Advertisement

Category: ಸರಣಿ

ರೆಂಬ್ರಾಂಟ್‌ನ ಕಣ್ಣಿಗೆ ಬಿದ್ದ ಹಾನ್ಸ್‌ಕೆನ್ ಎಂಬಾನೆಯ ಕತೆ-ವ್ಯಥೆ

ಬಿಗ್ ಬೇಬಿ ಕೆಡಾಕೆಸ್‌ನಲ್ಲಿ ಬಂದಿಳಿದಾಗ ಅವನನ್ನು ಭಾರೀ ಸಂಭ್ರಮದಿಂದ ಸ್ವಾಗತಿಸಲಾಯಿತು. ಆ ಸಂಭ್ರಮಾಚರಣೆಯ ಅಂಗವಾಗಿ ಪಟ್ಟಣದ ಮೇಯರ್ ಶಾಲಾ ಕಾಲೇಜುಗಳಿಗೆ ಮೂರು ದಿನದ ರಜೆಯನ್ನೂ ಘೋಷಿಸಿದನಂತೆ. ಮುಂದಿನ ಕೆಲ ತಿಂಗಳ ಕಾಲ, ನಮ್ಮ ಬೆಂಗಳೂರಿನ ಬಿಗ್ ಬೇಬಿ, ತನ್ನೆಲ್ಲಾ ಕುಟುಂಬದವರಿಂದ ಬೇರಾಗಿ, ಸ್ಪೇನಿನ ಸಾಲ್ವಡಾರ್ ಡಾಲಿಯ ಖಾಸಗಿ ಉದ್ಯಾನದಲ್ಲಿ ಒಬ್ಬನೇ ಸುತ್ತಾಡಿದನಂತೆ. ಆದರೆ, ಅವನು ಬೆಳೆದಂತೆ, ನೋಡಿಕೊಳ್ಳುವುದು ಕಷ್ಟವಾಗಿ, ಬಾರ್ಸೆಲೋನಾ ನಗರದ ಮೃಗಾಲಯಕ್ಕೆ ಅವನನ್ನು ರವಾನಿಸಲಾಯಿತಂತೆ.

Read More

ಸಹಜತೆಯ ದುಕೂಲವುಟ್ಟ ಪರ್ವ ನಾಟಕದ ಸುತ್ತ

‘ಪರ್ವ’ ನಾಟಕ ನನಗೆ ಇಷ್ಟವಾದದ್ದು ‘ಯಮ’ನನ್ನು ಸಹಜ ಮನುಷ್ಯನನ್ನಾಗಿ ಬಿಂಬಿಸುವ ಬಗೆಯಲ್ಲೇ ಇಡೀ ಪ್ರಯೋಗವನ್ನು ಸಿದ್ಧಮಾಡಿದ್ದ ಬಗೆಯಿಂದ. ಯಾವ ಪಾತ್ರವನ್ನೂ ಪುರಾಣ ಚಿತ್ರಿಸಿರುವ ಭಯಂಕರ ಯಮನನ್ನಾಗಿಸಲು ಮುಂದಾಗಿಲ್ಲ. ಎಲ್ಲೋ ಒಂದೆರಡು ಕಡೆ ಸಂಜಯನನ್ನು ಇಂದಿನ ವಾಹಿನಿಗಳ ಸುದ್ದಿ ವಾಚಕನ ರೀತಿಯಲ್ಲಿ ಸಂಗೀತ ಸಮೇತ ಬಿಂಬಿಸಿದ್ದು ಕೊಂಚ ಮಸಾಲೆ ಬೆರೆಸಿದಂತೆ ಅನಿಸಿತು.- ಪರ್ವ ನಾಟಕದ ಕುರಿತು ಎನ್. ಸಿ. ಮಹೇಶ್  ಬರೆದಿದ್ದಾರೆ

Read More

ನಾವು ಬೆಳಕಾಗಿರಬೇಕು ಇಲ್ಲವೆ ಶಾಂತವಾಗಿರಬೇಕು

ಮಾನವ ಸಹಜವಾಗಿ ಸೆಕ್ಯೂಲರ್ ಆಗಿರುತ್ತಾನೆ. ಆದರೆ ಅವನನ್ನು ಪ್ರಜ್ಞಾಪೂರ್ವಕವಾಗಿ ಕಮ್ಯೂನಲ್ ಮಾಡಿದರೂ ಅದು ಬಹಳದಿನ ಬಾಳಿಕೆ ಬರುವುದಿಲ್ಲ. ಮತ್ತೆ ಮತ್ತೆ ಜನ ಸಹಜತೆಯನ್ನು ಬಯಸುತ್ತಲೇ ಇರುತ್ತಾರೆ. ಹೀಗಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಆಟ ನಿರಂತರವಾಗಿ ನಡೆಯುವುದಿಲ್ಲ. ಜನರು ವಿವಿಧ ಜಾತಿ ಮತ್ತು ಧರ್ಮಗಳ ಚೌಕಟ್ಟಿನಲ್ಲಿ ಸಿಲುಕಿದ್ದರೂ ದೈನಂದಿನ ಬದುಕಲ್ಲಿ ಇವೆಲ್ಲವುಗಳನ್ನು ಮೀರಿದವರೇ ಆಗಿರುತ್ತಾರೆ. ರಂಜಾನ್ ದರ್ಗಾ ‘ನೆನಪಾದಾಗಲೆಲ್ಲ ‘ ಸರಣಿಯ  20ನೇ ಕಂತಿನಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಅನಾವರಣಗೊಳಿಸಿದ್ದಾರೆ.

Read More

ಮಕ್ಕಳನ್ನು ಓದಿಸಿದ ಮಾವಿನಮರಗಳು

ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್‌ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್‌ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್‌ ಕೊಡಿಸುತ್ತಿತ್ತು.

Read More

ಈ ಮಾಣಿ ಎಂತಕ್ಕೂ ಪ್ರಯೋಜನವಿಲ್ಲ…

ಅಜ್ಜ ಬಲಿಪರು ಪದ್ಯ ಹೇಳಿಕೊಡುತ್ತಿದ್ದ ಶೈಲಿ ಅನನ್ಯವಾದದ್ದು, ಇನ್ನೊಬ್ಬರು ಅನುಸರಣೆ ಮಾಡಲಾಗದ್ದು. ಪದ್ಯವನ್ನು ಬಾಯಿಯಲ್ಲಿ ಹೇಳುತ್ತಾ ಎರಡೂ ಕೈಯ್ಯಲ್ಲಿ ಪದ್ಯದ ಛಂದೋಗತಿಯನ್ನು ತೋರಿಸುತ್ತಾ ಇರುವಂತೆಯೋ ಎನ್ನುವಂತೆ ಅಥವಾ ಪದ್ಯ ನಿಬದ್ಧವಾದ ತಾಳದ ಘಾತಗಳನ್ನು ಹಸ್ತದ ಬೀಸುವಿಕೆಯಿಂದ ತೋರಿಸುತ್ತಾ ಹೇಳಿಕೊಡುತ್ತಿದ್ದರು.
ಇದರಿಂದ ಸಹಜವಾಗಿ ಅವರ ಶರೀರದ ಭಾಷೆಯೂ ಶಾರೀರದ ಭಾಷೆಯೂ ಕಲಿಯುತ್ತಿರುವ ಮೊಮ್ಮಗ ಕಿರಿಯ ಬಲಿಪರಲ್ಲಿ ಹಾಡಿನ ಅಂತರ್ಯವಾದ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ