Advertisement

Category: ದಿನದ ಅಗ್ರ ಬರಹ

ನೌಕರಿ ಬಿಟ್ಟ ಎಂ.ಟೆಕ್ ಪದವೀಧರ ಬಾವಿ ತೋಡಿದ: ಸಿದ್ದು ಸತ್ಯಣ್ಣನವರ ಬರಹ

ಸೂರ್ಯಕಾಂತ್ ಕೃಷಿಯೆಡೆಗಿನ ಸೆಳೆತ ಇತ್ತಲ್ಲ, ಅದೇನೂ ಸಣ್ಣದಲ್ಲ. ಆದರೆ ನೀರಿಲ್ಲದೆ ಕೃಷಿ ಕೆಲಸ ಮಾಡುವುದು ಹೇಗೆ? ಅದಕ್ಕಾಗಿ ಬೋರ್‍ವೆಲ್ ಉತ್ತರದಂತೆ ಕಾಣಿಸಿದರೂ ಅದು ಪರಿಹಾರವಾಗಿ ಕಾಣಲಿಲ್ಲ. ಅದಕ್ಕಾಗಿ ಬೋರ್‍ವೆಲ್ ಹಾಕಿಸಲು ಆತನ ಮನಸ್ಸು ಒಪ್ಪಲಿಲ್ಲ. ಸತತ ಐದು ತಿಂಗಳು ಒಬ್ಬರೇ ಬಾವಿ ತೋಡಿದರು. ಮೈಗೆ ಗಾಯ, ನೋವು ಎಲ್ಲಾ ಆದವು. ಆಗ ಜನರ ಪ್ರತಿಕ್ರಿಯೆ ಇತ್ತಲ್ಲ, ಅದು ಇರಿದದ್ದು ಮನಸ್ಸಿಗೆ; ಎಲ್ಲಾ ಗಾಯಕ್ಕಿಂತ ಹೆಚ್ಚು ಕಾಡಿದ್ದು ಅದೇ ಎನ್ನುವುದು ಸೂರ್ಯಕಾಂತ್ ಮನದಾಳ.
ಸಿದ್ದು ಸತ್ಯಣ್ಣವರ ಹೊಸ ಕೃತಿ “ಬೆಳಕಿನ ತೆನೆ”ಯ ಒಂದು ಬರಹ ನಿಮ್ಮ ಓದಿಗೆ

Read More

ಸುಲಭವಾಗಿಯೇ ಬಿದ್ದ ಸೀಲು!: ಗುರುಪ್ರಸಾದ ಕುರ್ತಕೋಟಿ ಸರಣಿ

ಚೆನ್ನೈನಲ್ಲಿ ತಮಿಳು ಬರದಿದ್ದರೆ ತುಂಬಾ ಕಷ್ಟ ಅಂತ ಗೊತ್ತಿತ್ತು. ಕಾರಿನಲ್ಲಿಯೇ ಅಲ್ಲಿಗೆ ಹೊಗಿದ್ದ ನಾವು ಅಲ್ಲೊಬ್ಬರಿಗೆ ಹೊಟೇಲ್‌ಗೆ ಹೇಗೆ ಹೋಗೋದು ಅಂತ ಮಾರ್ಗದರ್ಶನ ಕೇಳಿದ್ದಕ್ಕೆ ತಮಿಳಿನಲ್ಲೇ ವಿವರಣೆ ನೀಡಿದರು. ತಮಿಳು ಬರೋದಿಲ್ಲ ಅಂತ ಹೇಳುವಷ್ಟು ಮಾತ್ರ ತಮಿಳು ಕಲಿತಿದ್ದ ನಾನು ಹಾಗೆ ಹೇಳಿ ಅವರ ಬಳಿ ಹಿಗ್ಗಾಮುಗ್ಗ ಬೈಸಿಕೊಂಡೆ. ಚೆನ್ನೈಗೆ ಬಂದವರು ಯಾಕೆ ಬೇಗನೆ ತಮಿಳು ಕಲಿಯುತ್ತಾರೆ ಅಂತ ಆಗ ನನಗೆ ತಿಳಿಯಿತು! ಬೆಂಗಳೂರಿನಲ್ಲೂ ಕನ್ನಡ ಮಾತಾಡದ ನಮ್ಮ ಕನ್ನಡಿಗರಿಗೆ ಹೀಗೆಯೇ ಬೈಯಬೇಕು ಅಂತ ಅಂದುಕೊಂಡೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ನಾಲ್ಕನೆಯ ಬರಹ

Read More

ಕಲಿತ ಬುದ್ಧಿಗಳೇ ನಮ್ಮ ನೆರಳು: ಎಸ್ ನಾಗಶ್ರೀ ಅಜಯ್ ಅಂಕಣ

ಎಷ್ಟೋ ಜನ ಸರಳತೆ, ಸಹೃದಯತೆ, ಸಹನೆ, ಕರುಣೆಯನ್ನು ನಂಬದೆ ಡಂಭಾಚಾರ, ನಾಟಕ, ಕೃತಕತೆ ಎಂಬ ಹಣೆಪಟ್ಟಿ ಕಟ್ಟಿ ಸಂಶಯದಿಂದಲೇ ಎದುರುಗೊಳ್ಳುತ್ತಾರೆ. ಹಣದೊಂದಿಗೆ ಮದ, ಅಧಿಕಾರದೊಂದಿಗೆ ದರ್ಪ, ಶ್ರೀಮಂತಿಕೆಯೊಂದಿಗೆ ಖಾಯಿಲೆ, ಬಡತನದೊಂದಿಗೆ ನೆಮ್ಮದಿ ಇದ್ದಿರಲೇಬೇಕೆಂದು ಭಾವಿಸಿರುತ್ತಾರೆ. ಅತ್ಯಂತ ರಂಜನೀಯವಾಗಿ ಅದನ್ನು ಬಣ್ಣಿಸಿಯೂ ತೋರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಭಿನ್ನ. ಪ್ರತಿಯೊಬ್ಬರ ಪರಿಸ್ಥಿತಿಯೂ ಭಿನ್ನ. ಒಂದೇ ಅಚ್ಚಿನಲ್ಲಿ ಅಳೆದು, ಸುರಿದು ತಯಾರಾದ ಬದುಕಲ್ಲ ಎಲ್ಲರದ್ದು.
ಎಸ್.‌ ನಾಗಶ್ರೀ ಅಜಯ್‌ ಬರೆಯುವ ‘ಲೋಕ ಏಕಾಂತ’ ಅಂಕಣ

Read More

ಕನ್ನಡತನ ಜ್ವಲಿಸುವ ವಿಶೇಷ ತಿಂಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗ ದಂಪತಿಗಳ ಮಕ್ಕಳು ಕನ್ನಡದಲ್ಲಿ ಮಾತನಾಡುವುದು ಕಡಿಮೆ. ಒಂದುವೇಳೆ ಅವರು ಕಷ್ಟಪಟ್ಟು ಪ್ರಯತ್ನಿಸಿದರೂ ಅವರುಗಳು ಪ್ರತಿದಿನವೂ ಮಾತನಾಡುವ ಆಸ್ಟ್ರೇಲಿಯನ್ ಇಂಗ್ಲಿಷ್ ಉಚ್ಚಾರದ ಪ್ರಭಾವದಲ್ಲಿ ತಮ್ಮ ಕನ್ನಡವನ್ನು ಹೊರಡಿಸಿದಾಗ ಮಿಶ್ರಿತ ಭಾವಗಳು ಏಳುತ್ತವೆ. ಕರ್ನಾಟಕದಲ್ಲಿಯೇ ಹುಟ್ಟಿ ಕೆಲವರ್ಷ ಅಪ್ಪಟ ಕನ್ನಡತನದಲ್ಲಿ ಅಲ್ಲಿಯೇ ಬೆಳೆದು ತಮ್ಮ ಬಾಲ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಮಕ್ಕಳು ಕೆಲವೇ ವರ್ಷಗಳಲ್ಲಿ ಆಸ್ಟ್ರೇಲಿಯನ್ ಇಂಗ್ಲಿಷ್ – ಕನ್ನಡವನ್ನು ರೂಢಿಸಿಕೊಳ್ಳುತ್ತಾರೆ. ಅಪ್ಪ-ಅಮ್ಮ ಕನ್ನಡದಲ್ಲಿ ಮಾತನಾಡಿಸುವಾಗ ಈ ಮಕ್ಕಳು ಇಂಗ್ಲೀಷಿನಲ್ಲಿ ಉತ್ತರಿಸುವುದು ಸರ್ವೇಸಾಮಾನ್ಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕಾವೇರಿ ಉಗಮದೊಂದಿಗೆ ಮಡಿಕೇರಿ ದಸರಾ ವೈಭವ: ಸುಮಾವೀಣಾ ಸರಣಿ

ಹೇಗೆ ಉತ್ತರದಲ್ಲಿ ಗಂಗೆಯೋ ಹಾಗೆ ದಕ್ಷಿಣದಲ್ಲಿ ಕಾವೇರಿ. ದಕ್ಷಿಣದವರಿಗೆ ಈಕೆ ಜೀವ ನದಿಯೂ ಹೌದು! ಭಾವನದಿಯೂ ಹೌದು! ಕವಿರಾಜಮಾರ್ಗಕಾರ ಕನ್ನಡ ನಾಡಿನ ವಿಸ್ತಾರವನ್ನು ಹೇಳುವಾಗ ಕಾವೇರಿಯಿಂದ ಗೋದಾವರಿಯವರೆಗೆ ಎಂದಿದ್ದಾನೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ