ ಆಸೆ. ಅಪ್ಪನ ಹತ್ತಿರನೋ ಅವ್ವನ ಬಳಿಯೋ ರೊಕ್ಕ ಕೇಳಿದರೆ ಆಗ ಎಂಟಾಣೆಯೋ ಒಂದು ರೂಪಾಯಿಯೋ ಸಿಗುತ್ತಿತ್ತಷ್ಟೆ.
ಇಸ್ಮಾಯಿಲ್ ತಳಕಲ್‌ ಬರೆಯುವ “ತಳಕಲ್‌ ಡೈರಿ”ಯಲ್ಲಿ ಹೊಸ ಬರಹ

Read More

ಇ.ಆರ್. ರಾಮಚಂದ್ರನ್ ಹೊಸ ಅಂಕಣ “ಕ್ರಿಕೆಟಾಯ ನಮಃ” ಇಂದಿನಿಂದ ಶುರು

‘ನೋಡಿ. ಇಂಗ್ಲೆಂಡಿನಲ್ಲೂ ಇದೆ ಪ್ರಾಬ್ಲಮ್ ಆಗಿತ್ತು. ಅದಕ್ಕೆ ಅಲ್ಲಿ ಸೋತರು. ನನಗೆ ಒಂದು ಐಡಿಯಾ ಹೊಳೆದಿದೆ. ರಾಣಿ ಎಲಿಜಬೆತ್ ಕಾಲವಾದಮೇಲೆ ಬಕಿಂಗ್ಹ್ಯಾಮ್ ಪ್ಯಾಲೇಸ್ ಅರ್ದಕ್ಕರ್ಧ ಖಾಲಿ ಇರುತ್ತೆ. ಮುಂದಿನ ಟೂರ್ನಲ್ಲಿ ನಮ್ಮ ಪ್ಲೇಯರ್ಸ್ ಅಲ್ಲಿ ತಂಗಿದರೆ ಸೇಫ್ ಮತ್ತು ಕಿರಿಕಿರಿ- ಫ್ರಿ. ಅಲ್ಲಿ ಕರೀಪ್ಯಾಂಟು ಕೆಂಪು ಕೋಟು ಮತ್ತು ಮೂತಿ ಮುಚ್ಚಿತೋ ಅನ್ನುವ ಹಾಗೆ ಕರಿ ಟೋಪಿ ಹಾಕಿರುವ ‘ರಾಯಲ್ ಗಾರ್ಡ್ಸ್’ ನ ಸೆಕ್ಯುರಿಟಿಗೆ ಹಾಕಬಹುದು.
ಆಂಗ್ಲ ಭಾಷೆಯ ಹಿರಿಯ ಕ್ರಕೆಟ್ ಅಂಕಣಕಾರ ಇ. ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಲಘು ಬರಹಗಳ ಅಂಕಣ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ…

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ