ಅಪ್ರವಾಸ: ಕೆ. ಸತ್ಯನಾರಾಯಣ ಕಥಾ ಸರಣಿ
ಮಹಾದೇವಪ್ಪನವರ ಎದುರಿಗೆ ಹೋಗಿ ನಿಂತುಕೊಂಡೆ. ಲೆಕ್ಕ ಸರಿಯಾಗಿ ಮಾಡಿಲ್ಲದ ಹುಡುಗರನ್ನು ಸಾಲಾಗಿ ನಿಲ್ಲಿಸಿಕೊಂಡು, ಒಬ್ಬೊಬ್ಬರನ್ನೇ ಕರೆದು, ಸಣ್ಣ ಬೆತ್ತದ ಕಡ್ಡಿಯಲ್ಲಿ ಛಡಿ ಏಟು ಕೊಡುತ್ತಿದ್ದರು. ನಾನು ಕೂಡ ಸಾಲಿನಲ್ಲಿ ನಿಂತುಕೊಂಡೆ. ಬಾಯಿ ಬಿಡಲು ಧೈರ್ಯವೇ ಬರಲಿಲ್ಲ. ನಾನು ಮಾಡಿರುವ ಲೆಕ್ಕ ಸರಿಯಾಗಿದೆ ಎಂದು ಕೆಂಪೇಗೌಡ ಮೇಷ್ಟರು ರೈಟ್ ಮಾರ್ಕ್ ಹಾಕಿಕೊಟ್ಟಿದ್ದರು. ಆದರೆ ನಾನು ಮನೆಯಲ್ಲಿ ಅಪ್ಪ ಹೇಳಿದ್ದನ್ನು ಹೇಳೋಕೆ ನಿಂತಿದ್ದೆ. ನಿಂತಿದ್ದ ಹಾಗೇ ಧೈರ್ಯ ಉಡುಗಿ ಹೋಯಿತು. ಸಾಲಿನಲ್ಲಿ ನಿಂತಿರುವುದರಿಂದ ನಾನು ಕೂಡ ಲೆಕ್ಕ ಸರಿಯಾಗಿ ಮಾಡಿಲ್ಲವೆಂದು ತಿಳಿದು ಹೊಡೆದುಬಿಟ್ಟರೆ ಅಂತ ಭಯ ಹೆಚ್ಚಾಗಿ ಹಿಂದಕ್ಕೆ ಸರಿದೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

