Advertisement

Category: ದಿನದ ಪುಸ್ತಕ

ಸಂಸ್ಕೃತಿ ಕಥನವೇ ಆಗಿಬಿಡುವ ಬಾಲ್ಯದ ನೆನಪುಗಳ ಹೊತ್ತಿಗೆ

”ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ”

Read More

ಮೇದಿನಿ ಕವನ ಸಂಕಲನಕ್ಕೆ ಎಸ್.ಆರ್.ವಿಜಯಶಂಕರ್ ಮುನ್ನುಡಿ

“ಭಾವವು ಪ್ರೇಮವಾಗುವುದು ಸಹಜ ಬೆಳವಣಿಗೆ. ಪ್ರೇಮದ ಮುಂದಿನ ಹಂತ ಜೊತೆಯಾದ ಬದುಕು. ಅದು ವಾಸ್ತವ. ಆದರೆ ವಾಸ್ತವದಲ್ಲಿ ಭಾವದ ಬೀಜ ಭಿನ್ನ ರೂಪದಲ್ಲಿ ಇರುತ್ತದೆ. ಮೊಳಕೆ ಬೀಜದಿಂದ ಹುಟ್ಟಿದ್ದೇ ಆದರೂ ಅದು ಬೀಜವಲ್ಲ. ಲೋಕದ ಸತ್ಯದ ಇಂತಹ ಹಲವು ನೆಲೆಗಳ ಅರಿವು ಕವಯಿತ್ರಿಗಿದೆ.”

Read More

ಕಥನಗಾರಿಕೆಯ ಬೈನಾಕ್ಯುಲರ್ ನಲ್ಲಿ ಕಂಡ ಗತ ಮತ್ತು ವರ್ತಮಾನಗಳು:ವಿಕ್ರಮ್ ಕಥೆಗಳ ಕುರಿತು ಗೀತಾ ವಸಂತ

ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.

Read More

ಭಾರವಿಲ್ಲದ ಸಹಜತೆಯಲ್ಲಿ ಮನುಷ್ಯರ ಸಾಮಾನ್ಯತನವನ್ನು ಹೇಳುವ ಕಥೆಗಳು

“ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿ ಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು …”

Read More

ದೀಪ್ತಿ ಭದ್ರಾವತಿ ಕಥಾಸಂಕಲನಕ್ಕೆ ಎಸ್.ಎನ್.ಸೇತುರಾಮ್ ಬರೆದ ಮುನ್ನುಡಿಯ ಮಾತುಗಳು

“ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ