ಅಂತ್ಯವಿಲ್ಲದೊಂದು ಕತೆ: ನಿ”ಶಾಂತ” ಬರಹ
ಆಮೇಲೆ ಬರುಬರುತ್ತಾ ನಮ್ಮ ಭೇಟಿಯ ದಿನಗಳು ಕ್ಷೀಣಿಸಿದವು. ಆದರೂ ಯಾಕೋ ಆ ಕಾರಣಕ್ಕೆ ಇಬ್ಬರೂ ಜಗಳ ತೆಗೆಯುವುದನ್ನು ನಿಲ್ಲಿಸಿದ್ದೆವು. ಒಬ್ಬರು ಸಿಗ್ತಿಯಾ ಅಂದಾಗ, ಬೆಂಗಳೂರಿನ ಆ ತುದಿಯಲ್ಲಿದ್ದರೂ ಬಂದು ಭೇಟಿ ಮಾಡಿಹೋಗುತ್ತಿದ್ದೆವು. ಮತ್ತೆ ಮುಂದಿನ ಭೇಟಿ ಬಗ್ಗೆ ಮಾತೇ ಇಲ್ಲ… ಸುಮ್ಮನೇ ನಮ್‌ನಮ್ಮ ಕೆಲಸಗಳ ಕುರಿತು, ಮನೆಯ ಪರಿಸ್ಥಿತಿಗಳ ಕುರಿತ ಮಾತಷ್ಟೇ. ಅಲ್ಲಿ ಯಾವುದೇ ಕವಿತೆಗೂ, ಗಜಲ್‌ಗೂ ಅವಕಾಶವಿರುತ್ತಿರಲಿಲ್ಲ. ಅದು ಇಬ್ಬರಿಗೂ ಬೇಕಾಗೂ ಇರಲಿಲ್ಲವೆನ್ನಿಸುತ್ತೆ. ಹಾಗಾಗಿ ಮೂರು ವರ್ಷಗಳ ಒಡನಾಟದ ಸಲುವಾಗಿಯಾದರೂ ಒಂದು ಗುಡ್‌ಬೈ ಸಹ ಹೇಳದೇ ನಮ್ಮ ನಮ್ಮ ಬದುಕಿನ ಹಾದಿಯಲ್ಲಿ ಸಿಕ್ಕ ತಿರುವುಗಳಲ್ಲಿ ನಡೆದುಹೋಗಿಬಿಟ್ಟಿದ್ದೆವು.
“ದಡ ಸೇರದ ದೋಣಿ” ಹೊಸ ಸರಣಿಯಲ್ಲಿ ಅಂತ್ಯ ಸಿಕ್ಕದ ಪ್ರೇಮವೊಂದರ ಕುರಿತು ನಿ”ಶಾಂತ” ಬರಹ
