Advertisement

Category: ಅಂಕಣ

ಅನಿವಾಸಿ ಕನ್ನಡಿಗರ ಕತೆಗಳ ʼಗುರುʼ

ಗುರುಪ್ರಸಾದ್ ಕಾಗಿನಲೆ ಅವರ ಕತೆಗಳಲ್ಲಿ ರೂಪಕಗಳ ಉಪಯೋಗ ಮತ್ತು ಪ್ರಯೋಗ ಎರಡೂ ತುಂಬ ಕಡಿಮೆ. ಒಳಪ್ರಪಂಚದ ವಿವರಗಳನ್ನು ಎಷ್ಟು ಬೇಕೋ ಅಷ್ಟೇ ಉಪಯೋಗಿಸುತ್ತಾರೆ. ಅಂತರಂಗದ ಭಾವನಾಲೋಕವನ್ನು ತುಂಬ ಕೆದಕುತ್ತ ಹೋಗುವುದಿಲ್ಲ. ಬಾಹ್ಯವಿವರಗಳನ್ನು ಹೆಚ್ಚಾಗಿ ಕೊಟ್ಟು ಪುಟ ತುಂಬಿಸುವುದೆಂದರೆ ಇವರಿಗಾಗದು. ಯಾವ ಪಾತ್ರವನ್ನೂ ಅವರ ರೂಪ, ಎತ್ತರ, ಅಗಲ ಇತ್ಯಾದಿಗಳನ್ನು ತಿದ್ದಿ ತೀಡಿ ಬರೆಯುವುದಿಲ್ಲ. ಪಾತ್ರಗಳ ಊಹೆಯ ಸ್ವಾತಂತ್ರ್ಯವನ್ನು ನಮಗೇ ಬಿಡುತ್ತಾರೆ…

Read More

ನಾಟಕವೆಂದರೆ ಶೃತಿಗೆ ಅಣಿಗೊಳಿಸಿದ ವೀಣೆಯಂತೆ

ರಂಗದ ಕಾಯಕ ಅಂದರೆ ಮೊದಲು ನಮ್ಮ ಮನೋಧರ್ಮ ಗುರುತಿಸಿಕೊಂಡು ನಾಟಕ ಕಟ್ಟಿ ಅದು ಪ್ರೇಕ್ಷಕರ ಕಣ್ಣುಗಳ ಫ್ರೇಮಿನಲ್ಲಿ ಸರಿಯಾಗಿ ಫಿಟ್ಟಾಗುತ್ತದೆಯೇ ಎಂದು ಅಂದಾಜು ಮಾಡಿಕೊಳ್ಳಬೇಕು. ನಂತರ ಜನರಿಗೆ ಕಾಯಬೇಕು. ಪಾರ್ಕಿಂಗ್ ಕಡೆ ಕಣ್ಣು ಹಾಯಿಸುತ್ತಿರಬೇಕು. ಇಷ್ಟಾದ ಮೇಲೆ ಭರ್ಜಿಯ ಮೊನೆಗಳಿಗೆ ಮೈ ಒಡ್ಡಿ ನಿಲ್ಲಬೇಕು ಮತ್ತು ನೋವಿನಲ್ಲೂ ನಗಬೇಕು. ನಗಲು ಸಾಧ್ಯವಾಗದಿದ್ದರೆ ಮನಸ್ಸಿನ ಹದ ಕೆಡುತ್ತದೆ. ಮನಸ್ಸು ಕೆಟ್ಟರೆ ಬದುಕಿನ ನೋಟಕ್ರಮದ ಜಾಡು ತಪ್ಪುತ್ತದೆ. ಒಟ್ಟು ಚಿತ್ರವೇ ಕಲಕಿಹೋಗುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಮತ್ತೆ…

Read More

ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡವನ ಕಥೆ

ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಅಳತೆಗಳನ್ನು ಯೋಜನೆಗಳನ್ನು ಮೀರಿ ಜೀವನದಲ್ಲಿ ಏನೋ ಘಟಿಸುತ್ತಿರುತ್ತದೆ. ಒಮ್ಮೊಮ್ಮೆ ಅದಕ್ಕೊಂದು ಅರ್ಥವೇ ಇರುವುದಿಲ್ಲ. ತರಗೆಲೆಯಂತೆ ತೂರಿ ಎತ್ತೆತ್ತಲೋ ಹಾರಿ ಮತ್ತೆಲ್ಲೋ ಮತ್ಯಾವುದೋ ಮಣ್ಣಿನಲ್ಲಿ ಸೇರಿ ಕೊಳೆತು ಹೋಗಿಬಿಡುವ ಹಾಗೆ ಅನಿಸುತ್ತದೆ. ಬದುಕೇ ಹಾಗೆ! ಹುಡುಕುವಾಗ ನಾವು ಹುಡುಕುತ್ತಿರುವುದು ಸಿಗುವುದಿಲ್ಲ. ಹುಡುಕುವುದನ್ನು ನಿಲ್ಲಿಸಿದಾಗ ಧುತ್ತೆಂದು ತಂದು ಎಸೆಯುತ್ತದೆ. ಈ ಬದುಕಿಗೆ ಅರ್ಥ ಎನ್ನುವುದು ಇದೆಯೇ? ಈ ಬದುಕು ಅರ್ಥಗಳ ಹಂಗನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಿರುವ ಕವಿತೆಯೇ?

Read More

ನನಗೆ ಜಗತ್ತನ್ನು ಪರಿಚಯಿಸಿದ ಮಿಲೇನಿಯಂ ಸರಣಿ

ಆ ಸಮಯದಲ್ಲಿ ನನ್ನ ತರ್ಕ ಬಹಳ ಸರಳವಾಗಿತ್ತು. ಯಾರ್ಯಾರು ಮಕ್ಕಳ ಕಥೆ ಬರೆಯುತ್ತಾರೋ, ನನಗೆ ಅರ್ಥವಾಗುವಂತಹ ಪರಿಸರ, ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಸರಳವಾಗಿ ಬರೆಯುತ್ತಾರೋ ಅವರೆಲ್ಲಾ ಚಿಕ್ಕ ಲೇಖಕರು. ಯಾರ ಬರಹಗಳು ಅರ್ಥವಾಗುವುದಿಲ್ಲವೋ, ಒಂದು ಪ್ಯಾರಾಕ್ಕಿಂತಲೂ ಜಾಸ್ತಿ ಓದಿಸಿಕೊಂಡು ಹೋಗುವುದಿಲ್ಲವೋ ಅವರೆಲ್ಲಾ ದೊಡ್ಡ ಲೇಖಕರು ಅನ್ನೋ ನಂಬಿಕೆಯಲ್ಲಿದ್ದೆ. ಆದರೆ ತೇಜಸ್ವಿಯವರ ಬರಹಗಳು ಈ ನಂಬಿಕೆಯನ್ನು ಸಡಿಲಗೊಳಿಸಿದವು.

Read More

ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್‌ ಪನಿಷ್ಮೆಂಟ್‌” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ